50 ವರ್ಷದಿಂದ ರಷ್ಯಾ ಮುಚ್ಚಿಟ್ಟಿತ್ತು ಈ ಖತರ್ನಾಕ್ ಅಸ್ತ್ರ, ಅಣು ಬಾಂಬ್‌ಗಿಂತಲೂ ಡೇಂಜರ್!
ವಿಶ್ವದಲ್ಲಿ ತಾವೇ ಶಕ್ತಿಶಾಲಿಯಾಗಬೇಕೆಂಬ ರಾಷ್ಟ್ರಗಳ ನಡುವಿನ ಪೈಪೋಟಿ ಇಂದು ನಿನ್ನೆಯದಲ್ಲ. ಅಮೆರಿಕಾ, ಚೀನಾ ಅಥವಾ ಇನ್ನ್ಯಾವುದೋ ದೇಶವಿರಲಿ ತನ್ನನ್ನು ತಾನು ಶಕ್ತಿಶಾಲಿ ಎಂದು ಘೋಷಿಸಲು ಅನೇಕ ರೀತಿಯ ಅಸ್ತ್ರಗಳನ್ನು ಒಗ್ಗೂಡಿಸುತ್ತಿರುತ್ತದೆ. ಈವರೆಗಿನ ಪಟ್ಟಿಯಲ್ಲಿ ಅಣು ಬಾಂಬ್ ಅತ್ಯಂತ ಡೇಂಜರ್ ಎನ್ನಲಾಗುತ್ತಿತ್ತು. ಯಾವೆಲ್ಲಾ ದೇಶದ ಬಳಿ ಈ ಅಸ್ತ್ರವಿದೆಯೋ ಅವರೆಲ್ಲರೂ ಇದನ್ನು ಬಳಸಲು ಹಿಂದೇಟು ಹಾಕುತ್ತಾರೆ. ಈವರೆಗೆ ಅಮೆರಿಕ ಮಾತ್ರ ಎರಡು ಬಾರಿ ಜಪಾನ್ ಮೇಲೆ ಅಣು ಬಾಂಬ್ ಸ್ಫೋಟಿಸಿದೆ. ಇದಾಧ ಬಳಿಕ ಯಾವೊಂದೂ ದೇಶವೂ ಇದನ್ನು ಬಳಸಿಲ್ಲ. ಆದರೀಗ ರಷ್ಯಾ ಕಳೆದ ಐವತ್ತು ವರ್ಷಗಳ ಹಿಂದೆ ನಡೆಸಿದ ಟೆಸ್ಟ್ ಒಂದರ ವಿಡಿಯೋ ಶೇರ್ ಮಾಡಿಕೊಂಡಿದೆ. ರಷ್ಯಾದ ಈ ಬಾಂಬ್ ಹಿರೋಶಿಮಾದಲ್ಲಿ ಸ್ಫೋಟಿಸಲಾದ ಅಣು ಬಾಂಬ್‌ಗಿಂತಲೂ ಮೂರು ಸಾವಿರ ಪಟ್ಟು ಅಧಿಕಶಕ್ತಿಶಾಲಿಯಾಗಿದೆ. ಒಂದು ವೇಳೆ ಇದು ಯಾವುದಾದರೂ ದೇಶದ ಮೇಲೆ ಸ್ಫೋಟಿಸಿದರೆ ಅಲ್ಲಿಯುಂಟಾಗುವ ಹಾನಿಯನ್ನು ಅಂದಾಜಿಸಲೂ ಸಾಧ್ಯವಿಲ್ಲ.