ಭಾರತದಲ್ಲಿ ವ್ಯಾಟ್ಸ್ಆ್ಯಪ್ ಚಾನೆಲ್ ಆರಂಭ, ಇದು ಹೇಗೆ ಕಾರ್ಯನಿವಹಿಸುತ್ತದೆ?

First Published | Sep 13, 2023, 9:56 PM IST

ವ್ಯಾಟ್ಸ್ಆ್ಯಪ್ ಇತ್ತೀಚೆಗೆ ಹಲವು ಹೊಸ ಫೀಚರ್ಸ್ ಬಿಡುಗಡೆ ಮಾಡಿದೆ. ಬಳಕೆದಾರರ  ಅನುಕೂಲ, ಬೇಡಿಕೆಗೆ ತಕ್ಕಂತೆ ಹೊಸ ಫೀಚರ್ ಪರಿಚಯಿಸಿದೆ.  ಇದೀಗ ಭಾರತದಲ್ಲಿ ವ್ಯಾಟ್ಸ್ಆ್ಯಪ್ ಚಾನೆಲ್ ಆರಂಭಗೊಂಡಿದೆ. ಏನಿದು ವ್ಯಾಟ್ಸ್ಆ್ಯಪ್ ಚಾನೆಲ್, ಇದು ಹೇಗೆ ಕಾರ್ಯನಿರ್ವಹಿಸುತ್ತದೆ.

ವ್ಯಾಟ್ಸ್ಆ್ಯಪ್ ಹತ್ತು ಹಲವು ಹೊಸ ಫೀಚರ್ಸ್ ಪರಿಚಯಿಸಿ ಬಳಕೆದಾರರ ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ವ್ಯಾಟ್ಸಆ್ಯಪ್ ಇದೀಗ ವ್ಯಾಟ್ಸ್ಆ್ಯಪ್ ಚಾನೆಲ್ ಆರಂಭಿಸಿದೆ. ಇದು ಇನ್‌ಸ್ಟಾಗ್ರಾಂ ಬ್ರಾಡ್‌ಕಾಸ್ಟ್ ಚಾನೆಲ್ ರೀತಿ ಕೆಲಸ ಮಾಡಲಿದೆ.

ಭಾರತ ಸೇರಿದಂತೆ 150 ದೇಶಗಲ್ಲಿ ವ್ಯಾಟ್ಸ್ಆ್ಯಪ್ ಫೀಚರ್ ಲಭ್ಯವಿದೆ.  ಬಳಕೆದಾರರು ಸುಲಭವಾಗಿ ಅಪ್‌ಡೇಟ್ ಪಡೆಯಲು ಈ ಫೀಚರ್ ಆರಂಭಿಸಲಾಗಿದೆ. ಸುಲಭವಾಗಿ ಹೇಳಬೇಕೆಂದರೆ ವ್ಯಾಟ್ಸ್ಆ್ಯಪ್ ಬ್ರಾಡ್‌ಕಾಸ್ಟ್ ಚಾನೆಲ್

Latest Videos


ಹೊಸ ಫೀಚರ್ ಮೂಲಕ ಬಳಕೆದಾರರು ವ್ಯಾಟ್ಸ್ಆ್ಯಪ್‌ನಲ್ಲಿರುವ ಯಾವುದೇ ಗ್ರೂಪ್ ಬ್ರಾಡ್‌ಕಾಸ್ಟ್ ಚಾನೆಲ್ ಸೇರಿಕೊಂಡು ಮಾಹಿತಿ ಪಡೆಯಬಹುದು.  ಉದಾಹರಣೆಗೆ ಸಿಟಿ ಕೌನ್ಸಿಲ್ ಚಾನೆಲ್, ಸ್ವಯಂ ಸೇವಕರ ಗ್ರೂಪ್ ಚಾನೆಲ್ ಸೇರಿದಂತೆ ಲಭ್ಯವಿರುವ ಬ್ರಾಡ್‌ಕಾಸ್ಟ್ ಚಾನೆಲ್.

ಬ್ರಾಡ್‌ಕಾಸ್ಟ್ ಮಾಡುವ ಅಡ್ಮಿನ್ ಕಳುಹಿಸುವ ಸಂದೇಶ, ಫೋಟೋ, ವಿಡಿಯೋಗಳು ಎಲ್ಲರನ್ನು ತಲುಪಲಿದೆ. ಈ ಗ್ರೂಪ್ ಸೇರಿಕೊಳ್ಳುವ  ಮೂಲಕ ಮಾಹಿತಿ ಪಡೆಯಲು ಸಾಧ್ಯವಿದೆ. ಯಾರು ಈ ಬ್ರಾಡ್‌ಕಾಸ್ಟ್ ಚಾನೆಲ್ ಫಾಲೋ ಮಾಡುತ್ತಿದ್ದಾರೆ ಅನ್ನೋದು ಇತರ ಫಾಲೋವರ್ಸ್‌ಗೆ ಬಹಿರಂಗವಾಗುವುದಿಲ್ಲ. 

ಬಳಕೆದಾರರು ಬ್ರಾಡ್‌ಕಾಸ್ಟ್  ಚಾನೆಲ್ ಮೂಲಕ ಮಾಹಿತಿ ಪಡೆಯಲು ಹೊಸ ಟ್ಯಾಬ್ ಸೃಷ್ಟಿಸಲಾಗಿದೆ. ಅಪ್‌ಡೇಟ್ಸ್ ಹೆಸರಿನಲ್ಲಿ ಈ ಟ್ಯಾಬ್ ಲಭ್ಯವಿದೆ. ಅಪ್‌ಡೇಟ್ಸ್ ಟ್ಯಾಬ್ ಕ್ಲಿಕ್ ಮಾಡಿದರೆ ಬ್ರಾಡ್‌ಕಾಸ್ಟ್ ಗ್ರೂಪ್‌ನ ಲಭ್ಯವಾಗಲಿದೆ.  
 

ಬಳಕೆಗಾರರು ಹೇಗೆ ಇನ್‌ಸ್ಟಾಗ್ರಾಂ ಬ್ರಾಡ್‌ಕಾಸ್ಟ್ ಚಾನೆಲ್‌ನಲ್ಲಿ ಪ್ರತಿಕ್ರಿಯೆ  ನೀಡುತ್ತಾರೋ, ಅದೇ ರೀತಿ ವ್ಯಾಟ್ಸ್ಆ್ಯಪ್ ಚಾನೆಲ್‌ನಲ್ಲೂ ಅವಕಾಶವಿದೆ.  ಈ ಗ್ರೂಪ್ ಬ್ರಾಡ್‌ಕಾಸ್ಟ್ ಚಾನೆಲ್‌ ಆಡ್ಮಿನ್ ಇನ್‌ವಿಟೇಶನ್ ಮೂಲಕ ಸೇರಿಕೊಳ್ಳಲು ಸಾಧ್ಯವಿದೆ.  

ಸದ್ಯ ಅಡ್ಮಿನ್‌ಗೆ ಎಡಿಟ್ ಅವಕಾಶವಿಲ್ಲ. ಆದರೆ ಶೀಘ್ರದಲ್ಲೇ ಅಡ್ಮಿನ್‌ಗದೆ ಎಡಿಟ್ ಫೀಚರ್ ಲಭ್ಯವಾಗಲಿದೆ. 30 ದಿನಗಳವರೆಗೆ ಎಡಿಟ್ ಅವಕಾಶ ನೀಡಲಾಗುತ್ತದೆ. ಬಳಿಕ ಆಟೋಮ್ಯಾಟಿಕ್ ಆಗಿ ಡಿಲೀಟ್ ಆಗಲಿದೆ.
 

ಅಡ್ಮಿನ್ ಗ್ರೂಪ್‌ನಲ್ಲಿ ಯಾವುದೇ ಸಂದೇಶ ಫಾರ್ವಡ್ ಮಾಡುವಾಗ ಬ್ರಾಡ್‌ಕಾಸ್ಟ್ ಚಾನೆಲ್‌ ಸೇರಿಸಿಕೊಳ್ಳಲು ಲಿಂಕ್ ಅವಕಾಶ  ಸಿಗಲಿದೆ. ಇದರಿಂದ ಬಳಕೆದಾರರಿದಂ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

click me!