ಮೋದಿ ಸಂದರ್ಶನಕ್ಕೂ ಮುನ್ನ 3 ದಿನ ಉಪವಾಸ ವ್ರತ ಮಾಡಲಿದ್ದಾರೆ ಅಮೆರಿಕನ್ ಪಾಡ್‌ಕಾಸ್ಟರ್

Published : Feb 10, 2025, 09:07 AM IST

ಅಮೆರಿಕ ಪಾಡ್‌ಕಾಸ್ಟರ್ ಲೆಕ್ಸ್ ಫ್ರಿಡ್‌ಮನ್ ಈ ತಿಂಗಳ ಕೊನೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಸಂದರ್ಶಿಸಲಿದ್ದು, ಇದಕ್ಕಾಗಿ 3 ದಿನ ಉಪವಾಸ ಮಾಡುವುದಾಗಿ ತಿಳಿಸಿದ್ದಾರೆ. ಮೋದಿಯವರ ಬಹುದಿನಗಳ ಉಪವಾಸ ವ್ರತದಿಂದ ಪ್ರೇರಿತರಾಗಿ 48 ರಿಂದ 72 ಗಂಟೆಗಳ ಉಪವಾಸ ಕೈಗೊಳ್ಳುವುದಾಗಿ ಫ್ರಿಡ್‌ಮನ್ ಟ್ವೀಟ್ ಮಾಡಿದ್ದಾರೆ.

PREV
15
ಮೋದಿ ಸಂದರ್ಶನಕ್ಕೂ ಮುನ್ನ 3 ದಿನ ಉಪವಾಸ ವ್ರತ ಮಾಡಲಿದ್ದಾರೆ ಅಮೆರಿಕನ್ ಪಾಡ್‌ಕಾಸ್ಟರ್

ಈ ತಿಂಗಳ ಕೊನೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಸಂದರ್ಶಿಸಲಿರುವ ಅಮೆರಿಕ ಪಾಡ್‌ಕಾಸ್ಟರ್‌ ಲೆಕ್ಸ್ ಫ್ರಿಡ್‌ಮನ್, ಮೋದಿಯವರನ್ನು ‘ಅತ್ಯಂತ ಆಕರ್ಷಕ ಮನುಷ್ಯ’ ಎಂದು ಬಣ್ಣಿಸಿದ್ದು, 3 ದಿನ ಉಪವಾಸ ಮಾಡಿ ಅವರನ್ನು ಸಂದರ್ಶಿಸುವುದಾಗಿ ತಿಳಿಸಿದ್ದಾರೆ.

25

ತಮ್ಮ ದೀರ್ಘಾವಧಿ ಸಂದರ್ಶನಗಳಿಂದಲೇ ಖ್ಯಾತರಾಗಿರುವ ಫ್ರಿಡ್‌ಮನ್, ಪ್ರಧಾನಿ ಮೋದಿಯವರೊಂದಿಗೆ ಹಲವು ಗಂಟೆಗಳ ಕಾಲ ಮಾತನಾಡಲು ಎದುರು ನೋಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಇದಕ್ಕಾಗಿ ವಿಶೇಷ ವ್ರತ ಮಾಡುವ ಬಗ್ಗೆಯೂ ಮಾಹಿತಿ ನೀಡಿದ್ದಾರೆ. 
 

35

ಮೋದಿಯವರು ಕೈಗೊಳ್ಳುವ ಬಹುದಿನಗಳ ಉಪವಾಸ ವ್ರತವನ್ನು ಗಮನಿಸಿದ್ದು, ಅವರ ಸಂದರ್ಶನಕ್ಕೆ ಮೊದಲು ನಾನು ಕೂಡಾ 48 ರಿಂದ 72 ಗಂಟೆಗಳ ಉಪವಾಸ ಕೈಗೊಳ್ಳಲಿದ್ದೇನೆ ಎಂದು ಅಮೆರಿಕ ಪಾಡ್‌ಕಾಸ್ಟರ್‌ ಲೆಕ್ಸ್ ಫ್ರಿಡ್‌ಮನ್ ಟ್ವೀಟ್ ಮಾಡಿದ್ದಾರೆ.

45

ಪರ್ಪ್ಲೆಕ್ಸಿಟಿ ಎಐನ ಸಿಇಒ ಅರವಿಂದ್ ಶ್ರೀನಿವಾಸ್ ಅವರು ಫ್ರಿಡ್‌ಮನ್ ಪೋಸ್ಟ್‌ಗೆ ಪ್ರತಿಕ್ರಿಯಿಸಿ, ‘ಅವರು ಅದ್ಭುತ’ ಎಂದಿದ್ದಾರೆ. ಫ್ರಿಡ್‌ಮನ್ ಟೆಸ್ಲಾ ಸಿಇಒ ಎಲಾನ್ ಮಸ್ಕ್, ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಮತ್ತು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸೇರಿದಂತೆ ಅನೇಕ ಉನ್ನತ ವ್ಯಕ್ತಿಗಳನ್ನು ಸಂದರ್ಶಿಸಿದ್ದಾರೆ. ಅವರ ಯೂಟ್ಯೂಬ್ ಚಾನೆಲ್ 45.5 ಲಕ್ಷ ಚಂದಾದಾರರನ್ನು ಹೊಂದಿದೆ.

55

ಸಾಮಾಜಿಕ ಜಾಲತಾಣದಲ್ಲಿ ಅಮೆರಿಕ ಪಾಡ್‌ಕಾಸ್ಟರ್‌ ಲೆಕ್ಸ್ ಫ್ರಿಡ್‌ಮನ್ ಮಾಡಿರುವ ಟ್ವೀಟ್ ವೈರಲ್ ಆಗಿದ್ದು, ಪ್ರಧಾನಿ ಮೋದಿಯವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories