ಅಮೆರಿಕದ ಮೊದಲ ಮಹಿಳೆ ಜಿಲ್ ಪ್ರೊಫೆಸರ್ ಕೆಲಸ ಬಿಡೋಲ್ವಂತೆ!

First Published Nov 20, 2020, 9:05 PM IST

ಇಡೀ ವಿಶ್ವವೇ ಅಮೆರಿಕದ ಅಧ್ಯಕ್ಷರ ಮಡದಿಗೂ ಸಾಕಷ್ಟು ಗೌರವನೀಡುತ್ತೆ. ಶಕ್ತಿ ಕೇಂದ್ರ ಶ್ವೇತ ಭವನದಲ್ಲಿ ಸಾಕಷ್ಟು ಜವಾಬ್ದಾರಿಗಳಿರುತ್ತವೆ. ಆದರೆ, ನಿಯೋಜಿತ ಅಧ್ಯಕ್ಷ ಜೋ ಬೈಡನ್ ಪತ್ನಿ ಜಿಲ್ ಬೈಡನ್ ತಮ್ಮ ಉಪನ್ಯಾಸಕ ವೃತ್ತಿಯನ್ನು ಮುಂದುರಿವರಿಸುತ್ತಾರಂತೆ

ಹೇಳಿ ಕೇಳಿ ವಿಶ್ವದ ದೊಡ್ಡಣ್ಣ ಅಮೆರಿಕದ ಅಧ್ಯಕ್ಷರ ಪತ್ನಿ. ಇಡೀ ವಿಶ್ವವೇ ಅಮೆರಿಕದ ಅಧ್ಯಕ್ಷರ ಮಡದಿಗೂ ಸಾಕಷ್ಟು ಗೌರವನೀಡುತ್ತೆ. ಶಕ್ತಿ ಕೇಂದ್ರ ಶ್ವೇತ ಭವನದಲ್ಲಿ ಸಾಕಷ್ಟು ಜವಾಬ್ದಾರಿಗಳಿರುತ್ತವೆ. ಆದರೆ, ನಿಯೋಜಿತ ಅಧ್ಯಕ್ಷ ಜೋ ಬೈಡನ್ ಪತ್ನಿ ಜಿಲ್ ಬೈಡನ್ ತಮ್ಮ ಉಪನ್ಯಾಸಕ ವೃತ್ತಿಯನ್ನು ಮುಂದುರಿವರಿಸುತ್ತಾರಂತೆ.
undefined
ಈ ಹಿಂದೆ ದೇಶದ ದ್ವಿತೀಯ ಮಹಿಳೆ ಆಗಿದ್ದಾಗ ಪಿಎಚ್.ಡಿ.ಮಾಡಿದ ಜಿಲ್, ಇದೀಗ ಪ್ರಥಮ ಮಹಿಳೆಯಾದರೂ ಪಾಠ ಮಾಡೋದನ್ನು ನಿಲ್ಲಿಸೋಲ್ಲ ಎಂದಿದ್ದಾರೆ. ಆದರೆ, ಇದು ಅಷ್ಟು ಸುಲಭವೇ?
undefined
ಅಮೆರಿಕ ಅಧ್ಯಕ್ಷರಿಗೆ ಮಾತ್ರವಲ್ಲ, ಅವರ ಪತ್ನಿಯರಿಗೂ ಶ್ವೇತ ಭವನದಲ್ಲಿ ಸಾಕಷ್ಟು ಜವಾಬ್ದಾರಿಗಳಿರುತ್ತವೆ. ಅಧ್ಯಕ್ಷರ ಮಡದಿಗಾಗಿಯೇ ಶ್ವೇತ ಭವನದಲ್ಲಿ ಉದ್ಯೋಗ ಮೀಸಲಿರುತ್ತದೆ. ವೇತನವೂ ಸಿಗುತ್ತದೆ.
undefined
ಅನೇಕ ಶಿಷ್ಟಾಚಾರಗಳನ್ನು ಫಾಲೋ ಮಾಡಬೇಕು. ಅಧ್ಯಕ್ಷರ ವಿದೇಶಿ ಪ್ರವಾಸಗಳಲ್ಲಿಯೂ ಭಾಗಿಯಾಗಬೇಕು. ನಿಯೋಜಿತ ಅಧ್ಯಕ್ಷ ಜೋ ಬೈಡನ್ ಪತ್ನಿ ಜಿಲ್ ಬೈಡನ್ ಹೊಸತನಕ್ಕೆ ನಾಂದಿ ಹಾಡಲು ಮುಂದಾಗಿದ್ದಾರೆ.
undefined
ಇಂಗ್ಲಿಷ್ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ ತಮ್ಮ ಉದ್ಯೋಗವನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.
undefined
ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿ ಮೊದಲ ಭಾಷಣ ಮಾಡಿದ ಬೈಡನ್, ಜಿಲ್ ಅವರನ್ನು ಶಿಕ್ಷಣ ತಜ್ಞೆ, ಲೇಖಕಿ, ಮಿಲಿಟರಿ ಮದರ್...ಎಂದೇ ಪರಿಚಯಿಸಿದ್ದರು.
undefined
ಜಿಲ್ ನಡೆಗೆ ಪ್ರಶಂಸೆಗಳೇನೋ ವ್ಯಕ್ತವಾಗುತ್ತಿವೆ. ಆದರೆ, ಅಮೆರಿಕದ ಮೊದಲ ಮಹಿಳೆಗೆ ನೀಡುವ ಭದ್ರತಾ ದೃಷ್ಟಿಯಿಂದ ಈ ಆಲೋಚನೆ ಕಾರ್ಯಸಾಧು ಅಲ್ಲವಂತೆ.
undefined
ವಿಪರೀತ ಸೆಕ್ಯೂರಿಟಿ ಇರೋ ಅಮೆರಿಕದ ಜಿಲ್ ಕಾಲೇಜಿನಲ್ಲಿ ಪಾಠ ಮಾಡಲು ಹೋದರೆ ಸಹೋದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಅಲ್ಲಿನ ಸಿಬ್ಬಂದಿಗೆ ಸಹಜವಾಗಿಯೇ ತೊಂದರೆಯಾಗುತ್ತದೆ.
undefined
ಮೆಟಲ್ ಡಿಟೆಕ್ಟರ್‌ನಂಥ ಭದ್ರತೆ ಇರೋದ್ರಿಂದ ಎಲ್ಲೆಡೆ ಬಿಗಿ ಬಂದೋಬಸ್ತ್ ಮಾಡುವುದು ಸುಲಭವೂ ಅಲ್ಲ. ಅಕಸ್ಮಾತ್ ತಮ್ಮ ವೃತ್ತಿ ಮುಂದುವರಿಸಿದರೆ ಜಿಲ್‌ಗೆ ಭದ್ರತೆ ನೀಡುವುದೇ ಸಿಬ್ಬಂದಿಗೆ ತಲೆ ನೋವಾಗಲಿದೆ. ಅಷ್ಟು ಸುಲಭವೂ ಅಲ್ಲ.
undefined
ಏನೋ ಎಲ್ಲವನ್ನೂ ಸರಿ ಮಾಡಿಕೊಂಡು ಜಿಲ್ ತಮ್ಮ ವೃತ್ತಿ ಮುಂದುವರಿಸಿದೆ ಹೊಸತನಕ್ಕೆ ನಾಂದಿ ಹಾಡಿದ ಅಮೆರಿಕದ ಪ್ರಥಮ ಮಹಿಳೆಯಾಗುತ್ತಾರೆ. ಏನೇ ಆಗಲಿ ಜಿಲ್ ಆಲೋಚನೆಗೆ ನಮ್ಮ ಕಡೆಯಿಂದಲೂ ಚಪ್ಪಾಳೆ.
undefined
click me!