75 ಲಕ್ಷಕ್ಕೆ ಸೇಲಾಯ್ತು ಮಾಜಿ ಪೋರ್ನ್‌ ಸ್ಟಾರ್ ಮಿಯಾ ಖಲೀಫಾಳ ಈ 'ವಸ್ತು'!

Published : Aug 16, 2020, 05:24 PM ISTUpdated : Aug 16, 2020, 06:21 PM IST

ಒಳ್ಳೆಯ ಕೆಲಸ ಮಾಡಲು ಹಲವು ದಾರಿಗಳಿವೆ. ಕೆಲವರು ಅಮೂಲ್ಯ ವಸ್ತುಗಳನ್ನು ಬಳಸಿ ಇಂತಹ ಕೆಲಸ ಮಾಡಿದರೆ, ಇನ್ನು ಕೆಲವರು ತಮ್ಮ ಕಳೆದು ಹೋದ ಬದುಕಿನ ಕರಾಳ ನೆನಪುಗಳನ್ನು ನೆನಪಿಸುವ ವಸ್ತುಗಳಿಂದ ಇತರರಿಗೆ ಸಹಾಯ ಮಾಡುತ್ತಾರೆ. ಅಮೆರಿಕಾದ ಪೋರ್ನ್‌ ಸ್ಟಾರ್ ಮಿಯಾ ಖಲೀಫಾ ಇತ್ತೀಚೆಗೆ ಭಾರೀ ಸದ್ದು ಮಾಡುತ್ತಿದ್ದಾರೆ. ಆದರೆ ಈ ಬಾರಿ ಅವರು ಸೌಂಡ್ ಮಾಡಿರುವುದು ಒಳ್ಳೆಯ ಕೆಲಸದಿಂದ. ಈ ಅಮೆರಿಕದ ಪೋರ್ನ್ ಸ್ಟಾರ್ ತನ್ನ ಜೀವನದ ಕೆಟ್ಟ ವಿಚಾರಗಳಲ್ಲಿ ಎಣಿಕೆ ಮಾಡುವ ತನ್ನ ಕನ್ನಡಕವನ್ನು ಹರಾಜು ಹಾಕಿದ್ದಾರೆ. ಭಾನುವಾರ ಮಧ್ಯಾಹ್ನ ಇದರ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದೆ. ಈ ಕನ್ನಡಕ 75 ಲಕ್ಷಕ್ಕೆ ಮಾರಾಟವಾಗಿದೆ. ಈ ಹಣವನ್ನು ಲೆಬನಾನ್‌ನಲ್ಲಿ ನಡೆದ ಸ್ಫೋಟದಲ್ಲಿ ಗಾಯಗೊಂಡವರ ಚಿಕಿತ್ಸೆಗೆ ದಾನ ಮಾಡಲಿದ್ದಾರೆ. ಜನರು ಮಿಯಾರ ಈ ನಿರ್ಧಾರವನ್ನು ಶ್ಲಾಘಿಸಿದ್ದಾರೆ.  

PREV
16
75 ಲಕ್ಷಕ್ಕೆ ಸೇಲಾಯ್ತು ಮಾಜಿ ಪೋರ್ನ್‌ ಸ್ಟಾರ್ ಮಿಯಾ ಖಲೀಫಾಳ ಈ 'ವಸ್ತು'!

ಅಮೆರಿಕದ ಪೋರ್ನ್ ಸ್ಟಾರ್ ಮಿಯಾ ಖಲೀಫಾ ತನ್ನ ವಿವಾದಾತ್ಮಕ ಬದುಕಿನಿಂದಲೇ ಚರ್ಚಿತರಾಗಿದ್ದಾರೆ. ಆದರೆ ಈ ಬಾರಿ ಅವರು ಒಳ್ಳೆ ಕೆಲಸದಿಂದ ಚರ್ಚೆ ಹುಟ್ಟು ಹಾಕಿದ್ದಾರೆ.

26

ಮಿಯಾ ಖಲೀಫಾ ಕೂಡಾ ಲೆಬನಾನ್‌ನಲ್ಲೇ ಜನಿಸಿದ್ದರು. ಆದರೆ ಬಳಿಕ ಅವರು ಅಮೆರಿಕದಲ್ಲಿ ನೆಲೆಸಿದರು. ಆದರೆ ತನ್ನ ಹುಟ್ಟಿದ ಸ್ಥಳವಾಗಿದ್ದರಿಂದ ಈ ಸ್ಪೋಟ ಅವರನ್ನು ಭಾವನಾತ್ಮಕವಾಗಿ ಘಾಸಿಗೊಳಿಸಿತ್ತು.

36

ಅವರು ಅಲ್ಲಿನ ರೆಡ್‌ ಕ್ರಾಸ್ ಸೊಸೈಟಿಗಾಗಿ ಏನಾದರೂ ಮಾಡಬೇಕೆಂದು ನಿರ್ಧರಿಸಿದರು. ಅವರು ಗಾಯಾಳುಗಳಿಗಾಗಿ ಹಣ ಹೊಂದಿಸುವ ಕೆಲಸ ಆರಂಭಿಸಿದರು.

46

ಇದಕ್ಕಾಗಿ ಅವರು ತಮ್ಮ ಕನ್ನಡಕವನ್ನು ಹರಾಜು ಹಾಕಲು ನಿರ್ಧರಿಸಿದರು. ಕೆಲವೇ ದಿನಗಳಲ್ಲಿ ಈ ಕನ್ನಡಕ 75 ಲಕ್ಷ ಬೆಲೆ ಬಾಳಲಾರಂಭಿಸಿತು. ಈಗ ಈ ಹಣವನ್ನು ಅವರು ಗಾಯಾಳುಗಳ ಚಿಕಿತ್ಸೆಗೆ ನೀಡಲಿದ್ದಾರೆ.

56

ಇಷ್ಟು ದೊಡ್ಡ ಮೊತ್ತದ ಹಣ ಸಿಕ್ಕಿದ ಬೆನ್ನಲ್ಲೇ ಮಿಯಾ ತಮ್ಮ ಇನ್ಸ್ಟಾ ಗ್ರಾಂನಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಅವರು ಒಳ್ಳೆಯಯ ಕೆಲಸಕ್ಕೆ ಸಹಾಯ ಮಾಡಿದ ಜನರಿಗೆ ಧನ್ಯವಾದ ತಿಳಿಸಿದ್ದಾರೆ.

66

ಕಳೆದ ಕೆಲ ದಿನಗಳ ಹಿಂದಷ್ಟೇ ಲೆಬನಾನ್‌ನಲ್ಲಿ ಭಾರೀ ಸ್ಫೋಟವೊಂದು ಸಂಭವಿಸಿತ್ತು. ಇದರಲ್ಲಿ ಒಂದು ನಗರವಿಡೀ ಧ್ವಂಸಗೊಂಡಿತ್ತು. ಅನೇಕ ಮಂದಿ ಪ್ರಾಣ ಕಳೆದುಕೊಂಡಿದ್ದರು.

click me!

Recommended Stories