ತನಗಿಷ್ಟವಾದ ಪುಡ್ ಪಾಯಿಂಟ್‌ನಿಂದ ಈ ಅಮೆರಿಕದ ಹುಡುಗ ತನ್ನ ಅಚ್ಚು ಮೆಟ್ಟಿನ ಸ್ಯಾಂಡ್‌ವಿಚ್ ಆರ್ಡರ್ ಮಾಡಿ ತರಿಸಿ ಕೊಂಡಿದ್ದ.
ಮನೆಗೆ ಬಂದಿದ್ದ ಸ್ಯಾಂಡ್‌ವಿಚ್ಚನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಿದ್ದ ಬಾಲಕನಿಗೊಂದು ಶಾಕ್ ಕಾದಿತ್ತು.
ಇದ್ದಕ್ಕಿದ್ದಂತೆ ಅವನಿಗೆ ಗೋಮಾಂಸದ ರುಚಿ ರಬ್ಬರ್‌ಗೆ ಬದಲಾದಂತೆ ಭಾಸವಾಯಿತು.
ಅವನು ತಕ್ಷಣ ಬಾಯಿಯಿಂದ ಸ್ಯಾಂಡ್‌ವಿಚ್ ತೆಗೆದು ನೋಡಿದಾಗ ಶಾಕ್ ಕಾದಿತ್ತು. ಅದರಲ್ಲಿ ಸುಟ್ಟ ತುಂಡನ್ನು ನೋಡಿದಾಗ ಅವನಿಗೆ ಅಘಾತವಾಯಿತು.
ವಾಸ್ತವವಾಗಿ ಅರ್ಧ ಕತ್ತರಿಸಿದ ಮನುಷ್ಯನ ಬೆರಳು ಅದರಲ್ಲಿತ್ತು . ಶಾಕ್‌ನಿಂದ ರಿಯಾನ್ ಇಡೀ ಸ್ಯಾಂಡ್‌ವಿಚ್ ಎಸೆದನು ಹಾಗೂ ತಕ್ಷಣ ವಾಂತಿ ಮಾಡಲು ಶುರು ಮಾಡಿದನು.
ಈ ವಿಷಯವನ್ನು ಮಾರಾಟಗಾರರಿಗೆ ತಿಳಿಸಿ,ಸ್ಯಾಂಡ್‌ವಿಚ್‌ನಲ್ಲಿರವ ಕೈ ಬೆರಳನ್ನು ಸಹ ತೋರಿಸಲಾಯಿತು.
ಸ್ಯಾಂಡ್‌ವಿಚ್‌ನಲ್ಲಿರುವ ಬೆರಳನ್ನು ನೋಡಿದ ಅಂಗಡಿಯವನು ಮಗುವಿಗೆ ಕ್ಷಮೆ ಕೇಳಿ ಅವನಿಗೆ ಮತ್ತೊಂದು ಸ್ಯಾಂಡ್‌ವಿಚ್ ಕೊಟ್ಟಿದ್ದಾರೆ.
ಈ ಪ್ರಕರಣದ ತನಿಖೆನಡೆಸಿದಾಗ, ಸ್ಯಾಂಡ್‌ವಿಚ್ ತಯಾರಿಸವವನ ಬೆರಳು ಚಾಕುವಿನಿಂದ ತುಂಡಾಗಿತ್ತು. ಬೆರಳಿಗಾಗಿ ಹುಡುಕಿದಾಗ ಅದು ಸಿಕ್ಕಿರಲಿಲ್ಲ.
ಆದರೆ ಶೆಫ್ ಸ್ಯಾಂಡ್‌ವಿಚ್ ಒಳಗೆ ನೋಡಲಿಲ್ಲ. ಸ್ಯಾಂಡ್‌ವಿಚ್ ಒಳಗೆ ಅರ್ಧದಷ್ಟು ಬೆರಳನ್ನು ಸಾಸ್ ಹಾಗೂ ತರಕಾರಿ ಜೊತೆ ಸೇರಿಸಿ ನೀಡಿದ್ದನು.
ಆಹಾರದಲ್ಲಿ ಈ ರೀತಿ ವಿಚಿತ್ರವಾದ ವಸ್ತುಗಳು ಸಿಕ್ಕಿರುವುದು ಇದೇ ಮೊದಲಲ್ಲ.ಇತ್ತೀಚೆಗೆ, ದೆಹಲಿಯ ಸಿಪಿಯಲ್ಲಿ ದೋಸೆಯಲ್ಲಿ ವ್ಯಕ್ತಿಯೊಬ್ಬರಿಗೆ ಸತ್ತ ಹಲ್ಲಿ ಸಿಕ್ಕಿತ್ತು. ನಂತರ ಸಾಕಷ್ಟು ಕೋಲಾಹಲ ಉಂಟಾಯಿತು.
ಇದು ಮಾತ್ರವಲ್ಲ, ಕೆಲವೊಮ್ಮೆ, ವಿದೇಶದಲ್ಲಿ ಪ್ಯಾಕ್ ಮಾಡಿದ ಆಹಾರದಿಂದಲೂ ಇಂತಹ ವಿಚಿತ್ರ ಪ್ರಕರಣಗಳು ವರದಿಯಾಗಿವೆ.