ಅಲಸ್ಕನ ಆಳ ಸಮುದ್ರದಲ್ಲಿ ಬಂಗಾರ ಮೊಟ್ಟೆ ಪತ್ತೆ; ವಿಚಿತ್ರ ವಸ್ತುವಿನ ಬಗ್ಗೆ ಸಂಶೋಧಕರಿಗೇ ಅಚ್ಚರಿ!

Published : Sep 09, 2023, 01:48 PM IST

ಸಮುದ್ರವೆಂದರೆ ಹಾಗೆ ಅದು ಹಲವು ನಿಗೂಢಗಳನ್ನು ತನ್ನೊಡಲೊಳಗೆ ಬಚ್ಚಿಟ್ಟುಕೊಂಡಿದೆ. ಆಳವಾದ ಸಮುದ್ರವು ಇನ್ನೂ ಹೆಚ್ಚಾಗಿ ಪರಿಶೋಧಿಸಲ್ಪಟ್ಟಿಲ್ಲ. ಸಮುದ್ರದ ರಹಸ್ಯಗಳ ಕುರಿತು ನಮಗೆ ತಿಳಿದಿರುವುದು ಅಲ್ಪ ಮಾತ್ರ. ಹೀಗಾಗಿ ವಿಜ್ಞಾನಿಗಳು ನಿರಂತರವಾಗಿ ಸಂಶೋಧನೆ ನಡೆಸುತ್ತಲೇ ಇದ್ದಾರೆ. ಸಮುದ್ರದಾಳದಲ್ಲಿ ಇನ್ನೂ ಪತ್ತೆಯಾಗದ ಲಕ್ಷಾಂತರ ಜೀವಿಗಳಿವೆ, ವಸ್ತುಗಳಿವೆ ಎಂದು ವಿಜ್ಞಾನಿಗಳೇ ಅಂದಾಜಿಸಿದ್ದಾರೆ.

PREV
14
ಅಲಸ್ಕನ ಆಳ ಸಮುದ್ರದಲ್ಲಿ ಬಂಗಾರ ಮೊಟ್ಟೆ ಪತ್ತೆ; ವಿಚಿತ್ರ ವಸ್ತುವಿನ ಬಗ್ಗೆ ಸಂಶೋಧಕರಿಗೇ ಅಚ್ಚರಿ!

ಇದೀಗ ಅಲಸ್ಕನ್(Alaskan) ಸಮುದ್ರದಾಳದಲ್ಲಿ ಮತ್ತೊಂದು ನಿಗೂಢ ವಸ್ತುವೊಂದು ಪತ್ತೆಯಾಗಿದ್ದು ಸಂಶೋಧಕರಲ್ಲಿ ಸಂಚಲನ ಮೂಡಿಸಿದೆ. NOAA ಓಷನ್ ಎಕ್ಸ್‌ಪ್ಲೋರೇಶನ್‌ನ ಸಂಶೋಧಕರು ಅಲಾಸ್ಕಾ ಕೊಲ್ಲಿಯ ಸಣ್ಣ ಸಮುದ್ರದ ಮೇಲೆ ಡೈವಿಂಗ್ ಮಾಡುತ್ತಿದ್ದಾಗ ಈ ಹಳದಿ ಬಣ್ಣದ ವಸ್ತುವನ್ನು ನೋಡಿದ್ದಾರೆ.ನೋಡುವುದಕ್ಕೆ ಬಂಗಾರದ ಮೊಟ್ಟೆಯಂತೆಯೇ ಇದೆ.ಆದರೆ ಇದು ಏನು? ಯಾವುದರಿಂದ ಮಾಡಲ್ಪಟ್ಟಿದೆ, ಸಮುದ್ರ ಜೀವಿಯ ಮೊಟ್ಟೆಯೋ ಎಂದು ಗೊಂದಲಕ್ಕೀಡಾಗಿದ್ದ ಸಂಶೋಧಕರಿಗೆ ಅದು ಗೋಲ್ಡನ್ ಎಗ್ ಅಥವಾ ಗೋಲ್ಡನ್ ಅರ್ಬ್ ಎಂದು ಕರೆದಿದ್ದಾರೆ.

24

ಸಮುದ್ರದಾಳದಲ್ಲಿ ಸಿಕ್ಕ ಈ ನಿಗೂಢ ವಸ್ತುವಿನ ಬಗ್ಗೆ NOAA ತನ್ನ ಬ್ಲಾಗ್​ನಲ್ಲಿ ಫೋಟೋ ಮತ್ತು ವಿವರವನ್ನು ಹಂಚಿಕೊಂಡಿದೆ. ಹಿಡಿಯುತ್ತಿರುವ ಚಿತ್ರ ಇಲ್ಲಿ ತೋರಿಸುತ್ತದೆ. (NOAA ಸಾಗರ ಪರಿಶೋಧನೆ, ಸೀಸ್ಕೇಪ್ ಅಲಾಸ್ಕಾ) ಬಂಗಾರದ ಮೊಟ್ಟೆಯಂಥ ವಸ್ತುವನ್ನು ಕಂಡು ಕುತೂಹಲಗೊಂಡಿರುವ ಸಂಶೋಧಕರು. ಇನ್ನು ಹೆಚ್ಚಿನ ಹುಡುಕಾಟದಲ್ಲಿ ತೊಡಗಿದ್ದಾರೆ. ಒಂದು ವೇಳೆ ಇದು ಚಿನ್ನದ್ದೇ ಮೊಟ್ಟೆಯಾದರೆ! 

34
Golden egg

ಗೋಲ್ಡನ್ ಎಗ್ ಬಗ್ಗೆ ಸಂಶೋಧಕರು ಏನು ಹೇಳ್ತಾರೆ?

ಆಳ ಸಮುದ್ರದ ಸಂಶೋಧನೆಯಲ್ಲಿ ತೊಡಗಿದ ವಿಜ್ಞಾನಿಗಳಿಗೆ ಸಂತೋಷದ ಜೊತೆಗೆ ಗೋಲ್ಡ್ ಅರ್ಬ್ ಪತ್ತೆಯಾಗಿರುವುದು ವಿಚಿತ್ರವೆನಿಸಿದೆ ಎಂದಿದ್ದಾರೆ. ಮೊದಲಿಗೆ'Golden orb' ಕಂಡಾಗ ಅಶ್ಚರ್ಯಗೊಂಡೆವು. ಅದನ್ನ ಉಪಕರಣದ ಮೂಲಕ ಸಂಗ್ರಹಿಸಿ ಹಡಗಿಗೆ ತರಲು ಹೋದಾಗ ಇದೊಂದು ಜೈವಿಕ ಮೂಲವಾಗಿದೆ ಎಂಬುದಷ್ಟೇ ತಿಳಿಯಿತೇ ಹೊರತು ಅದನ್ನು ಮೀರಿ ಇದು ಏನು ಯಾವುದರಿಂದ ಮಾಡಲ್ಪಟ್ಟಿದೆ ಎಂಬುದನ್ನು ಗುರುತಿಸಲು ಸಾಧ್ಯವಾಗಿಲ್ಲ. ಹೀಗಾಗಿ ಈ ವಸ್ತುವಿನ ಬಗ್ಗೆ ಅತ್ಯಾಧುನಿಕ ಪರಿಕರಗಳನ್ನು ಬಳಸಿಕೊಂಡು ಹೆಚ್ಚಿನ ಸಂಶೋಧನ ಮಾಡಲಾಗುತ್ತದೆ  ಎಂದು NOAA ಓಷನ್ ಎಕ್ಸ್‌ಪ್ಲೋರೇಶನ್‌ನ ಯಾತ್ರೆಯ ಸಂಯೋಜಕ ಸ್ಯಾಮ್ ಕ್ಯಾಂಡಿಯೊ ಹೇಳಿದ್ದಾರೆ.

44

ಅಪರೂಪದ,  ವಸ್ತುವೊಂದನ್ನು ಸಂಶೋಧಿಸಿದ ವಿನಮ್ರ ಭಾವ, ಇನ್ನೊಂದೆಡೆ  ನಮ್ಮದೇ ಗ್ರಹದ ಬಗ್ಗೆ ನಮಗೆ ಎಷ್ಟು ಕಡಿಮೆ ತಿಳಿದಿದೆ ಮತ್ತು ಸಾಗರ ರಹಸ್ಯಗಳ ತಿಳಿಯುವ ನಿಟ್ಟಿನಲ್ಲಿ ನಾವು ಕಲಿಯುವಂತದ್ದು ಎಷ್ಟಿದೆ ಎಂಬುದು ಈ ಅಪರೂಪದ ವಸ್ತುವಿನ ಪತ್ತೆ ನಮಗೆ ನೆನಪಿಸಿದೆ ಎಂದಿದ್ದಾರೆ. 

ಒಟ್ಟಿನಲ್ಲಿ ಈ ಚಿನ್ನದ ಮೊಟ್ಟೆ ಯಾವುದೋ ಹೊಸ ಪ್ರಬೇಧಕ್ಕೆ ಸಂಬಂಧಿಸಿದ್ದಾಗಿದೆ ಅಥವಾ ಈಗಾಗಲೇ ಅಸ್ತಿತ್ವದಲ್ಲಿದ್ದು ನಮಗೆ ತಿಳಿಯದೇ ಇರುವ ಯಾವುದೋ ಜೀವಿಯನ್ನು ಪ್ರತಿನಿಧಿಸುತ್ತಿದೆ. ಈ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಿದ ಬಳಿಕವೇ ಗೊತ್ತಾಗಲಿದೆ ಎಂದಿದ್ದಾರೆ.

click me!

Recommended Stories