ಜೇಬಿನಲ್ಲಿ ಈ ಒಂದು ವಸ್ತು ಇದ್ರೆ ನೋ ಟೆನ್ಷನ್, ಆರ್ಥಿಕ ವೃದ್ಧಿಗೆ ಸಿಂಪಲ್ ಟಿಪ್ಸ್

Published : May 22, 2026, 09:32 AM IST

ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾದಾಗ ನಾನಾ ಸಮಸ್ಯೆ ಕಾಡಲು ಶುರುವಾಗುತ್ತೆ. ಅನಾರೋಗ್ಯ, ಆರ್ಥಿಕ ತೊಂದರೆ, ಸಂಬಂಧದಲ್ಲಿ ಬಿರುಕು ಕಾಡುತ್ತದೆ. ನಕಾರಾತ್ಮಕ ಶಕ್ತಿ ಓಡಿಸಿ, ಧನಾತ್ಮಕ ಶಕ್ತಿ ಹೆಚ್ಚಿಸಲು ಹೆಚ್ಚಿನ ಪರಿಶ್ರಮ ಅಗತ್ಯವಿಲ್ಲ.  ಅತ್ಯಗತ್ಯವಾಗಿ ಅಡುಗೆಗೆ ಬಳಕೆ ಮಾಡುವ ಒಂದು ವಸ್ತು ಸಾಕು.

PREV
18
ಉಪ್ಪಿನಲ್ಲಿದೆ ಅಪಾರ ಶಕ್ತಿ

ಉಪ್ಪುಗಿಂತ ರುಚಿ ಬೇರೆ ಇಲ್ಲ ಎನ್ನುವ ಮಾತಿದೆ. ಅಡುಗೆಗೆ ಉಪ್ಪಿಲ್ಲ ಅಂದ್ರೆ ಅಡುಗೆ ರುಚಿಸೋದಿಲ್ಲ. ಈ ಉಪ್ಪು ಬರೀ ಅಡುಗೆಗೆ ಸೀಮಿತವಾಗಿಲ್ಲ. ವಾಸ್ತು ಶಾಸ್ತ್ರದಲ್ಲೂ ಉಪ್ಪಿಗೆ ಸಾಕಷ್ಟು ಮಹತ್ವವಿದೆ. ಒಂದು ಹಿಡಿ ಉಪ್ಪು ನಾನಾ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲದು. ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಿಸಿ, ಶಾಂತಿ ನೆಲೆಸುವಂತೆ ಮಾಡಿ, ಆರ್ಥಿಕ ವೃದ್ಧಿಗೆ ಇದು ಕಾರಣವಾಗುತ್ತದೆ.

28
ಜೇಬಿನಲ್ಲಿ ಉಪ್ಪಿಟ್ಟು ನೋಡಿ

ನಿಮ್ಮ ದುರಾದೃಷ್ಟ ಅದೃಷ್ಟವಾಗಿ ಬದಲಾಗ್ಬೇಕು, ಪಾಸಿಟಿವ್ ಎನರ್ಜಿ ಮನೆಯಲ್ಲಿ ಸದಾ ಇರ್ಬೇಕು ಅಂದ್ರೆ ಜೇಬಿನಲ್ಲಿ ಉಪ್ಪನ್ನು ಇಟ್ಟುಕೊಳ್ಳಿ. ಒಂದು ಕವರ್ ಅಥವಾ ಬಟ್ಟೆಯಲ್ಲಿ ಉಪ್ಪನ್ನು ಕಟ್ಟಿ ಅದನ್ನು ಜೇಬಿನಲ್ಲಿ ಇಟ್ಟುಕೊಂಡರೆ ಪಾಸಿಟಿವ್ ಎನರ್ಜಿ ಹೆಚ್ಚಾಗುತ್ತದೆ. ಮಾಡಿದ ಕೆಲಸಗಳಲ್ಲಿ ಯಶಸ್ಸು ಕಾಣಬಹುದು.

38
ಉಪ್ಪಿನ ಡಬ್ಬ ತುಂಬಿರಲಿ

ಅನೇಕರ ಮನೆಯಲ್ಲಿ ಉಪ್ಪಿನ ಡಬ್ಬಿ ಖಾಲಿಯಾಗಿರುತ್ತದೆ. ಖಾಲಿಯಾಗಿರುವ ಉಪ್ಪಿನ ಡಬ್ಬ ಅಶುಭ. ಮನೆಯಲ್ಲಿರುವ ಉಪ್ಪಿನ ಡಬ್ಬ ತುಂಬಿರಬೇಕು. ನೀವು ಶುಕ್ರವಾರ ಉಪ್ಪಿನ ಡಬ್ಬವನ್ನು ತುಂಬಿಸಿ. ಶುಕ್ರವಾರ ಈ ಕೆಲಸ ಮಾಡಿದ್ರೆ ಸಂಪತ್ತು, ಸಮೃದ್ಧಿ ನಿಮ್ಮದಾಗುತ್ತದೆ.

48
ಮನೆಯಿಂದ ದೂರ ಓಡುತ್ತೆ ನಕಾರಾತ್ಮಕ ಶಕ್ತಿ

ಮನೆಯೊಳಗೆ ನಕಾರಾತ್ಮಕ ಶಕ್ತಿ ಪ್ರವೇಶ ಮಾಡ್ಬಾರದು ಅಂದ್ರೆ ಮನೆಯ ಮುಖ್ಯ ಬಾಗಿಲು ಮುಖ್ಯ. ಮನೆಯ ಮುಖ್ಯ ಬಾಗಿಲು ಶುದ್ಧವಾಗಿದ್ದರೆ ಸಕಾರಾತ್ಮಕ ಶಕ್ತಿ ಪ್ರವೇಶಿಸುತ್ತದೆ. ನೀವು ಪ್ರತಿ ಶನಿವಾರ ಮುಖ್ಯಬಾಗಿಲಿಗೆ ಸ್ವಲ್ಪ ಉಪ್ಪನ್ನು ಚೆಲ್ಲಬೇಕು. ಇದ್ರಿಂದ ನಕಾರಾತ್ಮ ಶಕ್ತಿ ದೂರವಾಗುತ್ತದೆ.

58
ಪರ್ಸ್ ಬಳಿ ಉಪ್ಪು

ಸಂಬಳ ಬಂದ ದಿನ ಹಣ ತುಂಬಿದ ಪರ್ಸ್ ಬಳಿ ಅಥವಾ ಕಾರ್ಡ್ ಬಳಿ ನೀವು ಉಪ್ಪನ್ನು ಇಡಬೇಕು. ಇದು ಸಮೃದ್ಧಿಯ ಮನಸ್ಥಿತಿಯನ್ನು ಹೆಚ್ಚಿಸುತ್ತದೆ. ಉಪ್ಪು, ಹಣವನ್ನು ಆಕರ್ಷಿಸುತ್ತದೆ.

68
ಮನಸ್ಸಿನ ಶಾಂತಿಗೆ ಉಪ್ಪು ನೀರು

ನಿಮ್ಮ ಮನಸ್ಸಿನ ಶಾಂತಿಗೆ, ಕಷ್ಟಗಳನ್ನು ದೂರ ಮಾಡಲು ನೀವು ಉಪ್ಪು ನೀರಿನ ಉಪಾಯ ಮಾಡಬಹುದು. ಮೊದಲು ಕೈನಲ್ಲಿನ ಸ್ವಲ್ಪ ಉಪ್ಪನ್ನು ಹಿಡಿದುಕೊಳ್ಳಿ. ನಂತ್ರ ನಿಮ್ಮ ಮನಸ್ಸಿನ ನೋವು, ಸಮಸ್ಯೆಗಳನ್ನು ಹೇಳಿಕೊಳ್ಳಿ. ನಂತ್ರ ಶುದ್ಧ ನೀರಿನಿಂದ ಕೈತೊಳೆಯಿರಿ. ನನ್ನ ಮನಸ್ಸಿನ ಎಲ್ಲ ಭಾರವನ್ನು ಕಡಿಮೆ ಮಾಡಲಿ ಅಂತ ಮನಸ್ಸಿನಲ್ಲಿ ಹೇಳಿಕೊಂಡು ನೀವು ಕೈ ತೊಳೆಯುವುದ್ರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ. ಕಿರಿಕಿರಿ ನೀಡುತ್ತಿದ್ದ ನಿಮ್ಮ ಸಮಸ್ಯೆ ದೂರವಾಗುತ್ತದೆ.

78
ಮನೆಯ ಮೂಲೆಯಲ್ಲಿ ಉಪ್ಪು

ಒಂದು ಗಾಜಿನ ಬೌಲ್ ತೆಗೆದುಕೊಂಡು ಅದಕ್ಕೆ ಉಪ್ಪನ್ನು ಹಾಕಿ, ಅದನ್ನು ಮನೆಯ ಮೂಲೆಯಲ್ಲಿ ಇಡಿ. ಇದು ಮನೆಯ ಶಕ್ತಿಯನ್ನು ಶುದ್ಧಿಕರಿಸುತ್ತದೆ. ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ದೂರ ಮಾಡಿ, ಪಾಸಿಟಿವ್ ಎನರ್ಜಿಯನ್ನು ಹೆಚ್ಚಿಸುತ್ತದೆ. ಆದ್ರೆ ಬೌಲ್ ನಲ್ಲಿರುವ ಉಪ್ಪನ್ನು ಆಗಾಗ ಬದಲಿಸುವುದು ಅಗತ್ಯ. ತಿಂಗಳವರೆಗೆ ಉಪ್ಪನ್ನು ಬದಲಿಸದಿದ್ದರೆ ಅದು ಸಮಸ್ಯೆಗೆ ಕಾರಣವಾಗುತ್ತದೆ.

88
ಮನೆ ಸ್ವಚ್ಛತೆ

ಅತೀ ಸರಳ ವಿಧಾನದ ಮೂಲಕ ನೀವು ಇಡೀ ಮನೆಯನ್ನು ನೆಗೆಟಿವ್ ಎನರ್ಜಿಯಿಂದ ಮುಕ್ತಗೊಳಿಸಬಹುದು. ಒಂದು ಬಕೆಟ್ ನೀರಿಗೆ ಸ್ವಲ್ಪ ಉಪ್ಪನ್ನು ಹಾಕಿ, ಆ ನೀರಿನಲ್ಲಿ ಮನೆ ಕ್ಲೀನ್ ಮಾಡಿದ್ರೆ ಸಾಕು.

Read more Photos on
click me!

Recommended Stories