ಬಿಎಸ್ಎನ್ಎಲ್ ಕಂಪನಿ 4ಜಿ ನೆಟ್‌ವರ್ಕ್ ದೇಶಾದ್ಯಂತ ತರಲು ಶ್ರಮಿಸುತ್ತಿದ್ದು, ಕೆಲವು ಕಡೆಗಳಲ್ಲಿ ಬಿಎಸ್ಎನ್ಎಲ್ 4g ನೆಟ್‌ವರ್ಕ್ ಪರೀಕ್ಷೆಯನ್ನು ಕೂಡ ಆರಂಭಿಸಲಾಗಿದೆ. ನಿಮ್ಮ ಏರಿಯಾದಲ್ಲಿ ಬಿಎಸ್ಎನ್ಎಲ್ 4ಜಿ ಸಿಗ್ನಲ್ ಸಿಗುತ್ತಿದೆಯಾ? ಪರೀಕ್ಷಿಸುವುದು ಹೇಗೆ?
ಕೇಂದ್ರ ಸರ್ಕಾರದ ದೂರಸಂಪರ್ಕ ಕಂಪನಿ ಬಿಎಸ್ಎನ್ಎಲ್ ಕಡಿಮೆ ಬೆಲೆಯಲ್ಲಿ ಸೂಪರ್ ಪ್ಲಾನ್‌ಗಳನ್ನು ತರುವ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿದೆ. ಖಾಸಗಿ ದೂರಸಂಪರ್ಕ ಕಂಪನಿಗಳಿಂದ ಗ್ರಾಹಕರು ಬಿಎಸ್ಎನ್ಎಲ್ ಕಡೆಗೆ ಬರುತ್ತಿದ್ದಾರೆ.
4ಜಿ ಸೇವೆಯನ್ನು ತರುವ ಕೆಲಸದಲ್ಲಿ ಬಿಎಸ್ಎನ್ಎಲ್ ತೊಡಗಿಸಿಕೊಂಡಿದೆ. ಬಿಎಸ್ಎನ್ಎಲ್‌ನ 4ಜಿ ಸೇವೆ ಮಾರ್ಚ್ ತಿಂಗಳೊಳಗೆ ಲಭ್ಯವಾಗಲಿದೆ ಮತ್ತು ಈ ವರ್ಷದ ಅಂತ್ಯದ ವೇಳೆಗೆ ದೇಶಾದ್ಯಂತ 4ಜಿ ಸೇವೆ ಲಭ್ಯವಾಗಲಿದೆ ಎಂದು ಈಗಾಗಲೇ ತಿಳಿಸಲಾಗಿದೆ. ಬಿಎಸ್ಎನ್ಎಲ್ 4ಜಿ ಟವರ್‌ಗಳನ್ನು ಅಳವಡಿಸಲಾಗುತ್ತಿದೆ. ಭಾರತದ ಹಲವು ಕಡೆಗಳಲ್ಲಿ ಬಿಎಸ್ಎನ್ಎಲ್ 4ಜಿ ನೆಟ್‌ವರ್ಕ್ ಪರೀಕ್ಷೆಯನ್ನು ಆರಂಭಿಸಲಾಗಿದೆ.
24
ಬಿಎಸ್ಎನ್ಎಲ್ ೪ಜಿ ಸೇವೆ
ನಿಮ್ಮ ಪ್ರದೇಶದಲ್ಲಿ ಬಿಎಸ್ಎನ್ಎಲ್ ೪ಜಿ ನೆಟ್‌ವರ್ಕ್ ಆರಂಭವಾಗಿದ್ದರೆ, ಕಡಿಮೆ ಬೆಲೆಯಲ್ಲಿ ಹಲವು ಲಾಭಗಳನ್ನು ಪಡೆಯಬಹುದು. ಆದರೆ, ನಿಮ್ಮ ಪ್ರದೇಶದಲ್ಲಿ ಬಿಎಸ್ಎನ್ಎಲ್ 4ಜಿ ನೆಟ್‌ವರ್ಕ್ ಸಿಗುತ್ತಿದೆಯೇ? ಇಲ್ಲವೇ? ಎಂದು ತಿಳಿದುಕೊಳ್ಳಲು ಸಂಪೂರ್ಣ ಮಾರ್ಗವನ್ನು ತಿಳಿಸುತ್ತೇನೆ.
ಅದನ್ನು ಪರಿಶೀಲಿಸಲು ಒಂದು ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಅಂದರೆ ನಿಮ್ಮ ಮೊಬೈಲ್‌ನಲ್ಲಿ Opensignal ಎಂಬ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಈ ಆ್ಯಪ್ ಮೂಲಕ ಬಿಎಸ್ಎನ್ಎಲ್ ಮಾತ್ರವಲ್ಲ, ನಿಮ್ಮ ಪ್ರದೇಶದಲ್ಲಿರುವ ಇತರ ದೂರಸಂಪರ್ಕ ಆಪರೇಟರ್‌ಗಳ ನೆಟ್‌ವರ್ಕ್ ಅನ್ನು ಕೂಡ ಪರಿಶೀಲಿಸಬಹುದು. ಇದಕ್ಕಾಗಿ ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಆ್ಯಪಲ್ ಆ್ಯಪ್ ಸ್ಟೋರ್ ಅಥವಾ ಗೂಗಲ್ ಪ್ಲೇ ಸ್ಟೋರ್‌ನಿಂದ Opensignal ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು.
34
ಬಿಎಸ್ಎನ್ಎಲ್ ೪ಜಿ ನೆಟ್‌ವರ್ಕ್
ಬಿಎಸ್ಎನ್ಎಲ್ 4ಜಿ ಸಿಗ್ನಲ್ ಸಾಮರ್ಥ್ಯವನ್ನು ಪರಿಶೀಲಿಸಲು ನೀವು ಆ್ಯಪ್‌ನ ಮುಖಪುಟಕ್ಕೆ ಹೋಗಬೇಕು. ನಂತರ ಕೆಳಗಿನ ಮೆನುವಿನಲ್ಲಿರುವ ಹಿಂದಿನ ಬಾಣದ ಗುರುತನ್ನು ಒತ್ತಬೇಕು. ನಂತರ ಮೇಲಿನ ಮೆನುವಿನಿಂದ ಬಿಎಸ್ಎನ್ಎಲ್ ಆಯ್ಕೆ ಮಾಡಿಕೊಳ್ಳಿ. ನಂತರ ನೀವು '4ಜಿ' ಆಯ್ಕೆ ಮಾಡಿಕೊಳ್ಳಬೇಕು. 2ಜಿ ಮತ್ತು 3ಜಿ ನೆಟ್‌ವರ್ಕ್ ಪರಿಶೀಲನೆಗೂ ಈ ಪ್ರಕ್ರಿಯೆಯನ್ನು ಅನುಸರಿಸಬಹುದು.
44
ಬಿಎಸ್ಎನ್ಎಲ್ ಪ್ಲಾನ್‌ಗಳು
ಇದರ ನಂತರ ನಿಮ್ಮ ಮುಂದೆ ಒಂದು ನಕ್ಷೆ ತೆರೆದುಕೊಳ್ಳುತ್ತದೆ. ನಿಮ್ಮ ಪ್ರದೇಶದಲ್ಲಿ ಹೆಚ್ಚು ಸಾಮರ್ಥ್ಯದ ಸಿಗ್ನಲ್ ನೀಡುವ ನೆಟ್‌ವರ್ಕ್ ಹಸಿರು ಬಣ್ಣದಲ್ಲಿ ತೋರಿಸುತ್ತದೆ. ದುರ್ಬಲ ನೆಟ್‌ವರ್ಕ್ ಪ್ರದೇಶ ಕೆಂಪು ಬಣ್ಣದಲ್ಲಿ ತೋರಿಸುತ್ತದೆ. ಇದಲ್ಲದೆ, ನಿಮ್ಮ ಪ್ರದೇಶದ ಡೌನ್‌ಲೋಡ್ ವೇಗ, ಅಪ್‌ಲೋಡ್ ವೇಗ ಮತ್ತು ವಿಳಂಬದ ಬಗ್ಗೆ ಮಾಹಿತಿಯನ್ನು ಈ ಆ್ಯಪ್‌ನಲ್ಲಿ ತೋರಿಸುತ್ತದೆ.