ತರಕಾರಿಯೊಳಗೆ ಕುಳಿತಿತ್ತು ಕಪ್ಪೆ: ಪಲ್ಯಕ್ಕೆ ರೆಡಿ ಮಾಡ್ತಿದ್ದ ಹೆಂಡತಿಯ ಬೊಬ್ಬೆ!

First Published Feb 18, 2020, 4:48 PM IST

ತಿಂಡಿ, ಊಟ ತಯಾರಿಸುವ ಮೊದಲು ತರಕಾರಿಯನ್ನು ಚೆನ್ನಾಗಿ ತೊಳೆಯಬೇಕೆಂದು ಹಿರಿಯರು ಹೇಳುತ್ತಾರೆ. ಖರೀದಿಸುವಾಗಲೂ ಸೂಕ್ಷ್ಮವಾಗಿ ಗಮನಿಸಬೇಕೆಂದು ಎಚ್ಚರಿಸುತ್ತಾರೆ. ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಕೆನಡಾದ ದಂಪತಿಯೊಂದು ಸೂಪರ್ ಮಾರ್ಕೆಟ್ ನಿಂದ ತರಕಾರಿ ಖರೀದಿಸಿತ್ತು. ಆದರೆ ಮನೆಗೆ ಬಂದು ತರಕಾರಿ ಕೊಯ್ಯಲಾರಂಭಿಸಿದ್ದ ಹೆಂಡತಿ, ಅದರೊಳಗೆ ಅಡಗಿದ್ದ ಕಪ್ಪೆ ಕಂಡು ಚೀರಾಡಲಾರಂಭಿಸಿದ್ದಾಳೆ. ಹೆಂಡತಿಯ ಕಿರುಚಾಟ ಕೇಳಿ ಓಡಿ ಬಂದು ಪರಿಶೀಲಿಸಿದ ಪತಿಯೂ ಒಂದು ಬಾರಿ ಬೆಚ್ಚಿ ಬಿದ್ದಿದ್ದಾರೆ.

ನೀವೂ ಕೂಡಾ ಮಾರ್ಕೆಟ್ ನಿಂದ ತರಕಾರಿ ಖರೀದಿಸುವ ಮುನ್ನ ಸೂಕ್ಷ್ಮವಾಗಿ ಗಮನಿಸುತ್ತೀರಾ? ಹೌದು ಎಂದಾದರೆ ಪಲ್ಯ ತಯಾರಿಸುವ ಮುನ್ನ ಮತ್ತೊಮ್ಮೆ ಸರಿಯಾಗಿ ಗಮನಿಸಿ.
undefined
ಇತ್ತೀಚೆಗಷ್ಟೇ ಇಂತಹುದೇ ಘಟನೆ ಬೆಳಕಿಗೆ ಬಂದಿದೆ. ಶಿಮ್ಲಾ ಹಸಿರು ಮೆಣಸಿನಕಾಯಿಯೊಳಗೆ ಕಪ್ಪೆಯೊಂದು ಪತ್ತೆಯಾಗಿದೆ. ಮೆಣಸಿನಕಾಯಿ ಕೊಂಚವೂ ಹಾಳಾಗಿರಲಿಲ್ಲ ಎಂಬುವುದು ಮತ್ತಷ್ಟು ಅಚ್ಚರಿಗೀಡು ಮಾಡುವ ವಿಚಾರ
undefined
ಇದು ಕೆನಡಾದಲ್ಲಿ ನಡೆದ ಘಟನೆಯಾಗಿದೆ. ಇಲ್ಲಿನ ನಿವಾಸಿಗಳಾದ ನೀಕಾಲ್ ಹಾಗೂ ಗಿರಾರ್ಡ್ ಎಂಬ ದಂಪತಿ ತರಕಾರಿ ಖರೀದಿಸಿದ್ದಾರೆ. ಆದರೆ ಅದರೊಳಗೆ ಕಪ್ಪೆ ಇರಬಹುದೆಂಬ ಕಲ್ಪನೆಯನ್ನೇ ಅವರು ಮಾಡಿರಲಿಲ್ಲ.
undefined
ಈ ದಂಪತಿ ಮಾರ್ಕೆಟ್ ನಿಂದ ಹಸಿರು ಮೆಣಸಿಕನಕಾಯಿ ಖರೀದಿಸಿದ್ದಾರೆ. ಆದರೆ ಮನೆಗೆ ಬಂದು ಪಲ್ಯಕ್ಕೆಂದು ಿದನ್ನು ಕತ್ತರಿಸುವಾಗ ಬೆಚ್ಚಿ ಬಿದ್ದಿದ್ದಾರೆ.
undefined
ಶಿಮ್ಲಾ ಮೆಣಸಿನಕಾಯಿಯೊಳಗೆ ಪುಟ್ಟ ಕಪ್ಪೆಯೊಂದು ಪತ್ತೆಯಾಗಿದೆ.
undefined
ಹೆಂಡತಿಯ ಚೀರಾಟ ಕೇಳಿ ಓಡಿ ಬಂದ ಪತಿರಾಯನಿಗೂ ಈ ದೃಶ್ಯ ಕಂಡು ಅಚ್ಚರಿಯುಂಟಾಗಿದೆ.
undefined
ಈ ಮೆಣಸಿನಕಾಯಿ ಯಾವುದೇ ರೀತಿಯಲ್ಲಿ ಹಾಳಾಗಿರಲಿಲ್ಲ. ಹೀಗಿರುವಾಗ ಕಪ್ಪೆ ಮೆಣಸಿನಕಾಯಿಯೊಳಗೆ ಹೇಗೆ ಸೇರಿತು ಎಂಬುವುದೇ ಯಕ್ಷ ಪಶ್ನೆಯಾಗಿದೆ.
undefined
ಇಬ್ಬರೂ ಕಪ್ಪೆ ಕುಳಿತಿದ್ದ ಅರ್ಧ ಕತ್ತರಿಸಿಟ್ಟಿದ್ದ ಮೆಣಸನ್ನು ಜಾಗರೂಕತೆಯಿಂದ ಜಾರ್ ನೊಳಗೆ ಹಾಕಿದ್ದಾರೆ. ಇದು ಗ್ರೀನ್ ಟ್ರೀ ಫ್ರಾಗ್ ಆಗಿದ್ದು, ಸೂಪರ್ ಮಾರ್ಕೆಟ್ ವಿರುದ್ಧ ದೂರು ದಾಖಲಿಸಿದ್ದಾರೆ.
undefined
ಇಲ್ಲಿಂದ ಈ ದೂರು ಕೃಷಿ ಇಲಾಖೆಗೆ ಕಳುಹಿಸಲಾಗಿದ್ದು, ತನಿಖೆ ಮುಂದುವರೆದಿದೆ.
undefined
click me!