ಉತ್ತಮ ಜೀವನ ಸಾಗಿಸಲು ಹಣದ ಅವಶ್ಯಕತೆ ಇದೆ. ಆದರೆ ಹಣಕ್ಕಿಂತಲೂ ಹೆಚ್ಚು ಅವಶ್ಯಕತೆಯಾದ ಒಂದು ವಿಷ್ಯ ಎಂದರೆ ಅದು ಉತ್ತಮ ಆರೋಗ್ಯ (healthy life). ಒಂದು ವೇಳೆ ನಿಮ್ಮ ಆರೋಗ್ಯ ಉತ್ತಮವಾಗಿದ್ದರೆ, ನೀವು ಜೀವನದಲ್ಲಿ ಏನನ್ನೂ ಬೇಕಾದರೂ ಸಾಧಿಸಲು ಸಾಧ್ಯವಾಗುತ್ತೆ. ವ್ಯಕ್ತಿಯ ಆರೋಗ್ಯ ಚೆನ್ನಾಗಿರದಿದ್ದರೆ, ಶಾರೀರಿಕ ಮತ್ತು ಮಾನಸಿಕ ಸಮಸ್ಯೆ ಕೂಡ ಉಂಟಾಗುವ ಸಾಧ್ಯತೆ ಇದೆ.
ಆರೋಗ್ಯ ವ್ಯಕ್ತಿಯ ಕರಿಯರ್ ಲೈಫ್ (career life) ಮೇಲೆ ಹೆಚ್ಚಿನ ಪರಿಣಾಮ ಬೀರುತ್ತೆ. ವಾಸ್ತುವಿನಲ್ಲಿ ಪ್ರಕೃತಿಯ ಐದು ತತ್ವಗಳು ಸೇರಿವೆ. ಇದು ಸುರಕ್ಷಿತ ವಾತಾವರಣ ಕಲ್ಪಿಸಲು ಪ್ರಕೃತಿ ಮತ್ತು ನಮ್ಮ ಸುತ್ತಮುತ್ತಲು ಸಮತೋಲನ ಕಾಪಾಡುವ ಕೆಲಸ ಮಾಡುತ್ತೆ. ಇಲ್ಲಿ ಕೆಲವೊಂದು ಟಿಪ್ಸ್ ನೀಡಲಾಗಿದೆ. ಇವುಗಳನ್ನು ಪಾಲಿಸಿದರೆ ನೀವು ಉತ್ತಮ ಆರೋಗ್ಯ ಪಡೆಯಲು ಸಾಧ್ಯ.
ಮನೆಯ ಈಶಾನ್ಯ ಮೂಲೆಯಲ್ಲಿ ಅಪ್ಪಿ ತಪ್ಪಿಯೂ ಶೌಚಾಲಯಗಳು ಅಥವಾ ಮೆಟ್ಟಿಲುಗಳನ್ನು ನಿರ್ಮಿಸಬೇಡಿ. ನಿಮ್ಮ ಮನೆಯ ಈಶಾನ್ಯ ಮೂಲೆಯಲ್ಲಿ ನೀವು ಶೌಚಾಲಯ ಹೊಂದಿದ್ದರೆ, ಈ ಕಾರಣದಿಂದಾಗಿ, ನೀವು ಕಳಪೆ ಆರೋಗ್ಯ ಮತ್ತು ಹಣದ ಕೊರತೆಯಂತಹ ಸಮಸ್ಯೆಗಳನ್ನು (health and money problem) ಎದುರಿಸಬೇಕಾಗಬಹುದು.
ಅಧ್ಯಯನ ಮಾಡುವಾಗ ಅಥವಾ ಕೆಲಸ ಮಾಡುವಾಗ ಉದ್ವೇಗದಿಂದ ಮುಕ್ತವಾಗಿರಲು, ನಿಮ್ಮ ಮುಖವನ್ನು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇರಿಸಿ. ಹೀಗೆ ಮಾಡುವುದರಿಂದ ಹೆಚ್ಚು ಏಕಾಗ್ರತೆಯಿಂದ ಅಧ್ಯಯನ ಮಾಡಲು ಅಥವಾ ಕೆಲಸ ಮಾಡಲು ಸಾಧ್ಯವಾಗುತ್ತೆ.
ಅನಗತ್ಯ ಚಿಂತೆಗಳು ಮತ್ತು ತೊಂದರೆಗಳನ್ನು ಕುಟುಂಬದಿಂದ ದೂರವಿರಿಸಲು ಮನೆಯ ತೋಟದಲ್ಲಿ ಸಣ್ಣ ತುಳಸಿ ಗಿಡವನ್ನು (tulsi plant) ನೆಡಿ. ಒಳಾಂಗಣ ಸಸ್ಯಗಳನ್ನು ನೆಡುವ ಮೂಲಕ, ಮನೆ, ಕುಟುಂಬದಲ್ಲಿ ಶಾಂತಿ ನೆಲೆಸುತ್ತದೆ. ಇದನ್ನು ಟ್ರೈ ಮಾಡಿ ನೋಡಿ..
ಮನೆಯ ಈಶಾನ್ಯ ದಿಕ್ಕಿನಲ್ಲಿ ಮೇಣದ ಬತ್ತಿ ಅಥವಾ ದೀಪವನ್ನು (lamp) ಯಾವಾಗಲೂ ಹಚ್ಚಿ ಇಡಬೇಕು. ಇದರಿಂದ ಮನೆಯಲ್ಲಿ ಪಾಸಿಟಿವ್ ಎನರ್ಜಿ (positive energy) ಸದಾ ಉಳಿಯುತ್ತದೆ.
ಮಲಗುವಾಗ, ನೀವು ಯಾವಾಗಲೂ ನಿಮ್ಮ ತಲೆಯನ್ನು ದಕ್ಷಿಣ ದಿಕ್ಕಿನಲ್ಲಿ ಇಡಬೇಕು. ಇದು ವಿಶ್ರಾಂತಿಯೊಂದಿಗೆ ಉತ್ತಮ ನಿದ್ರೆಗೆ ಕಾರಣವಾಗುತ್ತದೆ. ಇದರಿಂದ ಮಾನಸಿಕ ನೆಮ್ಮದಿಯೂ ದೊರೆಯುತ್ತೆ.
ಆಹಾರವು ಯಾವುದೇ ವ್ಯಕ್ತಿಯ ಆರೋಗ್ಯಕ್ಕೆ ಸಂಬಂಧಿಸಿದ ಪ್ರಮುಖ ಮತ್ತು ಅತಿ ಮುಖ್ಯವಾದ ಅಂಶವಾಗಿದೆ. ಮನೆಯ ನೈಋತ್ಯ ಮೂಲೆ ಅಡುಗೆಮನೆಯನ್ನು (kitchen) ತಯಾರಿಸಲು ಉತ್ತಮವಾಗಿರುತ್ತದೆ. ಇಲ್ಲಿ ಆಹಾರ ತಯಾರಿಸಿ ತಿಂದರೆ ಉತ್ತಮ ಆರೋಗ್ಯ ಕಾಪಾಡಲು ಸಹಾಯವಾಗುತ್ತೆ.
ವಾಸ್ತು ಶಾಸ್ತ್ರದ ಪ್ರಕಾರ (according to vastu), ಅಡುಗೆ ಮನೆ ಮತ್ತು ಸ್ನಾನಗೃಹದ ಗೋಡೆಗಳು ಪರಸ್ಪರ ಪಕ್ಕದಲ್ಲಿರಬಾರದು. ಇದರಿಂದ ನೆಗೆಟಿವಿಟಿ ಹೆಚ್ಚುತ್ತೆ.
ಅಡುಗೆಮನೆಯ ದಿಕ್ಕನ್ನು ಬದಲಾಯಿಸುವುದು ಕೆಲವೊಮ್ಮೆ ಸ್ವಲ್ಪ ಕಷ್ಟ, ಒಂದು ವೇಳೆ ಹಾಗೆ ಆದರೆ ಅಡುಗೆಮನೆಯಲ್ಲಿನ ಒಲೆ ಪೂರ್ವ ದಿಕ್ಕಿನಲ್ಲಿರಬೇಕು.