ಇರಾನ್-ಇಸ್ರೇಲ್‌ ಯುದ್ಧ: ಭಾರತಕ್ಕೆ ರಫ್ತು, ಆಮದು ಆಗುವ ವಸ್ತುಗಳೇನು? ನಮ್ಮಲ್ಲಿ ಬೆಲೆ ಏರಿಕೆ ಆಗುತ್ತಾ?

Published : Mar 01, 2026, 01:03 PM IST

Iran Israel Conflict: ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧ ನಡೆಯುತ್ತಿದೆ. ಇದರ ಜೊತೆಗೆ ಬೇರೆ ರಾಷ್ಟ್ರಗಳು ಕೂಡ ಇಲ್ಲಿ ಮೂಗು ತೂರಿಸುತ್ತಿವೆ. ಇದರಿಂದ ಭಾರತದ ಆರ್ಥಿಕತೆ ಮೇಲೆ ಏನು ಪರಿಣಾಮ ಬೀರಲಿದೆ? ಇರಾನ್‌ನೊಂದಿಗೆ ಭಾರತದ ಸಂಬಂಧ ಹೇಗಿದೆ? ಏನೆಲ್ಲ ಪದಾರ್ಥ, ವಸ್ತುಗಳು ಆಮದು, ರಫ್ತು ಆಗುತ್ತವೆ?

PREV
14
ಇರಾನ್‌ನಿಂದ ಭಾರತಕ್ಕೆ ಆಮದು ಆಗುವ ವಸ್ತುಗಳು
  • ಬಾದಾಮಿ, ಪಿಸ್ತಾ, ಅಕ್ರೋಟ್ ( ವಾಲ್‌ನಟ್ )
  • ಸಾವಯವ ಮತ್ತು ಅಜೈವಿಕ ರಾಸಾಯನಿಕಗಳು
  • ಸೇಬು, ಖರ್ಜೂರ, ಕೇಸರಿ.
  • ಗಾಜಿನ ವಸ್ತುಗಳು, ಕೆಲವು ಖನಿಜ
24
ಭಾರತದಿಂದ ಇರಾನ್‌ಗೆ ರಫ್ತು ಆಗುವ ವಸ್ತುಗಳು
  • ಬಾಸ್ಮತಿ ಅಕ್ಕಿ ಒಟ್ಟು ರಫ್ತಿನ ಶೇ. 60ಕ್ಕೂ ಹೆಚ್ಚು ಪ್ರಮಾಣ,ಚಹಾ, ಸಕ್ಕರೆ, ಸೋಯಾಬೀನ್ ರಫ್ತು ಆಗುತ್ತವೆ
  • ವೈದ್ಯಕೀಯ ಉಪಕರಣಗಳು
  • ಕೈಗಾರಿಕಾ ಬಿಡಿಭಾಗಗಳು, ಎಲೆಕ್ಟ್ರಾನಿಕ್ ಉಪಕರಣಗಳು ರಫ್ತು ಆಗುತ್ತವೆ
34
ಬೆಲೆ ಏರಿಕೆ ಆಗುತ್ತಾ?

ಕಚ್ಚಾತೈಲ

ಇರಾನ್ ನೇರವಾಗಿ ಭಾರತಕ್ಕೆ ತೈಲ ನೀಡಲ್ಲ, ಆದರೆ ಯುದ್ಧದಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾಗುತ್ತದೆ. ಇದರಿಂದ ಭಾರತದಲ್ಲಿ ಪೆಟ್ರೋಲ್-ಡೀಸೆಲ್ ದರ ಹೆಚ್ಚಳ ಆಗುವುದು, ಇದರಿಂದ ಸಾರಿಗೆ ಸಂಪರ್ಕ ಕಷ್ಟವಾಗಿ ಬೇರೆ ವಸ್ತುಗಳ ಏರಿಕೆ ಕೂಡ ಹೆಚ್ಚಾಗುವುದು.

ಸಮುದ್ರ ಮಾರ್ಗದ ಸಮಸ್ಯೆ

ಹಾರ್ಮುಜ್ ಜಲಸಂಧಿ ಮೂಲಕ ಹಡಗು ಸಂಚಾರಕ್ಕೆ ಅಡ್ಡಿಯಾಗುವುದು, ಆಗ ಸರಕು ಸಾಗಣೆ ವೆಚ್ಚ, ವಿಮಾ ದರಗಳು ಹೆಚ್ಚಾಗುತ್ತವೆ.

44
ಯುದ್ಧ ಮುಂದುವರೆದರೆ?

ಒಣ ಹಣ್ಣುಗಳ ಕೊರತೆ

ಇರಾನ್‌ನಿಂದ ಬರುವ ಒಣ ಹಣ್ಣುಗಳ ಪೂರೈಕೆ ನಿಂತರೆ, ಅವುಗಳ ಬೆಲೆ ಇನ್ನಷ್ಟು ಹೆಚ್ಚಾಗುವುದು

ಈ ಯುದ್ಧವು ಮುಂದುವರಿದರೆ ಭಾರತದ ಹಣದುಬ್ಬರದ ಮೇಲೆ ಒತ್ತಡ ಬೀರುವುದು ಪಕ್ಕಾ. 

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories