ನೀಲಿ ಡ್ರಮ್ ಖಾಲಿ ಮಾಡೋ ಟಾಸ್ಕ್, ಸ್ಪೂನ್ ನಲ್ಲಿ ನೀರು ಹಾಕಿ 99 ಸಾವಿರ ಫಾಲೋವರ್ಸ್ ಪಡೆದ ವ್ಯಕ್ತಿ !

Published : Feb 27, 2026, 04:38 PM IST

ಸೋಶಿಯಲ್ ಮೀಡಿಯಾದಲ್ಲಿ ಫಾಲೋವರ್ಸ್ ಹೆಚ್ಚಿಸಿಕೊಳ್ಳೋಕೆ ಜನ ಏನೆಲ್ಲ ಕರಸತ್ತು ಮಾಡ್ತಿದ್ದಾರೆ. ಜೀವ ಪಣಕ್ಕಿಟ್ಟು ವಿಡಿಯೋ ಮಾಡ್ತಿದ್ದಾರೆ. ಆದ್ರೆ ಸೋಶಿಯಲ್ ಮೀಡಿಯಾ ವರ್ಕ್ ಆಗೋದೇ ಬೇರೆ ರೀತಿ. ಕೆಲವೊಂದು ವಿಡಿಯೋ ಏನೂ ಮಾಡ್ದೆನೇ ವೈರಲ್ ಆಗಿರುತ್ತೆ. ಅದಕ್ಕೆ ಈ ಸ್ಪೂನ್ ಡ್ರಮ್ ವಾಟರ್ ಎಗ್ಸಾಂಪಲ್. 

PREV
16
ಸ್ಪೂನ್ ಡ್ರಮ್ ವಾಟರ್ ನಲ್ಲಿ ಏನಿದೆ?

ಸ್ಪೂನ್ ಡ್ರಮ್ ವಾಟರ್ ಅಂತ ಇನ್ಸ್ಟಾ ಅಕೌಂಟ್ ಓಪನ್ ಆಗಿದೆ. ಫೆಬ್ರವರಿ 2026ರಲ್ಲಿ ಈ ಖಾತೆಯನ್ನು ತೆರೆಯಲಾಗಿದೆ. ಇದ್ರಲ್ಲಿ 39 ವಿಡಿಯೋಗಳನ್ನು ಪೋಸ್ಟ್ ಮಾಡಲಾಗಿದೆ. ಒಂದು ವಿಡಿಯೋ ಬಿಟ್ರೆ ಉಳಿದ ಎಲ್ಲ ವಿಡಿಯೋಗಳಲ್ಲಿ ನೀವು ನೀಲಿ ಡ್ರಮ್ ನಲ್ಲಿರುವ ನೀರನ್ನು ಸ್ಪೂನ್ ನಲ್ಲಿ ತೆಗೆದು ಇನ್ನೊಂದು ಬಕೆಟ್ ಗೆ ಹಾಕೋದನ್ನು ನೋಡ್ಬಹುದು.

26
ಮೊದಲ ವಿಡಿಯೋ

ನೀವು ಇನ್ಸ್ಟಾದಲ್ಲಿ ಈ ಖಾತೆಯಿಂದ ಪೋಸ್ಟ್ ಆಗಿರುವ ಮೊದಲ ವಿಡಿಯೋ ನೋಡಿದ್ರೆ ಅದ್ರಲ್ಲಿಒಂದು ಫಾಲೋವರ್ಸ್ ಇದ್ದಾರೆ. ಕಂಟೆಂಟ್ ಕ್ರಿಯೇಟರ್, ಡ್ರಮ್ ತುಂಬ ನೀರಿದೆ. ನನ್ನ ಇನ್ಸ್ಟಾ ಖಾತೆಯಲ್ಲಿ ಎಷ್ಟು ಫಾಲೋವರ್ಸ್ ಬರ್ತಾರೋ ಅಷ್ಟು ಸ್ಪೂನ್ ನೀರನ್ನು ತೆಗೆದು ಇನ್ನೊಂದು ಬಕೆಟ್ ಗೆ ಹಾಕ್ತೇನೆ. ಇದು ಡ್ರಮ್ ನಲ್ಲಿರುವ ನೀರನ್ನು ಖಾಲಿ ಮಾಡುವ ಚಾಲೆಂಜ್ ಅಂತ ಮಾಹಿತಿ ನೀಡಿದ್ದಾರೆ. ಜೊತೆಗೆ ಒಂದೇ ಒಂದು ಫಾಲೋವರ್ಸ್ ಇರೋದ್ರಿಂದ ಒಂದು ಸ್ಪೂನ್ ನೀರನ್ನು ತೆಗೆದು ಇನ್ನೊಂದು ಬಕೆಟ್ ಗೆ ಹಾಕ್ತಾರೆ.

36
ಎರಡನೇ ದಿನ ಎಷ್ಟಾದ್ರು ಫಾಲೋವರ್ಸ್?

ಈ ಡ್ರಮ್ ಖಾಲಿ ಮಾಡುವ ಚಾಲೆಂಜ್ ಎರಡನೇ ದಿನ ಸ್ಪೂನ್ ಡ್ರಮ್ ಖಾತೆ ಫಾಲೋವರ್ಸ್ ಸಂಖ್ಯೆ 14ಕ್ಕೆ ಏರಿದೆ. ಹಾಗಾಗಿ ಕಂಟೆಂಟ್ ಕ್ರಿಯೇಟರ್ 14 ಸ್ಪೂನ್ ನೀರನ್ನು ತೆಗೆದು ಇನ್ನೊಂದು ಬಕೆಟ್ ಗೆ ಹಾಕಿದ್ದಾರೆ.

46
ಮೂರನೇ ದಿನ ಮ್ಯಾಜಿಕ್

ಮೂರನೇ ದಿನ ಸ್ಪೂನ್ ಡ್ರಮ್ ಇನ್ಸ್ಟಾ ಖಾತೆ ಫಾಲೋವರ್ಸ್ ಸಂಖ್ಯೆ 3162ಕ್ಕೆ ಏರಿದೆ. ವ್ಯಕ್ತಿ ಈ ವಿಡಿಯೋದಲ್ಲಿ ಫಾಲೋವರ್ಸ್ ಸಂಖ್ಯೆಯನ್ನು ತೋರಿಸಿ, ನೀಲಿ ಡ್ರಮ್ ನಲ್ಲಿರುವ ನೀರನ್ನು ಸ್ಪೂನ್ ನಲ್ಲಿ ತೆಗೆದು ಬಕೆಟ್ ಗೆ ಹಾಕಿದ್ದಾರೆ.

56
ಕೊನೆ ವಿಡಿಯೋದಲ್ಲಿ ಎಷ್ಟು ಫಾಲೋವರ್ಸ್?

ಡೇ 9 , ಪಾರ್ಟ್ 2 ಹೆಸರಿನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. 8 ದಿನ 92 ಸಾವಿರದ ಎರಡು ನೂರಿದ್ದ ಫಾಲೋವರ್ಸ್ ಸಂಖ್ಯೆ 9ನೇ ದಿನಕ್ಕೆ 96 ಸಾವಿರದ 300 ಆಗಿದೆ. ಕಂಟೆಂಟ್ ಕ್ರಿಯೇಟರ್ ವಿಡಿಯೋವನ್ನು ಎರಡು ಭಾಗವಾಗಿ ಮಾಡ್ಕೊಂಡು, 8ನೇ ದಿನದಿಂದ 9ನೇ ದಿನಕ್ಕೆ ಹೆಚ್ಚಾದ ಫಾಲೋವರ್ಸ್ ಸಂಖ್ಯೆ ಕೌಂಟ್ ಮಾಡಿ ಅಷ್ಟು ಸ್ಪೂನ್ ನೀರನ್ನು ಹೊರಗೆ ಹಾಕಿದ್ದಾರೆ.

66
ಒಟ್ಟೂ ಫಾಲೋವರ್ಸ್ ಸಂಖ್ಯೆ

ಇನ್ಸ್ಟಾಗ್ರಾಮ್ ಈ ಖಾತೆ ಫಾಲೋವರ್ಸ್ ಸಂಖ್ಯೆ ಸದ್ಯ 99 ಸಾವಿರಕ್ಕೆ ಏರಿಕೆ ಕಂಡಿದೆ. ಎಂಥ ವಿಡಿಯೋ ಮಾಡಿದ್ರೂ ಜನ ನೋಡ್ತಾರೆ ಅನ್ನೋದಕ್ಕೆ ಇದು ಉತ್ತಮ ನಿದರ್ಶನ. ಇಷ್ಟೊಂದು ಫಾಲೋವರ್ಸ್ ಬಂದಿರೋದು ಬಳಕೆದಾರರಿಗೆ ಅಚ್ಚರಿ ಮೂಡಿಸಿದೆ. ಒಳ್ಳೆ ವಿಡಿಯೋ ಹಾಕಿದ್ರೂ ಫಾಲೋವರ್ಸ್ ಹೆಚ್ಚಾಗ್ತಿಲ್ಲ, ನಿಮಗೆ ಹೇಗೆ ಅಂತ ಪ್ರಶ್ನೆ ಮಾಡಿದ್ದಾರೆ. ಮತ್ತೊಂದಿಷ್ಟು ಮಂದಿ ಇದು ಎಐ ನಿಂದ ಮಾಡಿರೋದು ಎನ್ನುತ್ತಿದ್ದಾರೆ.

Read more Photos on
click me!

Recommended Stories