ಇಸ್ಕಾನ್ ದೇವಸ್ಥಾನಕ್ಕೆ ಕ್ಯಾಬ್ ಬುಕ್; ಸೆ*ಕ್ಸ್ ಆಫರ್ ನೋಡಿ ಡ್ರೈವರ್ ಕಕ್ಕಾಬಿಕ್ಕಿ! ಚಾಟ್ ಸ್ಕ್ರೀನ್ ಶಾಟ್ ವೈರಲ್

Published : Feb 12, 2026, 05:17 PM IST

ನವದೆಹಲಿ: ಕ್ಯಾಬ್ ಡ್ರೈವರ್‌ಗಳು ದಿನನಿತ್ಯದ ತಮ್ಮ ಜೀವನದಲ್ಲಿ ಹಲವು ವಿಚಿತ್ರ ಸನ್ನಿವೇಶಗಳನ್ನು ಎದುರಿಸುತ್ತಾರೆ. ಆದರೆ ಇದೀಗ ಇಸ್ಕಾನ್ ಟೆಂಪಲ್‌ಗೆ ಕ್ಯಾಬ್ ಬುಕ್ ಮಾಡಿ, ಆಮೇಲೆ ಸೆ*ಕ್ಸ್ ಆಫರ್ ಕೊಟ್ಟಿದ್ದಾರೆ. ಇದಾದ ಬಳಿಕ ಆಗಿದ್ದೇನು ಎನ್ನುವುದನ್ನು ನೋಡೋಣ ಬನ್ನಿ. 

PREV
16
ಕ್ಯಾಬ್ ಡ್ರೈವರ್‌ಗಳು ಸಂಚಾರ ವ್ಯವಸ್ಥೆಯ ನರನಾಡಿಗಳು

ಕ್ಯಾಬ್ ಡ್ರೈವರ್‌ಗಳು ಸಂಚಾರ ವ್ಯವಸ್ಥೆಯಲ್ಲಿ ಒಂದು ರೀತಿಯ ಸಂಚಾರ ವ್ಯವಸ್ಥೆಯ ನರನಾಡಿಗಳಂತೆ ಕೆಲಸ ಮಾಡುತ್ತಾ ಬಂದಿದ್ದಾರೆ. ಶಾಲಾ ಮಕ್ಕಳು, ಉದ್ಯೋಗಿಗಳು, ಬ್ಯುಸಿನೆಸ್‌ಮನ್‌ಗಳು, ಅಶಕ್ತರು ಹಾಗೂ ವಯೋವೃದ್ದರನ್ನು ಸರಿಯಾದ ಸಮಯಕ್ಕೆ ಯಾವುದೇ ಅಡಚಣೆಯಾಗದಂತೆ ಅವರು ಸೇರಬೇಕಾದ ಜಾಗಕ್ಕೆ ತಲುಪಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ.

26
ಕ್ಯಾಬ್‌ ಡ್ರೈವರ್‌ಗಳಿಗೆ ಆಗುವ ವಿಚಿತ್ರ ಅನುಭವಗಳು

ಇಂತಹ ಕ್ಯಾಬ್ ಡ್ರೈವರ್‌ಗಳು ಕೆಲವೊಮ್ಮೆ ಊಟ-ನಿದ್ದೆಯಿಲ್ಲದೇ ತಮ್ಮ ಕಸ್ಟಮರ್ ಅವರನ್ನು ಸರಿಯಾದ ಸಮಯಕ್ಕೆ, ಸರಿಯಾದ ಜಾಗಕ್ಕೆ ಕರೆದೊಯ್ಯುತ್ತಾರೆ. ಇಂತಹ ಕ್ಯಾಬ್ ಡ್ರೈವರ್‌ಗಳಿಗೆ ದಿನಕ್ಕೊಂದು ರೀತಿಯ ವಿಚಿತ್ರ ಅನುಭವಗಳು ಆಗುತ್ತಲೇ ಇರುತ್ತವೆ. ಇದೀಗ ಅಂತಹದ್ದೇ ಒಂದು ವಿಚಿತ್ರ ಘಟನೆ ನಡೆದಿದೆ.

36
ಇಸ್ಕಾನ್ ಟೆಂಪಲ್‌ಗೆ ಕ್ಯಾಬ್ ಬುಕ್ ಮಾಡಿ, ಸೆ*ಕ್ಸ್ ಆಫರ್ ಇಟ್ಟ ಕಸ್ಟಮರ್

ಇದೀಗ ಡೆಲ್ಲಿ ಮೂಲದ ಕ್ಯಾಬ್‌ ಡ್ರೈವರ್‌ವೊಬ್ಬರು ತಮಗೆ ಎದುರಾದ ವಿಚಿತ್ರ ಆಫರ್‌ ಅನ್ನು ಸೋಷಿಯಲ್ ಮೀಡಿಯಾ ಮೂಲಕ ಬಿಚ್ಚಿಟ್ಟಿದ್ದಾರೆ. ಕಸ್ಟಮರ್‌ ಒಬ್ಬರು ಡೆಲ್ಲಿಯ ಇಸ್ಕಾನ್ ಟೆಂಪಲ್‌ಗೆ ಕ್ಯಾಬ್ ಬುಕ್ ಮಾಡಿದ್ದರು. ಇದಾದ ಬಳಿಕ ಆ ಕಸ್ಟಮರ್ ಹೆಲೋ ಬ್ರೋ! ನೀವು ಸೆ*ಕ್ಸ್ ಮಾಡುತ್ತೀರಾ? ಒಂದು ವೇಳೆ ಇಂಟ್ರೆಸ್ಟ್ ಇದ್ದರೇ ನಿಮ್ಮ ವಾಟ್ಸ್‌ಅಪ್ ನಂಬರ್ ಕಳಿಸಿ, ನಾನು ಮೆಸೇಜ್ ಮಾಡುತ್ತೇನೆ ಎಂದು ಕೇಳಿದ್ದಾರೆ.

46
ಇದನ್ನು ಕೇಳಿ ಕಕ್ಕಾಬಿಕ್ಕಿಯಾದ ಡ್ರೈವರ್

ಇದನ್ನು ಕೇಳಿದ ಕ್ಯಾಬ್ ಡ್ರೈವರ್ ಒಂದು ಸಲ ಕಕ್ಕಾಬಿಕ್ಕಿಯಾಗಿ ಹೋಗಿದ್ದಾನೆ. ಸ್ವಲ್ಪ ಸುಧಾರಿಸಿಕೊಂಡ ಕ್ಯಾಬ್ ಡ್ರೈವರ್ 'ಇಲ್ಲ' ಎಂದು ರಿಪ್ಲೇ ಮಾಡುತ್ತಾನೆ.

56
ರೈಡ್ ಕ್ಯಾನ್ಸಲ್ ಮಾಡಿದ ಕಸ್ಟಮರ್

ಯಾವಾಗ ಕ್ಯಾಬ್ ಡ್ರೈವರ್ ಇಲ್ಲ ಎನ್ನುತ್ತಾನೋ ತಕ್ಷಣವೇ ಆ ಕಸ್ಟಮರ್, ಇಸ್ಕಾನ್ ಟೆಂಪರ್ ರೈಡ್ ಕ್ಯಾನ್ಸಲ್ ಮಾಡುತ್ತಾರೆ. ಈ ಸ್ಕ್ರೀನ್‌ಶಾಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ

66
ಡ್ರೈವರ್ ಸೇಫ್ಟಿ ಬಗ್ಗೆ ಧ್ವನಿ ಎತ್ತಿದ ನೆಟ್ಟಿಗರು

ಇದಷ್ಟೇ ಅಲ್ಲದೇ ನೆಟ್ಟಿಗರು ಡ್ರೈವರ್‌ಗಳ ಸೆಫ್ಟಿ ಬಗ್ಗೆ ಧ್ವನಿ ಎತ್ತುವ ಕೆಲಸ ಮಾಡಿದ್ದಾರೆ. ಟ್ರಾವೆಲ್ ರೈಡ್ ಅಪ್ಲಿಕೇಷನ್ ಬಳಸಿಕೊಂಡು ಈ ರೀತಿ ಮಿಸ್ ಯೂಸ್ ಮಾಡುತ್ತಿರುವ ಬಗ್ಗೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

Read more Photos on
click me!

Recommended Stories