ಇನ್‌ಸ್ಟಾಗ್ರಾಂ ಬಳಕೆದಾರರಿಗೆ ಹೊಸ ಕೂಡುಗೆ, ನಿಮ್ಮ ಫೋಟೋವನ್ನೇ ಸ್ಟಿಕ್ಕರ್ ಆಗಿ ಪರಿವರ್ತಿಸುವ ಫೀಚರ್!

First Published Oct 23, 2023, 4:02 PM IST

ಮೆಟಾ ಮಾಲೀಕತ್ವದ ಇನ್‌ಸ್ಟಾಗ್ರಾಂ ಇದೀಗ ಬಳಕೆದಾರರಿಗೆ ಮತ್ತೊಂದು ಹೊಸ ಫೀಚರ್ ನಡುತ್ತಿದೆ. ಪ್ರತಿಕ್ರಿಯೆ ನೀಡುವಾಗ, ಸಂದೇಶ ಕಳುಹಿಸುವಾಗ ಅಥವಾ ಇನ್ಯಾವುದೇ ಸಂದರ್ಭದಲ್ಲಿ ಬಳಕೆದಾರರು ಫೀಡ್‌ನಲ್ಲಿರುವ ಸ್ಟಿಕ್ಕರ್ ಮಾತ್ರ ಬಳಸಬೇಕೆಂದಿಲ್ಲ. ಇದೀಗ ನಿಮ್ಮದೇ ಫೋಟೋವನ್ನು ಸ್ಕಿಕ್ಕರ್ ಆಗಿ ಪರಿವರ್ತಿಸಲು ಸಾಧ್ಯ.

ಇನ್‌ಸ್ಟಾಗ್ರಾಂ ತನ್ನ ಗ್ರಾಹಕರಿಗೆ ಕೆಲ ಫೀಚರ್ ನೀಡುವ ಮೂಲಕ ಸಾಮಾಜಿಕ ಮಾಧ್ಯಮದ ಮೇಲಿನ ಕೂತೂಹಲ ಮತ್ತಷ್ಟು ಹೆಚ್ಚಿಸಿದೆ. ಮೆಟಾ ಮಾಲೀಕತ್ವದ ಇನ್‌ಸ್ಟಾಗ್ರಾಂ ಇದೀಗ ಹೊಸ ಫೀಚರ್ ಜಾರಿಗೆ ತರುತ್ತಿದೆ.
 

ಇದೀಗ ಇನ್‌ಸ್ಟಾಗ್ರಾಂ ಬಳಕೆದಾರರು ತಾವು ಪೋಸ್ಟ್ ಮಾಡುವಾಗ, ಸಂದೇಶ ಕಳುಹಿಸವಾಗ, ಪ್ರತಿಕ್ರಿಯೆ ನೀಡುವಾಗ ಇನ್‌ಸ್ಟಾ ಫೀಡ್‌ನಲ್ಲಿರುವ ಸ್ಟಿಕ್ಕರ್ ಮಾತ್ರ ಬಳಕೆ ಮಾಡಬೇಕಾಗಿಲ್ಲ.

ಇನ್‌ಸ್ಟಾಗ್ರಾಂ ಇದೀಗ ಬಳಕೆದಾರರೇ ಹೊಸ ಹೊಸ ಸ್ಟಿಕ್ಕರ್ ಕ್ರಿಯೇಟ್ ಮಾಡಲು ಅವಕಾಶ ನೀಡಿದೆ. ವಿಶೇಷ ಅಂದರೆ ನಿಮ್ಮ ಫೋಟೋವನ್ನೂ ಸ್ಟಿಕ್ಕರ್ ಆಗಿ ಪರಿವರ್ತಿಸುವ ಟೂಲ್ ಇನ್‌ಸ್ಟಾ ನೀಡುತ್ತಿದೆ

ಇನ್‌ಸ್ಟಾಗ್ರಾಂ ಮುಖ್ಯಸ್ಥ ಆ್ಯಡಮ್ ಮೂಸೆರಿ ಈ ಕುರಿತು ಮಹತ್ವದ ಅಪ್‌ಡೇಟ್ ನೀಡಿದ್ದಾರೆ. ಇದು ಇನ್‌ಸ್ಟಾ ಬಳಕೆದಾರರಿಗೆ ಮತ್ತಷ್ಟು ಹೊತ್ತು ಸಾಮಾಜಿಕ ಮಾಧ್ಯಮದಲ್ಲಿ ಕಾಲಕಳೆಯುವಂತೆ ಮಾಡಲಿದೆ.

ಇನ್‌ಸ್ಟಾ ರೀಲ್ಸ್, ಸ್ಟೋರಿಗಳಿಗೆ ಬೇಕಾದ ಸ್ಟಿಕ್ಕರ್ ಕ್ರಿಯೇಶನ್ ಆಯ್ಕೆಯನ್ನು ನಾವು ಪರಿಚಯಿಸಲು ಸಜ್ಜಾಗಿದ್ದೇವೆ. ನಿಮ್ಮ ಮೊಬೈಲ್ ಫೋನ್ ಕ್ಯಾಮೆರಾದಲ್ಲಿ ತೆಗೆದ ಫೋಟೋಗಳನ್ನು ಈ ಟೂಲ್ ಮೂಲಕ ಸ್ಟಿಕ್ಕರ್ ಆಗಿ ಪರಿವರ್ತನೆ ಮಾಡಬಹುದು.

ನಿಮಗೆ ಸ್ಟಿಕ್ಕರ್ ಮಾಡಲು ಯೋಗ್ಯ ಎನಿಸುವ ಯಾವುದೇ ಫೋಟೋವನ್ನು ಈ ಟೂಲ್ ಮೂಲಕ ಸ್ಟಿಕ್ಕರ್ ಆಗಿ ಪರಿವರ್ತಿಲು ಸಾಧ್ಯ. ಇದಕ್ಕೆ ಹೆಚ್ಚಿನ ಶ್ರಮ ಬೇಕಿಲ್ಲ ಎಂದು ಮೂಸೆರಿ ಹೇಳಿದ್ದಾರೆ.

ನೀವು ಆಯ್ಕೆ ಮಾಡಿದ ಫೋಟೋವನ್ನು ಇನ್‌ಸ್ಟಾ ಟೂಲ್ ಮೂಲಕ ಬಳಸಿ ಪರಿವರ್ತನೆ ಮಾಡಲಾಗುತ್ತದೆ. ಫೋಟೋದ ಬ್ಯಾಕ್‌ಗ್ರೌಂಡ್ ತೆಗೆದು ಹಾಕಲಿದೆ. ಮುಖ್ಯ ಫೋಟೋವನ್ನು ಸ್ಟಿಕ್ಕರ್ ಆಗಿ ಪರಿವರ್ತನೆ ಮಾಡಲಿದೆ.
 

ಸದ್ಯ ಈ ಫೀಚರ್ ಟೆಸ್ಟಿಂಗ್ ಹಂತದಲ್ಲಿದೆ. ಪರೀಕ್ಷೆ ಸಂಪೂರ್ಣ ಯಶಸ್ವಿಗೊಂಡ ಬಳಿಕ ಹೊಸ ಫೀಚರ್ ಎಲ್ಲಾ ಇನ್‌ಸ್ಟಾಗ್ರಾಂ ಬಳಕೆದಾರರಿಗೆ ಮುಕ್ತವಾಗಲಿದೆ ಎಂದು ಮೂಸೆರಿ ಹೇಳಿದ್ದಾರೆ

ಇನ್‌ಸ್ಟಾಗ್ರಾಂ ಮೂಲಕ ಇದೀಗ ಪ್ರತಿಕ್ರಿಯೆ ಸಂವಹನ ಮತ್ತಷ್ಟು ಆತ್ಮೀಯತೆ ಪಡೆದುಕೊಳ್ಳಲಿದೆ. ಸ್ಟಿಕ್ಕರ್ ಇದೀಗ ಪ್ರಮುಖ ಪಾತ್ರ ನಿರ್ವಹಿಸಲಿದೆ ಎಂದು ಮೂಸೆರಿ ಹೇಳಿದ್ದಾರೆ.

click me!