ರಾತ್ರಿಯಿಡೀ ಎಣ್ಣೆ ಪಾರ್ಟಿ, ಮಜಾ ಮಾಡಿದವರಿಗೆ ನಾಲ್ಕೇ ದಿನದಲ್ಲಿ ಕೊರೋನಾ ಶಾಕ್!

First Published Mar 16, 2020, 12:17 PM IST

ಕೊರೋನಾ ರುದ್ರ ನರ್ತನಕ್ಕೆ ಇಡೀ ಜಗತ್ತೇ ಬೆಚ್ಚಿ ಬಿದ್ದಿದೆ. ಪ್ರತಿ ರಾಷ್ಟ್ರವೂ ತನ್ನ ನಾಗರಿಕರನ್ನು ಈ ಮಾರಕ ವೈರಸ್ ನಿಂದ ಕಾಪಾಡಲು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವಂತೆ ಸೂಚಿಸುತ್ತಿದೆ. ಭಾರತದಲ್ಲಿ ಕರೆ ಮಾಡುವಾಗ ಈ ಕುರಿತು ಜಾಗೃತಿ ಮೂಡಿಸುವ ಸಂದೇಶ ಬರುತ್ತಿರುವಂತೆ, ಇತರ ದೇಶಗಳೂ ವಿವಿಧ ರೀತಿಯಲ್ಲಿ ಈ ಕುರಿತು ಜಾಗೃತಿ ಮುಡಿಸುತ್ತಿವೆ. ಆದರೀಗ ಈ ಕ್ರಮಗಳನ್ನು ಗಂಭೀರವಾಗಿ ಪರಿಗಣಿಸದೆ, ಮಜಾ ಮಾಡಿದ 13 ಮಂದಿ ಕೊರೋನಾ ಕಪಿಮುಷ್ಠಿಯಲ್ಲಿ ಸಿಲುಕಿದ್ದಾರೆ.

ಹೌದು ಬ್ಯಾಂಕಾಕ್ ಪೋಸ್ಟ್ ನಲ್ಲಿ ಪ್ರಕಟವಾದ ವರದಿಯನ್ವಯ ಥಾಯ್ಲೆಂಡ್ ನ 13 ಮಂದಿ ಸ್ನೇಹಿತರಲ್ಲಿ ಈ ಭಯಾನಕ ವೈರಸ್ ಪತ್ತೆಯಾಗಿದೆ.
undefined
15 ಮಂದಿ ಸ್ನೇಹಿತರ ಗುಂಪು ಒಟ್ಟಾಗಿ ಇದ್ದರು. ಇವರೆಲ್ಲರೂ 25 ರಿಂದ 38 ವರ್ಷ ವಯೋಮಾನದವರು.
undefined
ಇವರಲ್ಲಿ ಕೆಲವರು ಹಾಂಗ್ ಕಾಂಗ್ ನಿಂದ ವ್ಯಕ್ತಿಯೊಬ್ಬನನ್ನು ಭೇಟಿಯಾಗಿದ್ದರು. ಆದರೆ ತಾವು ಭೇಟಿಯಾದ ವ್ಯಕ್ತಿ ಕೊರೋನ ಸೋಂಕಿತ ಎಂಬುವುದು ಅವರಿಗೆ ತಿಳಿದಿರಲಿಲ್ಲ.
undefined
ಅವರೆಲ್ಲರೂ ಫೆಬ್ರವರಿ 21 ಫೆಬ್ರವರಿಯಂದು ಕೊರೋನಾ ಪೀಡಿತ ವ್ಯಕ್ತಿಯನ್ನು ಭೇಟಿಯಗಿದ್ದರು. ಇದಾದ ಎರಡು ದಿನಗಳಲ್ಲಿ ಅಂದರೆ ಫೆ. 24ರಂದು ೆಲ್ಲರಲ್ಲೂ ಜ್ವರ ಹಾಗೂ ತಲೆನೋವು ಕಾಣಿಸಿಕೊಂಡಿದೆ.
undefined
ಇಷ್ಟಾದರೂ ಹೆಚ್ಚು ತಲೆ ಕೆಡಿಸಿಕೊಳ್ಳದ ಇವರೆಲ್ಲರೂ ಒಗ್ಗೂಡಿ ಫೆ. 27 ಹಾಗೂ 29ರಂದು ಭರ್ಜರಿ ಎಣ್ಣೆ ಪಾರ್ಟಿ ಮಾಡಿದ್ದಾರೆ.
undefined
15 ಮಂದಿ ಸೇರಿದ್ದ ಈ ಎಣ್ಣೆ ಪಾರ್ಟಿಯಲ್ಲಿ ಎಲ್ಲರೂ ಭರ್ಜರಿಯಾಗಿ ಮದ್ಯ ಸೇವಿಸಿದ್ದಲ್ಲದೇ, ಸಿಗರೇಟ್ ಕೂಡಾ ಸೇದಿದ್ದಾರೆ. ಅಲ್ಲದೇ ಇದನ್ನೇ ಪರಸ್ಪರ ಶೇರ್ ಮಾಡಿಕೊಂಡಿದ್ದಾರೆ.
undefined
ಇದಾದ ಬಳಿಕ ಇವರೆಲ್ಲರ ಆರೋಗ್ಯ ಮತ್ತಷ್ಟು ಬಿಗಡಾಯಿಸಿದ್ದು, ಮಾರ್ಚ್ 4 ರಂದು ಎಲ್ಲರನ್ನೂ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
undefined
ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದಾಗ ಎಲ್ಲರಲ್ಲೂ ಕೊರೋನಾ ಸೋಂಕು ಪತ್ತೆಯಾಗಿದೆ.
undefined
ಥಾಯ್ಲೆಂಡ್ ನಲ್ಲಿ ಈವರೆಗೆ 90ಕ್ಕೂ ಅಧಿಕ ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಈ ಪ್ರಕರಣಗಳು ಬೆಳಕಿಗೆ ಬಂದ ಬೆನ್ನಲ್ಲೇ ಇಲ್ಲಿ ಆರೋಗ್ಯ ಸಚಿವರು ಜನರಲ್ಲಿ ಜಾಗರೂಕರಾಗಿರುವಂತೆ ಮನವಿ ಮಾಡಿಕೊಂಡಿದ್ದಾರೆ.
undefined
click me!