ಟ್ರಾಯ್ ಸೂಚನೆಯಿಂದ ರಿಚಾರ್ಜ್ ಬೆಲೆ ಕಡಿತಗೊಳಿಸಿದ ಜಿಯೋ, ಏರ್ಟೆಲ್; ಹೊಸ ಲಿಸ್ಟ್ ಘೋಷಣೆ

Published : Jan 27, 2025, 11:17 AM IST

ಟ್ರಾಯ್ ನೀಡಿದ ಮಹತ್ವದ ಸೂಚನೆ ಮೇರೆಗೆ ಪ್ರಮುಖ ಟೆಲಿಕಾಂ ಜಿಯೋ, ಎರ್ಟೆಲ್, ವಿಐ ಕಂಪನಿಗಳು ರೀಚಾರ್ಜ್ ಪ್ಲಾನ್ ಬೆಲೆ ಪರಿಷ್ಕರಿಸಿದೆ. ಹೊಸ ಬೆಲೆ ಏನು? ಪರಿಷ್ಕತ ಪಟ್ಟಿ ಇಲ್ಲಿದೆ.

PREV
16
ಟ್ರಾಯ್ ಸೂಚನೆಯಿಂದ ರಿಚಾರ್ಜ್ ಬೆಲೆ ಕಡಿತಗೊಳಿಸಿದ ಜಿಯೋ, ಏರ್ಟೆಲ್; ಹೊಸ ಲಿಸ್ಟ್ ಘೋಷಣೆ

ಟ್ರಾಯ್ ದಿನದಿಂದ ದಿನಕ್ಕೆ ಕಠಿಣ ನಿಯಮ ಜಾರಿಗೆ ತರುತ್ತಿದೆ. ಟ್ರಾಯ್ ಸೂಚನೆಯಿಂದ ಟೆಲಿಕಾಂ ಕಂಪನಿಗಳು ರೀಚಾರ್ಜ್ ಪ್ಲಾನ್, ಆಫರ್ ಪ್ಲಾನ್ ಬದಲಿಸುತ್ತಿದೆ. ಇದೀಗ ಪ್ರಮಖ ಟೆಲಿಕಾಂ ಕಂಪನಿಗಳಾದ ಜಿಯೋ, ಎರ್ಟೆಲ್, ವಿಐ ರೀಚಾರ್ಜ್ ಪ್ಲಾನ್ ಪರಿಷ್ಕೃತಗೊಳಿಸಿದೆ. ಇತ್ತೀಚೆಗೆ ಟ್ರಾಯ್ ಸೂಚನೆಯಿಂದ ಟೆಲಿಕಾಂ ಕಂಪನಿಗಳು ವಾಯ್ಸ್ ಕಾಲ್ ಹಾಗೂ ಎಸ್ಎಂಎಸ್ ಪ್ಲಾನ್ ಬಿಡುಗಡೆ ಮಾಡಿದೆ.ಇದೀಗ ಪರಿಷ್ಕೃತ ರೀಚಾರ್ಜ್ ಪಟ್ಟಿ ಬಿಡುಗಡೆ ಮಾಡಿದೆ. ಜಿಯೋ ಪರಿಶೀಲನೆ ಆರಂಭಿಸುತ್ತಿದ್ದಂತೆ ಬೆಲೆ ಕಡಿತಗೊಳಿಸಿ ಪರಿಷ್ಕೃತ ಪ್ಲಾನ್ ಘೋಷಿಸಿದೆ.

26

ಭಾರತದಲ್ಲಿ ವಾಯ್ಸ್ ಕಾಲ್ ಹಾಗೂ ಎಸ್ಎಂಎಸ್ ಸೇವೆಯನ್ನು ಮಾತ್ರ ಬಳಸುವ ದೊಡ್ಡ ವರ್ಗವಿದೆ. ಇವರಿಗೆ ಡೇಟಾ ಅವಶ್ಯಕತೆ ಇಲ್ಲ. ಡೇಟಾ ಬಳಸುವ ಫೋನ್ ಕೂಡ ಈ ವರ್ಗದಲ್ಲಿಲ್ಲ. ಕರೆ ಹಾಗೂ ಎಸ್ಎಂಎಸ್ ಮಾತ್ರ ಬಳಸುವ ವರ್ಗ, ಬಳಸದೇ ಇರುವ ಡೇಟಾಗೆ ರೀಚಾರ್ಜ್ ಮಾಡುತ್ತಿದ್ದಾರೆ. ಹೀಗಾಗಿ ಕೇವಲ ವಾಯ್ಸ್ ಕಾಲ್ ಹಾಗೂ ಮೆಸೇಜ್‌ ರೀಚಾರ್ಜ್ ಪ್ಲಾನ್ ನೀಡುವಂತೆ ಟ್ರಾಯ್ ಸೂಚಿಸಿತ್ತು. ಇದಕ್ಕಾಗಿ ಹೊಸ ರೀಚಾರ್ಜ್ ಪ್ಲಾನ್ ನೀಡಿದೆ. ಹೀಗಾಗಿ ರೀಚಾರ್ಚ್ಪ್ಲಾನ್ ಪರಿಷ್ಕರಣೆ ಗೊಂಡಿದೆ.

36

ಈಗಾಗಲೇ ಲಾಂಚ್ ಮಾಡಿರುವ ವಾಯ್ಸ್ ಒನ್ಲಿ, ಮೆಸೇಜ್ ಪ್ಲಾನ್ ಕುರಿತು 7 ದಿನಗಳಲ್ಲಿ ಟ್ರಾಯ್ ಪರಿಶೀಲನೆ ನಡೆಸಲಿದೆ. ಹೀಗಾಗಿ ಇದೀಗ ಜಿಯೋ, ಎರ್ಟೆಲ್, ವಿಐ ಕಂಪನಿಗಳು ತ್ವರಿತವಾಗಿ ಪ್ಲಾನ್ ಪಟ್ಟಿ ಬಿಡುಗಡೆ ಮಾಡಿದೆ. ಜಿಯೋ ಇದೀಗ 336 ದಿನ ವ್ಯಾಲಿಟಿಡಿ ಪ್ಲಾನ್‌ನೊಂದಿ ವಾಯ್ಸ್, ಎಸ್ಎಂಎಸ್ ಒನ್ಲಿ ಪ್ಲಾನ್ ನೀಡಿದೆ. ಇದರ ಬೆಲೆ 1748 ರೂಪಾಯಿ. ಇದು ಪರಿಷ್ಕೃತ ದರ. ಈ ಹಿಂದೆ ಇದೇ ಪ್ಲಾನ್‌ಗೆ 1,958 ರೂಪಾಯಿ ಪಾವತಿಸಬೇಕಿತ್ತು.

46

ಜಿಯೋ 458 ರೂಪಾಯಿ ಪ್ಲಾನ್ ಇದೀಗ ಬೆಲೆ ಕಡಿತ ಮಾಡಿ 448 ರೂಪಾಯಿ ಮಾಡಲಾಗಿದೆ.ಇದು 84 ದಿನಗಳ ವ್ಯಾಲಿಟಿಡಿ ಹೊಂದಿದೆ. ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಹಾಗೂ 1,000 ಎಸ್ಎಂಎಸ್  ಉಚಿತವಾಗಿ ಸಿಗಲಿದೆ.ಇದರ ಜೊತೆಗೆ ಹೆಚ್ಚುವರಿಯಾಗಿ ಜಿಯೋ ಸಿನಿಮಾ, ಜಿಯೋ ಕ್ಲೌಡ್ ಸಬ್‌ಸ್ಕ್ರಿಪ್ಶನ್ ಸಿಗಲಿದೆ.

56

ಇತ್ತ ಏರ್ಟೆಲ್ 1959 ರೂಪಾಯಿ ರೀಚಾರ್ಜ್ ಪ್ಲಾನ್ ಇದೀಗ 1849 ರೂಪಾಯಿಗೆ ಕಡಿತಗೊಳಿಸಿದೆ. ಇದು 365 ದಿನ ವ್ಯಾಲಿಡಿಡಿ ಪ್ಲಾನ್, ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಹಾಗೂ 3600 ಎಸ್ಎಂಎಸ್ ಪಡೆಯಲಿದ್ದಾರೆ. ಜಿಯೋಗೆ ಹೋಲಿಸಿದರೆ ಏರ್ಟೆಲ್ ಯಾವುದೇ ವ್ಯಾಲಿಟಿಡಿ ದಿನ ಕಡಿತವಿಲ್ಲದೆ, ಬೆಲೆ ಕಡಿತಗೊಳಿಸಿದೆ.

66

ಏರ್ಟೆಲ್ 499 ರೂಪಾಯಿ ಪ್ಲಾನ್ ಇದೀ 469 ರೂಪಾಯಿಗೆ ಇಳಿಕೆ ಮಾಡಿದೆ. ಇದು 84 ದಿನ ವ್ಯಾಲಿಟಿಡಿ ಹೊಂದಿದೆ. ಅನ್‌ಲಿಮಿಟೆಡ್ ಕಾಲ್ ಹಾಗೂ 900 ಎಸ್ಎಂಎಸ್ ಉಚಿತವಾಗಿ ಸಿಗಲಿದೆ. ಇದರ ಜೊತೆಗೆ ಫ್ರೀ ಹೆಲೋ ಟ್ಯೂನ್, 24 ಗಂಟೆ ಅಪೋಲ್ ಸರ್ಕಲ್ ಮೆಂಬರ್‌ಶಿಪ್ ಸೇರಿದಂತೆ ಇತರ ಕೆಲ ಪ್ರಯೋಜನಗಳು ಸಿಗಲಿದೆ.

Read more Photos on
click me!

Recommended Stories