ಪ್ಲೋರಿಡಾದಲ್ಲಿ ಶಾಕಿಂಗ್ ಘಟನೆಯೊಂದು ನಡೆದಿದ್ದು, ಮಹಿಳೆಯನ್ನು ಪರಿಶೀಲಿಸಲು ಬಂದಿದ್ದ ಪೊಲೀಸರು ಆಕೆ ಬಳಿ ಮೊಸಳೆ ಮರಿ ಇರುವುದನ್ನು ಪತ್ತೆ ಹಚ್ಚಿದ್ದಾರೆ.
ಹೌದು ಟ್ರಾಫಿಕ್ ಪೊಲೀಸ್ ಒಬ್ಬರು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯನ್ನು ತಪಾಸಣೆಗೆಂದು ತಡೆದಿದ್ರೆದಾರೆ. ಹೀಗಿರುವಾಗ ಆಕೆ ಧರಿಸಿದ್ದ ಯೋಗ ಪ್ಯಾಂಟ್‌ನಲ್ಲಿ ಮೊಸಳೆ ಮರಿ ಪತ್ತೆಯಾಗಿದೆ.
25 ವರ್ಷದ ಏರಿಯಲ್ ಮಚಾನ್ ಎಂಬಾಕೆ ಟ್ರಾಫಿಕ್ ನಿಯಮ ಉಲ್ಲಂಘಿಸಿ ಕಾರು ಚಲಾಯಿಸಿದ್ದಾಳೆ. ಹೀಗಿರುವಾಗ ಆಕೆಯ ಬೆನ್ನತ್ತಿದ ಪೊಲೀಸರು ಆಕೆಯನ್ನು ತಡೆಯುವಲ್ಲಿ ಯಶಶ್ವಿಯಾಗಿದ್ದಾರೆ.
ಪ್ಲೋರಿಡಾದ ಪಶ್ಚಿಮ ತಟದ ಶಾರ್ಲೆಟ್ ಕೌಂಟಿಯಲ್ಲಿ ಈ ಮಹಿಳೆಯಿಂದ ಪೊಲೀಸರು ಈ 41 ಆಮೆ ಮರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಆಮೆ ಮರಿಗಳು ಪತ್ತೆಯಾದ ಬೆನ್ನಲ್ಲೇ ಇದನ್ನು ಹೊರತುಪಡಿಸಿ ಬೇರೇ ಏನಾದರೂ ನಿಮ್ಮ ಬಳಿ ಇದೆಯೇ ಎಂದು ಪ್ರಶ್ನಿಸಿದಾಗ ಪ್ಯಾಂಟ್‌ನೊಳಗಿದ್ದ ಮೊಸಳೆ ಮರಿಯನ್ನು ಮಹಿಳೆ ತೆಗೆದು ಕೊಟ್ಟಿದ್ದಾಳೆ.
ವನ್ಯಜೀವಿಗಳನ್ನು ಸಾಗಿಸುತ್ತಿದ್ದ ಪ್ರಕರಣ ದಾಖಲಿಸಿರುವ ಪೊಲೀಸರು ಈ ಮಹಿಳೆಯನ್ನು ಜೈಲಿಗಟ್ಟಿದ್ದಾರೆ.