ಅಣ್ಣನಂತೆ ಕ್ರೂರಿ ಕಿಮ್ ತಂಗಿ, ದ. ಕೊರಿಯಾಗೆ ಧಮ್ಕಿ!

First Published Jun 14, 2020, 6:40 PM IST

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ತಂಗಿ ಕಿಮಗ ಯೋ ಜಾಂಗ್ ಮತ್ತೊಮ್ಮೆ ಭಾರೀ ಚರ್ಚೆ ಹುಟ್ಟು ಹಾಕಿದ್ದಾರೆ. ಈ ಬಾರಿ ಅವರು ತನ್ನ ಅಣ್ಣನಂತೆ ಹುಚ್ಚು ವರ್ತನೆಯಿಂದ ಮಾಧ್ಯಮಗಳಲ್ಲಿ ಸದ್ದು ಮಾಡಿದ್ದಾರೆ. ಕಿಮ್ ಯೋ ಜಾಂಗ್ ದಕ್ಷಿಣ ಕೊರಿಯಾದಲ್ಲಿ ಹಾರಿಸಿರುವ ದೇಶ ವಿರೋಧಿ ಬಲೂನ್‌ ಬಗ್ಗೆ ಧಮ್ಕಿ ಹಾಕಿದ್ದಾರೆ. ದಕ್ಷಿಣ ಹಾಗೂ ಉತ್ತರ ಕೊರಿಯಾ ನಡುವಿನ ಸಂಬಂಧ ದಿನೇ ದಿನೇ ಹದಗೆಡುತ್ತಿದೆ. ಹೀಗಿರುವಾಗ ಕಿಮ್ ದಕ್ಷಿಣ ಕೊರಿಯಾ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಧಮ್ಕಿ ಹಾಕಿದ್ದಾರೆ. ಹಾಗಾದ್ರೆ ಈ ಕಿಮ್ ಯೋ ಜಾಂಗ್ ಯಾರು? ಉತ್ತರ ಕೊರಿಯಾದಲ್ಲಿ ಅವರಿಗಿರುವ ಮಹತ್ವವೇನು? ಇಲ್ಲಿದೆ ವಿವರ.
 

ಕಿಮ್ ಯೋ ಜಾಂಗ್ ದಕ್ಷಿಣ ಕೊರಿಯಾವನ್ನು ಶತ್ರುವಾಗಿಸಿಕೊಂಡಿದ್ದಾರೆ. ದಕ್ಷಿಣ ಕೊರಿಯಾ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳಬೇಕೆಂದು ನಿರ್ಧರಿಸುವ ಹೊಣೆ ನಾನು ಸೈನ್ಯಾಧಿಕಾರಿಗಳಿಗೆ ಕೊಡುತ್ತೇನೆ. ಸುಪ್ರೀಂ ಲೀಡರ್ ಹಾಗೂ ದೇಶದ ಜನತೆ ನಮ್ಮ ಪಕ್ಷಕ್ಕೆ ನೀಡಿರುವ ಶಕ್ತಿಯನ್ನು ಬಳಸಿ ಶತ್ರುಗಳ ವಿರುದ್ಧ ಸೇನೆಯ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾನು ಆದೇಶಿಸುತ್ತೇನೆ ಎಂದಿದ್ದಾರೆ.
undefined
ಉತ್ತರ ಕೊರಿಯಾ ಹಾಗೂ ದಕ್ಷಿಣ ಕೊರಿಯಾ ನಡುವೆ ಒಂದು ಸಂಪರ್ಕ ಕೊಂಡಿ ಇದೆ. ಇದು ಸದ್ಯ ಕೊರೋನಾದಿಂದಾಗಿ ಮುಚ್ಚಲ್ಪಟ್ಟಿದೆ. ಇದನ್ನು 2018ರಲ್ಲಿ ಕಿಮ್ ಜಾಂಗ್ ಉನ್ ಹಾಗೂ ದಕ್ಷಿಣ ಕೊರಿಯಾದ ರಾಷ್ಟ್ರಪತಿ ಮುನ್‌ ಜೆಯೀ ನಡುವೆ ನಡೆದ ಮಾತುಕತೆ ಬಳಿಕ ನಿರ್ಮಿಸಲಾಗಿತ್ತು. ಸದ್ಯ ಸರ್ವಾಧಿಕಾರಿಯ ತಂಗಿ ದಕ್ಷಿಣ ಕೊರಿಯಾ ಈ ಅನಗತ್ಯ ಸಂಪರ್ಕ ಕಚೇರಿಯನ್ನು ಮುಚ್ಚುವುದಕ್ಕೆ ಸಾಕ್ಷಿಯಾಗುತ್ತದೆ ಎಂದಿದ್ದಾರೆ.
undefined
ಇದಕ್ಕೂ ಮೊದಲು ಉತ್ತರ ಕೊರಿಯಾ ವಿರೋಧಿ ಬಲೂನ್‌ಗಳನ್ನು ಕಿಮ್ ಯೋ ಜಾಂಗ್ ಆದೇಶದ ಮೇರೆಗೆ ದಕ್ಷಿಣ ಕೊರಿಯಾ ತಾನು ಈ ವಿರೋಧಿ ಪ್ರತಿಭಟನೆಯನ್ನು ತಡೆಯಲು ಯತ್ನಿಸುವುದಾಗಿ ಹೇಳಿತ್ತು. ಕಿಮ್ ಯೋ ಜಾಂಗ್ ಚರ್ಚೆ ಹುಟ್ಟು ಹಾಕಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ಇತ್ತೀಚೆಗಷ್ಟೇ ಕಿಮ್ ಜಾಂಗ್ ಉನ್ ಸಾವಿನ ವದಂತಿ ವೇಳೆಯೂ ಚರ್ಚೆಯಲ್ಲಿದ್ದರು.
undefined
ಕಳೆದ ಕೆಲ ದಿನಗಳ ಹಿಂದಷ್ಟೇ ಕಿಮ್ ಜಾಂಗ್ ತಂಗಿಯನ್ನು ಪ್ರಮುಖ ನಿರ್ಧಾರ ಕೈಗೊಳ್ಳುವ ಏಜೆನ್ಸಿಗೆ ನೇಮಕ ಮಾಡಲಾಗಿತ್ತು. ಇದಾದ ಬಳಿಕವೇ ಕಿಮ್ ಯೋ ಜಾಂಗ್ ಉತ್ತರ ಕೊರಿಯಾದ ಎರಡನೇ ಪ್ರಮುಖ ನಾಯಕಿಯಾಗುತ್ತಾರೆಂದು ಅಂದಾಜಿಸಲಾಗಿತ್ತು. ಇದಾದ ಬಳಿಕ ಕಿಮ್ ಯೋ ಜಾಂಗ್ ದೇಶದಲ್ಲಿ ಪ್ರಭಾವ ಹೆಚ್ಚಾಯ್ತು.
undefined
ಮಾಧ್ಯಮಗಳ ವರದಿಯನ್ವಯ ಕಿಮ್ ಯೋ ಜಾಂಗ್ ತನ್ನ ಅಣ್ಣನ ಆಪ್ತ ಅಲಹಹೆಗಾರ್ತಿಯಾಗಿ ದೀರ್ಘ ಕಾಲದಿಂದ ಕಾರ್ಯ ನಿರ್ವಹಿಸಿದ್ದಾರೆ. ಅವರನ್ನು ಮತ್ತೊಮ್ಮೆ ಕೇಂದ್ರ ಸಮಿತಿಯ ರಾಜಕೀಯ ಬ್ಯೂರೋನ ಸದಸ್ಯರಾಗಿ ಆಯ್ಕೆ ಮಾಡಿದ್ದಾರೆ.
undefined
ತಂಗಿಯನ್ನು ನೇಮಕ ಮಾಡುವ ನಿರ್ಧಾರ ಅಣ್ಣ ಕಿಮ್ ಜಾಂಗ್ ಉನ್ ಅಧ್ಯಕ್ಷತೆಯ ಸಭೆಯಲ್ಲಿ ತೆಗೆದುಕೊಳ್ಳಲಾಗಿತ್ತು. ಆದರೆ ಇದಕ್ಕೂ ಮುನ್ನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇನೋಯಿ ಸಭೆ ವೇಳೆ ಅವರನ್ನು ಅಮಾನತ್ತುಗೊಳಿಸಲಾಗಿತ್ತು.
undefined
ಆದರೀಗ ಅವರ ಮರು ನೇಮಕಾತಿ ಅವರ ಪ್ರಭಾವ ಹೆಚ್ಚಿಸಿವೆ ಎಂಬ ಮಾತುಗಳು ಕೇಳಿ ಬಂದಿವೆ. ಅಲ್ಲದೇ ಕಿಮ್ ತನ್ನ ತಂಗಿಯನ್ನು ಎಲ್ಲರಿಗಿಂತ ಹೆಚ್ಚು ನಂಬುತ್ತಾರೆನ್ನಲಾಗಿದೆ.
undefined
ಕಿಮ್ ಯೋ ಜಾಂಗ್ 2018ರ ವಿಂಟರ್ ಒಲಿಂಪಿಕ್‌ನಲ್ಲಿ ತನ್ನ ಅಣ್ಣನ ಅನುಪಸ್ಥಿತಿಯಲ್ಲಿ ಉತ್ತರ ಕೊರಿಯಾ ನೇತೃತ್ವ ವಹಿಸಿದ್ದರು. ಇದಾದ ಬಳಿಕ ಅವರ ಪ್ರಭಾವ ಅವರ ಪಕ್ಷದಲ್ಲಿ ಇನ್ನಷ್ಟು ಹೆಚ್ಚಾಯ್ತು.
undefined
ಇನ್ನು ಉತ್ತರ ಕೊರಿಯಾ ಹಾಗೂ ವಿಶ್ವ ಇತರ ದೇಶದಲ್ಲಿ ಕಿಮ್ ಜಾಂಗ್ ಉನ್ ಹೆಸರು ಏಗೆ ಪ್ರಸಿದ್ಧಿ ಪಡೆದಿದೆಯೋ ಅವೆಲ್ಲದರ ಹಿಂದೆ ಅವರ ತಂಗಿ ಕಿಮ್ ಯೋ ಜಾಂಗ್ ತಲೆ ಇದೆ ಎನ್ನಲಾಗಿದೆ.
undefined
ಇನ್ನು ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕೂಡಾ ಓರ್ವ ಹುಚ್ಚು ದೊರೆ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಅವರು ದೇಶದ್ರೋಹದ ಆರೋಪದಡಿಯಲ್ಲಿ ತನ್ನದೇ ಚಿಕ್ಕಪಪ್ಪನನ್ನು ನೇಣಿಗೇರಿಸಿದ್ದರು.
undefined
click me!