ನೀವು ಎಂದಾದರೂ ತಿಂದಿದ್ದೀರಾ ಡೆಡ್ ಬಾಡಿ ಕೇಕ್!?

First Published Feb 20, 2020, 4:15 PM IST

ಜಗತ್ತಿನಲ್ಲಿ ಜನರು ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡ ಬಳಿಕ ಅವರನ್ನು ಭಿನ್ನ ವಿಭಿನ್ನವಾಗಿ ನೆನಪಿಸಿಕೊಳ್ಳುತ್ತಾರೆ. ಆದರೆ ಇತ್ತೀಚೆಗಷ್ಟೇ ಸೋಶಿಯಲ್ ಮೀಡಿಯಾ ಸ್ಪೇನ್ ನಲ್ಲಿ ನಡೆದ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ಕುಟುಂಬವೊಂದು, ಒಂದು ವರ್ಷ ಹಿಂದೆ ಮೃತಪಟ್ಟ ಕುಟುಂಬ ಸದಸ್ಯನ ನೆನಪಿಸಿಕೊಂಡು ನಡೆದಸಿದ ಆಚರಣೆ ಭಾರೀ ಸದ್ದು ಮಾಡಿದೆ. ಈ ಕುಟುಂಬ ತಾವು ಕಳೆದುಕೊಂಡ ಆ ವ್ಯಕ್ತಿಯ ಮೃತದೇಹದ ಆಕೃತಿ ಹೋಲುವ ಕೇಕ್ ತಯಾರಿಸಿದೆ. ಹಾಲ್ ವೊಂದರಲ್ಲಿ ಇರಿಸಿದ್ದ ಈ ಡೆಡ್ ಬಾಡಿ ಕೇಕ್ ನ್ನು ಬಂದವರೆಲ್ಲಾ ಚಾಕುವಿನಿಂದ ತುಂಡರಿಸಿ ತಮ್ಮಿಷ್ಟದಂತೆ ತಿಂದಿದ್ದಾರೆ.

ಈ ಶಾಕಿಂಗ್ ಘಟನೆ ಸ್ಪೇನ್ ನಲ್ಲಿ ನಡೆದಿದ್ದು ಎನ್ನಲಾಗಿದೆ. ಇದರ ವಿಡಿಯೋ ಭಾರೀ ವೈರಲ್ ಆಗಿದೆ.
undefined
ಪುಣ್ಯ ತಿಥಿಯ ಈ ವಿಡಿಯೋ ದಿಗ್ರ್ಭಮೆ ಹುಟ್ಟಿಸುವಂತಿದೆ. ಮೊದಲ ಬಾರಿ ನೋಡುವಾಗ ಇದು ಮೃತದೇಹವೋ, ಕೇಕ್ ಎಂದು ಗೊತ್ತಾಗುವುದಿಲ್ಲ.
undefined
ನೆರೆದ ಜನರೆಲ್ಲಾ ಮೃತದೇಹದಂತಿರುವ ಕೇಕ್ ಬಳಿ ಬಂದು ಕತ್ತರಿಸುವುದನ್ನು ನೋಡಬಹುದು.
undefined
ಮಕ್ಕಳು ಪ್ಲೇಟ್ ನಲ್ಲಿ ಡೆಡ್ ಬಾಡಿ ಕೇಕ್ ತೆಗೆದುಕೊಂಡು ತಿನ್ನುತ್ತಿರುವ ದೃಶ್ಯಗಳೂ ಈ ವಿಡಿಯೋದಲ್ಲಿವೆ.
undefined
ಈ ಕೇಕ್ ಬಳಿ ನಿಂತಿರುವ ವೇಯ್ಟರ್ ಒಬ್ಬ ಕೇಕ್ ಸರ್ವ್ ಮಾಡುತ್ತಿದ್ದಾರೆ
undefined
ಈ ವಿಡಿಯೋ ಡೀಟೇಲ್ಸ್ ಈವರೆಗೂ ಲಭ್ಯವಾಗಿಲ್ಲ. ಆದರೆ ಕೆಲವರು ಇದನ್ನು ತಮಾಷೆಯಾಗಿದೆ ಎಂದರೆ ಮತ್ತೆ ಕೆಲವರು ಭಯಾನಕವಾಗಿದೆ ಎಂದು ಬಣ್ಣಿಸಿದ್ದಾರೆ.
undefined
ಓರ್ವ ಬಳಕೆದಾರನಂತೂ ಜೀವನದಲ್ಲಿ ಇದೊಂದು ನೋಡುವುದು ಬಾಕಿ ಇತ್ತು ಎಂದು ಬರೆದಿದ್ದಾರೆ. ಈ ವಿಚಿತ್ರ ಆಚರಣೆ ಕಂಡು ಜನರು ಬೆಚ್ಚಿ ಬಿದ್ದಿದ್ದಾರೆ.
undefined
click me!