ಶ್ರೀಮಂತರ ಬಂಗಲೆಯಿಂದ ತುಂಬಿತ್ತು ಈ ಹಳ್ಳಿ, 2015ರಲ್ಲಿ ಕಟ್ಟ ಕಡೆಯ ವ್ಯಕ್ತಿ ಸಾವು!

First Published | Sep 14, 2020, 5:28 PM IST

ಸಮಯದೊಂದಿಗೆ ಅಂತ್ಯವಾದ ಸ್ಥಳಗಳು ಜಗತ್ತಿನಲ್ಲಿ ಹಲವಿದೆ. ಅನೇಕ ಮಂದಿ ವಾಸಿಸುತ್ತಿದ್ದ ಜನರಿಂದ ತುಂಬಿದ್ದ ಅನೇಕ ಹಳ್ಳಿಗಳು ಇಂದು ನಿರ್ಜನವಾಗಿದೆ. ರಷ್ಯಾದ ಡೈಂಗೆಸ್ತಾನ್ ಕೂಡಾ ಇಂತಹ ಸ್ಥಳಗಳ ಪಟ್ಟಿಯಲ್ಲಿ ಗುರುತಿಸಿಕೊಳ್ಳುತ್ತದೆ. ಇಲ್ಲಿನ ನಿರ್ಜನ ಪ್ರದೇಶವಾಗಿರುವ ಫೋಟೋಗಳು ವೈರಲ್ ಆಗಿವೆ. ಡ್ರೋನ್ ಮೂಲಕ ತೆಗೆಯಲಾದ ಈ ಫೋಟೋಗಳಲ್ಲಿ ಈ ನಿರ್ಜನಗೊಂಡಿರುವ ನಗರ ಭಯಾನಕವಾಗಿ ಕಾಣಿಸುತ್ತದೆ. 2000 ವರ್ಷ ಹಳೆಯ ಈ ಹಳ್ಳಿಯ ಕತೆಯೂ ಅಷ್ಟೇ ರೋಚಕವಾದದ್ದು, ಇದೇ ಕಾರಣದಿಂದ ಇಲ್ಲಿ ಪ್ರವಾಸಿಗರ ದಂಡೇ ಸೇರುತ್ತದೆ. ಅನೇಕ ವರ್ಷಗಳ ಹಿಂದೆ ಶ್ರೀಮಂತರಿಂದ ತುಂಬಿದ್ದ ಈ ಹಳ್ಳಿ  1950ರ ಬಳಿಕ ನಿಧಾನವಾಗಿ ನಿರ್ಜನವಾಗಲಾರಂಭಿಸಿತು. 2015ರಲ್ಲಿ ಈ ಹಳ್ಳಿಯ ನಿವಾಸಿಯಾಗಿದ್ದ ಕಟ್ಟ ಕಡೆಯ ವ್ಯಕ್ತಿಯೂ ಮೃತಪಟ್ಟಿದ್ದು, ಇದಾದ ಬಳಿಕ ಇಲ್ಲಿ ಯಾರೂ ವಾಸಿಸುತ್ತಿಲ್ಲ. ಸದ್ಯ ಈ ಸ್ಥಳ ಹಾಗೂ ಇಲ್ಲಿನ ಕತೆಗಳಷ್ಟೇ ಪ್ರವಾಸಿಗರನ್ನು ಇಲ್ಲಿ ಬರುವಂತೆ ಮಾಡುತ್ತಿವೆ.

ಗಾಮ್ಸುತಲ್ ಎರಡು ಸಾವಿರ ವರ್ಷ ಹಳೆಯ ಹಳ್ಳಿಯಾಗಿದೆ. ಈ ಹಳ್ಳಿ ಮೌಂಟ್ ಗಾಮ್ಸುತಲ್‌ಮೀರ್‌ನ ನಾಲ್ಕು ಸಾವಿರದ ಆರ್ನೂರು ಅಡಿ ಎತ್ತರದಲ್ಲಿತ್ತು.
2019ರ ಮೇಯಲ್ಲಿ ಲಂಡನ್ ನಿವಾಸಿ ಮೆಲಾನಿ ಸ್ಮಿತ್ ಗಾಮ್ಸುತಲ್‌ಗೆ ಸುತ್ತಾಡಲು ಬಂದಿದ್ದರು. ಆ ಸಂದರ್ಭದಲ್ಲಿ ಅವರು ಈ ಹಳ್ಳಿಯ ಫೋಟೋ ಸೆರೆ ಹಿಡಿದಿದ್ದರು. ಬಳಿಕ ಈ ಬಗ್ಗೆ ಬ್ಲಾಗ್ ಕೂಡಾ ಬರೆದಿದ್ದರು.
Tap to resize

ಸ್ಮಿತ್ ತಮ್ಮ ಬ್ಲಾಗ್‌ನಲ್ಲಿ ಗಾಮ್ಸುತಲ್‌ಗೆ ಬಹಳ ಕಡಿಮೆ ಪ್ರವಾಸಿಗರು ಬರುತ್ತಾರೆ. ಪರ್ವತದ ಮೇಲೆ ಇದಕ್ಕಿಂತ ಸುಂದರ ದೃಶ್ಯ ಬೇರೆಲ್ಲೂ ನೋಡಿಲ್ಲ ಎಂದಿದ್ದಾರೆ.
ಗಾಮ್ಸುತಲ್‌ನ್ನು Machu Picchu of Dagestan ಎಂದೂ ಕರೆಯುತ್ತಾರೆ.
ಈ ಹಳ್ಳಿಯನ್ನು 1950ರ ಬಳಿಕ ಇಲ್ಲಿನ ನಿವಾಸಿಗಳು ಬಿಟ್ಟು ಬೇರೆಡೆ ಹೊರಡಲಾರಂಭಿಸಿದ್ದರು. ಇದಾದ ಬಳಿಕದಿಂದ ಈ ಹಳ್ಳಿ ನಿರ್ಜನವಾಗತೊಡಗಿತು.
ಇಂದು ಈ ಹಳ್ಳಿ ತುಪಬೇಕಾದರೆ ಒಂದು ಗಂಟೆ ಪರ್ವತಾರೋಹಣ ಮಾಡಬೇಕಾಗುತ್ತದೆ.
ಸದ್ಯ ಇಲ್ಲಿ ಸುಮಾರು 300 ಹಾನಿಗೊಂಡ ಮನೆಗಳಿವೆ. ಆದರೆ ಇಂದು ಇದು ನಿರ್ಜನವಾಗಿದೆ.
ಇಲ್ಲಿ ವಾಸಿಸುತ್ತಿದ್ದ ಕೊನೆಯ ವ್ಯಕ್ತಿ 2015 ರಲ್ಲಿ ಮೃತಪಟ್ಟಿದ್ದಾರೆ. ಇದಾದ ಬಳಿಕ ಇಲ್ಲಿ ಯಾರೂ ವಾಸಿಸುತ್ತಿಲ್ಲ.
ರಷ್ಯನ್ ಪ್ರವಾಸಿ ಬ್ಲಾಗ್ ಅನ್ವಯ ಅನೇಕ ವರ್ಷಗಳವರೆಗೆ ಇಲ್ಲಿ ಬಹಳ ಶ್ರೀಮಂತರು ನೆಲೆಸುತ್ತಿದ್ದರೆಂಬ ವಿಚಾರ ಬಯಲಾಗಿದೆ.
ಇಲ್ಲಿ ಸುಮಾರು ಮುನ್ನೂರು ಮಂದಿ ವಾಸಿಸುತ್ತಿದ್ದರೆನ್ನಲಾಗಿದೆ.
ಈ ಮನೆಗಳನ್ನು ಹೊರತುಪಡಿಸಿ ಇಲ್ಲಿ ಅಂಗಡಿ, ಶಾಲೆ, ಪೋಸ್ಟ್‌ ಆಫೀಸ್ ಹಾಗೂ ಆಸ್ಪತ್ರೆಗಳೂ ಇದ್ದವು.
ಈ ಮನೆಗಳ ಬಾಗಿಲು ಹಾಗೂ ಗೋಡೆಗಳನ್ನು ನೋಡಿ ಇಲ್ಲಿನ ಕಲೆ ಬಯಲಾಗುತ್ತದೆ.
ಈ ಹಳ್ಳಿ ಮೂರನೇ ಅಥವಾ ನಾಲ್ಕನೇ ಶತಮಾಣದಲ್ಲಿ ನಿರ್ಮಿಸಲಾಗಿವೆ ಎಂದು ಅಂದಾಜಿಸಲಾಗಿದೆ.
ಪರ್ವತದ ಮೇಲಿರುವ ಈ ಹಳ್ಳಿಯ ಫೋಟೋಗಳು ಸದ್ಯ ಭಾರೀ ವೈರಲ್ ಆಗಿವೆ.

Latest Videos

click me!