ಪ್ರೀತಿ ಎದುರು ಸೋತ ಕೊರೋನಾ: 220 ಜೋಡಿಯಿಂದ ಸಾಮೂಹಿಕ ಕಿಸ್ಸಿಂಗ್!

First Published Feb 22, 2020, 3:50 PM IST

ಚೀನಾದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಬಾರಿಸುತ್ತಿದೆ. ಸದ್ಯ ಇದು ಇಡೀ ವಿಶ್ವಕ್ಕೆ ಕಂಟಕವಾಗಿ ಪರಿಣಮಿಸಿದೆ. ವಿಶ್ವದ ವಿವಿಧ ದೇಶದಲ್ಲಿ ಕೊರೋನಾ ವೈರಸ್ ಸೋಂಕಿನಿಂದ ಬಳಲುತಯ್ತಿರುವ ವರದಿಗಳು ಕಾಣಿಸಿಕೊಳ್ಳಲಾರಂಭಿಸಿವೆ. ಈ ವೈರಸ್ ದಿನೇ ದಿನೇ ಜನರನ್ನು ಭಯಭೀತರನ್ನಾಗಿಸುತ್ತಿದೆ. ಆದರೆ ಫಿಲಿಪೈನ್ಸ್ ನ ಕೆಲ ಪೋಟೋಗಳು ವೈರಲ್ ಆಗುತ್ತಿದ್ದು, ಇವುಗಳ ಮುಂದೆ ಕೊರೋನಾ ಕೂಡಾ ಸೋಲನ್ನಪ್ಪುತ್ತಿರುವಂತೆ ಭಾಸವಾಗಿದೆ. ಇಲ್ಲಿನ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸುಮಾರು 220 ಜೋಡಿ ಮಾರಕ ಕೊರೋನಾ ವೈರಸ್ ಭೀತಿಗೆ ಕಂಗಾಲಾಗದೆ ಮಾಸ್ಕ್ ಧರಿಸಿಯೇ ಕಿಸ್ ಮಾಡಿದ್ದಾರೆ.

ಚೀನಾದಲ್ಲಿ ಯಾವ ಕೊರೋನಾ ವೈರಸ್ ಹಾವಳಿಯಿಂದ 2236 ಜನರು ಸಾವನ್ನಪ್ಪಿದ್ದರೋ, ಅದೇ ಮಾರಕ ವೈರಸ್ ಈ ಪ್ರೇಮಿಗಳೆದುರು ಸೋತಂತೆ ಕಂಡು ಬಂದಿದೆ.
undefined
ಬಾಕೋಲೋದ್ ನಲ್ಲಿ ಗುರುವಾರದಂದು ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಿದ್ದು, ಈ ವೇಳೆ ಸುಮಾರು 220 ಜೋಡಿ ಪರಸ್ಪರ ಕಷ್ಟ- ಸುಖವನ್ನು ಹಂಚಿ ಭಾಗಿಯಾಗುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
undefined
ಜೋಡಿಗಳು ಮಾಸ್ಕ್ ಧರಿಸಬೇಕೆಂಬುವುದು ಈ ಮದುವೆ ಕಾರ್ಯಕ್ರಮದ ಮತ್ತೊಂದು ವಿಶೇಷತೆಯಾಗಿತ್ತು.
undefined
ಜಾನ್ ಪಾಲ್ ಹೆಸರಿನ ವಧು ತನ್ನ 7 ವರ್ಷದ ಪಾರ್ಟ್ನರ್ ಜೊತೆ ವಿವಾಹವಾಗಿದ್ದಾರೆ. ಇದು ಕೊಂಚ ವಿಚಿತ್ರವಾಗಿದ್ದರೂ ಬಹಳ ಅಗತ್ಯವೆಂದು ಅವರು ತಿಳಿಸಿದ್ದಾರೆ.
undefined
ಈ ಸಮಾರಂಭದಲ್ಲಿ ಭಾರೀ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿತ್ತು. ಇಲ್ಲಿಗಾಗಮಿಸಿದ ಜನರಿಗೆ ಆರೋಗ್ಯದ ಕುರಿತು ಎಲ್ಲಾ ಮಾಹಿತಿ ಒದಗಿಸಲಾಗಿತ್ತು.
undefined
ನಗರದ ಮೇಯರ್ ಲಿಯೋನಾರ್ಡಿಯೋ ಈ ಕುರಿತು ಪ್ರತಿಕ್ರಿಯಿಸುತ್ತಾ 'ಒಂದು ವೇಳೆ ನಾವು ನಮ್ಮ ಕುಟುಂಬವನ್ನು ಬಲಶಾಲಿಯನ್ನಾಗಿಸಿದೆ. ನಮ್ಮ ನಗರ ಕೂಡಾ ತನ್ನಂತಾನೇ ಗಟ್ಟಿಯಾಗುತ್ತದೆ' ಎಂದಿದ್ದಾರೆ
undefined
ಈ ಸಾಮೂಹಿಕ ವಿವಾಹ ಕಾರ್ಯಕ್ರಮ ವಿಶ್ವ ಪ್ರೇಮಿಗಳ ಮರುದಿನ ಆಯೋಜಿಸಲಾಗಿತ್ತು. 2013ರಲ್ಲಿ ಕನಡೆದಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 2013 ಜನರು ಪಾಲ್ಗೊಂಡಿದ್ದರು.
undefined
ಇದಕ್ಕೂ ಮುನ್ನ ಕೊರಿಯಾದಲ್ಲೂ ಇಂತಹುದೇ ಸಾಮೂಹಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರಲ್ಲೂ ಮಾಸ್ಕ್ ಧರಿಸಿದ್ದ ಸುಮಾರು 30 ಸಾವಿರ ಮಂದಿ ಪಾಲ್ಗೊಂಡಿದ್ದರು.
undefined
ಫಿಲಿಪೈನ್ಸ್ ನಲ್ಲಿ ಈವರೆಗೆ ಕೊರೋನಾ ವೈರಸ್ ನಿಂದ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಮೂವರು ಸೋಂಕಿತರಿದ್ದಾರೆ.
undefined
click me!