Hyderabad Food Man: ಕೆಲಸಕ್ಕೆ ಹೋಗೋ ಮುನ್ನ ನೂರಾರು ಜನರ ಹಸಿದ ಹೊಟ್ಟೆಗೆ ಅನ್ನ; ಹೈದರಾಬಾದ್ ಈ 'ಫುಡ್ ಮ್ಯಾನ್'ಗೆ ಸಲಾಂ!

Published : Jul 04, 2026, 12:15 PM IST

ಹೈದರಾಬಾದ್‌ನಲ್ಲಿ 'ಫುಡ್ ಮ್ಯಾನ್' ಅಂತಾನೇ ಫೇಮಸ್ ಆಗಿರುವ ವ್ಯಕ್ತಿಯೊಬ್ಬರು, ತಮ್ಮ ಕಾರ್ಪೊರೇಟ್ ಕೆಲಸಕ್ಕೆ ಹೋಗುವ ಮುನ್ನ ಪ್ರತಿದಿನ ಬೆಳಗ್ಗೆ ಸರ್ಕಾರಿ ಆಸ್ಪತ್ರೆಗಳ ಹೊರಗೆ ನೂರಾರು ಜನರಿಗೆ ಉಚಿತವಾಗಿ ಪೌಷ್ಟಿಕ ಆಹಾರ ನೀಡುತ್ತಿದ್ದಾರೆ.ಈ ವಿಡಿಯೋ ವೈರಲ್ ಆಗಿದೆ.

PREV
15
Man Serves Free Meals to Hospital Attendants in Hyderabad

ಒಳ್ಳೆ ಸುದ್ದಿಗಳು ಹೆಚ್ಚು ಗಮನ ಸೆಳೆಯದ ಈ ಕಾಲ್ದಲ್ಲಿ ತೆಲಂಗಾಣದ ಹೈದರಾಬಾದ್‌ನ ವ್ಯಕ್ತಿಯೊಬ್ಬರು ಪ್ರತಿದಿನ ಸರ್ಕಾರಿ ಆಸ್ಪತ್ರೆಗಳ ಹೊರಗೆ ಬಡಜನರಿಗೆ, ರೋಗಿಗಳಿಗೆ ಉಚಿತವಾಗಿ ಊಟ ನೀಡುತ್ತಿರುವ ವಿಡಿಯೋ ಒಂದು ವೈರಲ್ ಆಗಿದ್ದು, ಅವರ ನಿಸ್ವಾರ್ಥ ಸೇವೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

'ಫುಡ್‌ಮ್ಯಾನ್' ಎಂದೇ ಖ್ಯಾತಿಯಾಗಿರುವ ಇವರು ಪ್ರತಿದಿನ ಸುಮಾರು 200-400 ಜನರಿಗೆ ಪೌಷ್ಠಿಕ ಆಹಾರವನ್ನ ತಯಾರಿಸಿ ಸ್ವತಃ ತಾವೇ ಆಸ್ಪತ್ರೆ ಮುಂಭಾಗದಲ್ಲಿ ಬಂದು ವಿತರಿಸುತ್ತಾರೆ. ಈ ಅನ್ನ ದಾಸೋಹ ನಿನ್ನೆ ಮೊನ್ನೆಯಿಂದ ನಿಡುತ್ತಿರುವುದಲ್ಲ. ಹತ್ತಾರು ವರ್ಷಗಳಿಂದಲೂ ಈ ಸೇವೆಯನ್ನು ಯಾವುದೇ ಪ್ರಚಾರದ ಸದ್ದಿಲ್ಲದೆ ಮುಂದುವರಿಸಿಕೊಂಡು ಬಂದಿದ್ದಾರೆ.

25
Helping Those Who Need It Most

ದೂರದ ಊರಿಂದ ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳು ನಾಲ್ಕೈದು ದಿನಗಳ ಕಾಲ ಆಸ್ಪತ್ರೆಯಲ್ಲೆ ಉಳಿಯಬೇಕಿರುವುದರಿಂದ ಊಟದ್ದೇ ಸಮಸ್ಯೆ, ಹೊರಗಡೆ ಹೋಟೆಲ್‌ನಲ್ಲಿ ನೂರಾರು ರೂಪಾಯಿ ತೆತ್ತು ದಿನಕ್ಕೆ ಮೂರು ಊಟ ಮಾಡುವುದು ಕಷ್ಟಸಾಧ್ಯ. ಇಂಥ ವೇಳೆ ಉಚಿತವಾಗಿ ಊಟ ಸಿಕ್ಕರೆ ಅದೆಷ್ಟು ಸಹಾಯವಾಗಬಹುದು! ವಿಡಿಯೋದಲ್ಲಿ ತೋರಿಸಿದಂತೆ ಜನರು ಊಟಕ್ಕಾಗಿ ತಾಳ್ಮೆಯಿಂದ ಸರತಿ ಸಾಲಿನಲ್ಲಿ ನಿಂತಿದ್ದಾರೆ. ತಟ್ಟೆ ಹಿಡಿದು ಸರತಿ ಸಾಲಿನಲ್ಲಿ ನಿಂತವರೆಲ್ಲ ರೋಗಿಗಳು, ಮತ್ತವರ ಕುಟುಂಬ ಸದಸ್ಯರು, ವೃದ್ಧರು, ಮಹಿಳೆಯರು, ಸೆಕ್ಯುರಿಟಿ ಗಾರ್ಡ್‌ಗಳು ಮತ್ತು ಸಾರ್ವಜನಿಕ ಆಸ್ಪತ್ರೆಗಳ ಹೊರಗೆ ಕೆಲಸ ಮಾಡುವ ಇತರರು ಸೇರಿದ್ದಾರೆ. ಇಷ್ಟು ಜನರಿಗೂ ಯಾವುದೇ ಹಣ ಪಡೆಯದೇ ಹೊಟ್ಟೆ ತುಂಬಾ ಊಟ ಹಾಕುವುದೆಂದರೆ ಈ ವ್ಯಕ್ತಿ ನೀಡುವ ಒಂದು ಹೊತ್ತಿನ ಉಚಿತ ಊಟ ನೂರಾರು ಜನರು ಅವರ ಸೇವೆಗೆ ಕೈಮುಗಿಯುತ್ತಿದ್ದಾರೆ..

35
Social Media Applauds His Kindness

ನೋಡಿ ಸೋಷಿಯಲ್ ಮೀಡಿಯಾದಲ್ಲಿ ದಿನ ಬೆಳಗಾದರೆ ಎಂತೆಂಥ ಕೆಟ್ಟ ಸುದ್ದಿಗಳು ವೈರಲ್ ಆಗುತ್ತವೆ ಆದರೆ ಇಂಥ ಸ್ಪೂರ್ತಿದಾಯಕ ಹಸಿದವರಿಗೆ ಅನ್ನ ಹಾಕುವುದು ಧರ್ಮ ಎಂಬಂತಿರುವ ಇವರ ಸೇವೆ ನಾವು ಸಲಾಂ ಹೇಳಲೇಬೇಕು. ಅನೇಕರು ಈ ವ್ಯಕ್ತಿಯನ್ನು ನಿಜವಾದ ಹಿರೋ ಎಂದು ಹಾಡಿಹೊಗಳಿದ್ದಾರೆ. ಒಬ್ಬ ವೈದ್ಯರು, 'ರೋಗಿಗಳಿಗೆ ವೈದ್ಯಕೀಯ ಆರೈಕೆ ಸಿಗುತ್ತದೆ, ಆದರೆ ಅವರ ಜೊತೆಗೆ ಬಂದವರನ್ನು ಮರೆತುಬಿಡಲಾಗುತ್ತೆ' ಎಂದು ಅರ್ಥಪೂರ್ಣವಾಗಿ ಕಾಮೆಂಟ್ ಮಾಡಿದ್ದಾರೆ. ಅನೇಕ ಸಂಬಂಧಿಕರು ಆಸ್ಪತ್ರೆಯ ನೆಲದ ಮೇಲೆ ಮಲಗಿ ದಿನ ಕಳೆಯುತ್ತಾರೆ, ಸಿಕ್ಕಿದ್ದನ್ನು ತಿನ್ನುತ್ತಾರೆ. ರೋಗಿ ಡಿಸ್ಚಾರ್ಜ್ ಆಗುವವರೆಗೆ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದೆ ಬದುಕುತ್ತಾರೆ. ಅಂತಹವರಿಗೆ ಈ ಅನ್ನದಾನವು ಅತ್ಯಂತ ಮಹತ್ವದ್ದಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಇನ್ನೊಬ್ಬ ಬಳಕೆದಾರ, 'ನಿಮ್ಮ ದಯೆ ನಿಜವಾಗಿಯೂ ಬದಲಾವಣೆ ತರುತ್ತಿದೆ. ನಿರ್ಗತಿಕರಿಗೆ ಆಹಾರ ನೀಡುವುದು ಸಹಾನುಭೂತಿ ತೋರಿಸುವುದು ಶ್ರೇಷ್ಠ ಕಾರ್ಯಗಳಲ್ಲಿ ಒಂದು' ಎಂದು ಬರೆದಿದ್ದಾರೆ. ಇನ್ನೂ ಅನೇಕರು ಇವರಿಗೆ ಉತ್ತಮ ಆರೋಗ್ಯವನ್ನು ಹಾರೈಸಿದ್ದು, ಮುಂದಿನ ವರ್ಷಗಳಲ್ಲಿಯೂ ಇನ್ನಷ್ಟು ಜನರಿಗೆ ಸಹಾಯ ಮಾಡಲಿ ಎಂದು ಆಶಿಸಿದ್ದಾರೆ.

45
More Than Just a Meal

ಈ ರೀತಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಹತ್ತಾರು ವರ್ಷಗಳ ಕಾಲ ಸೇವೆ ಮಾಡಲು ಎಲ್ಲರಿಗೂ ಸಾಧ್ಯವಿಲ್ಲ. ಪ್ರತಿದಿನ ನೂರಾರು ಜನರಿಗೆ ಆಹಾರ ಸಿದ್ಧಪಡಿಸಿ, ಬಡಿಸುವುದು ಅಸಾಧ್ಯವೆ ಸರಿ. ಆದರೆ ಬಡವರಿಗೆ ಅನ್ನ ದಾಸೋಹ ಮಾಡುವ ಬದ್ಧತೆ ಇರುವ ಇಂತವರು ಇದ್ದಾರೆ. ಸರ್ಕಾರಿ ಆಸ್ಪತ್ರೆಗಳು ಇಂಥ ಸೇವೆಗಳಿಗೆ ಅತ್ಯಂತ ಪ್ರಮುಖ ಸ್ಥಳಗಳಾಗಿವೆ. ಏಕೆಂದರೆ ರೋಗಿಗಳ ಜೊತೆಗೆ ಬಂದವರು ಬಹಳ ದಿನಗಳ ಕಾಲ ಆಸ್ಪತ್ರೆಯಲ್ಲೇ ಉಳಿದುಕೊಳ್ಳಬೇಕಾಗುತ್ತೆ.ದೈನಂದಿನ ಖರ್ಚುಗಳನ್ನು ನಿಭಾಯಿಸಲು ಹೆಣಗಾಡುತ್ತಾರೆ ಎಂದು ಕೆಲವರು ಗಮನಸೆಳೆದಿದ್ದಾರೆ. ಈ ವಿಡಿಯೋ, ಸಣ್ಣಪುಟ್ಟ ಸಹಾಯಗಳಾದರು ಸರಿ, ಇಂಥ ಸಹಾಯಗಳಿಂದ ತುಂಬಾ ಜನರೂ ಪ್ರಭಾವಿತರಾಗುತ್ತಾರೆ, 

55
The Message of Care and Willingness

ಈ ವ್ಯಕ್ತಿಯ ಗುರುತಿಗಿಂತ ಅವರು ಮಾಡುವ ಕೆಲಸವೇ ಹೆಚ್ಚು ಮುಖ್ಯ ಇಲ್ಲಿ. ಆ ವ್ಯಕ್ತಿಯೇನು ಅಗರ್ಭ ಶ್ರೀಮಂತನೇನು ಅಲ್ಲ. ಅಷ್ಟಕ್ಕೂ ಇಂತಹ ಇಚ್ಛಾಶಕ್ತಿಯಿಂದ ಇತರರಿಗೆ ಸಹಾಯ ಮಾಡಲು ಅಪಾರ ಸಂಪತ್ತು ಬೇಕಾಗಿಲ್ಲ ಅನ್ನೋದನ್ನ ಇವರ ಸೇವೆಯೇ ಒಂದು ಉತ್ತಮ ಉದಾಹರಣೆ. ಕೆಲವೊಮ್ಮೆ, ಕಾಳಜಿಯಿಂದ ಬಡಿಸಿದ ಒಂದು ಬಿಸಿ ಊಟವು ಭರವಸೆಯನ್ನು ಮರಳಿ ತರಲು ಸಾಕಾಗುತ್ತದೆ.

ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ, ಹೈದರಾಬಾದ್‌ನ 'ಫುಡ್ ಮ್ಯಾನ್' ಹಸಿದ ಜನರಿಗೆ ಆಹಾರ ನೀಡುವುದಲ್ಲದೆ, ಅಸಂಖ್ಯಾತ ಇತರೆ ಸಮುದಾಯಗಳಿಗೆ ಸಹಾಯ ಮಾಡಲು ಸ್ಫೂರ್ತಿ ನೀಡುತ್ತಿದ್ದಾರೆ. ಹೀಗಾಗಿ ಇವರು ನಿಜವಾದ ಮನ್ನಣೆಗೆ ಅರ್ಹರು ಎಂದು ಹಲವರು ನಂಬಿದ್ದಾರೆ.

Read more Photos on
click me!

Recommended Stories