ಬಟ್ಟೆಯಲ್ಲೂ ಇದೆ ದೇವರು, ರಾಕ್ಷಸರ ಜಾಗ – ಯಾವ ಭಾಗದಲ್ಲಿ ಹರಿದ್ರೆ ಶುಭ?

Published : May 04, 2026, 12:59 PM IST

clothes vastu : ಇಷ್ಟಪಟ್ಟು ಹೊಸ ಬಟ್ಟೆ ಖರೀದಿ ಮಾಡಿರ್ತೇವೆ. ಆದ್ರೆ ಅಚಾನಕ್ ಆಗಿ ಬಟ್ಟೆ ಹರಿಯುತ್ತೆ ಇಲ್ಲ ಸುಟ್ಟು ಹೋಗುತ್ತೆ. ಇದ್ರಿಂದ ಸ್ವಲ್ಪ ಗೊಂದಲ ಕಾಡುತ್ತೆ. ಇದು ಶುಭವಾ ಇಲ್ಲ ಅಶುಭವಾ ಎನ್ನುವ ಪ್ರಶ್ನೆ ಕಾಡಲು ಶುರುವಾಗುತ್ತೆ. ಯಾವಾಗ ಬಟ್ಟೆ ಹರಿದ್ರೆ ಶುಭ ಎಂಬ ಮಾಹಿತಿ ಇಲ್ಲಿದೆ. 

PREV
15
ಹೊಸ ಬಟ್ಟೆ ಹರಿದ್ರೆ ಏನರ್ಥ?

ಜ್ಯೋತಿಷ್ಯ ಶಾಸ್ತ್ರದಲ್ಲಿ ಬಟ್ಟೆಯ ಬಗ್ಗೆಯೂ ಅನೇಕ ವಿಷ್ಯಗಳನ್ನು ಹೇಳಲಾಗಿದೆ. ಹೊಸ ಬಟ್ಟೆಗಳನ್ನು ಧರಿಸಲು ಶುಭ ಸಮಯದಿಂದ ಹಿಡಿದು ಹೊಸ ಬಟ್ಟೆಗಳು ಸುಟ್ಟುಹೋಗುವುದು, ಹರಿದುಹೋಗುವುದ್ರಿಂದ ಆಗುವ ಶುಭ ಮತ್ತು ಅಶುಭ ಫಲಿತಾಂಶಗಳವರೆಗೆ ಎಲ್ಲವನ್ನೂ ಜ್ಯೋತಿಷ್ಯದಲ್ಲಿ ಹೇಳಲಾಗಿದೆ.

25
ಬಟ್ಟೆಯ ಯಾವ ಭಾಗದಲ್ಲಿ ದೇವರು?

ಜ್ಯೋತಿಷ್ಯ ಶಾಸ್ತ್ರದಲ್ಲಿ ಬಟ್ಟೆಯ ಬಗ್ಗೆ ವಿವರವಾದ ಮಾಹಿತಿ ಇದೆ. ಬಟ್ಟೆಯನ್ನು ದೇವರ ಭಾಗ, ರಾಕ್ಷಸರ ಭಾಗ ಸೇರಿದಂತೆ ಬೇರೆ ಬೇರೆ ಭಾಗ ಮಾಡಲಾಗಿದೆ. ಮೊದಲು ಬಟ್ಟೆಯನ್ನು ಒಂಬತ್ತು ಭಾಗಗಳಾಗಿ ಮಡಿಸಿ. ಮೊದಲ ಭಾಗ ದೇವತೆಗಳು, ಎರಡನೆಯ ಭಾಗ ರಾಕ್ಷಸರು, ಮೂರನೆಯ ಭಾಗ ದೇವತೆಗಳು ಮತ್ತು ಲ್ಕನೇ ಭಾಗ ಮಾನವ. ಐದನೇ ಭಾಗ ರಾಕ್ಷಸನಾದ್ರೆ ಆರನೇ ಭಾಗ ಮಾನವ. ಏಳನ್ನು ದೇವರು, ಎಂಟನ್ನು ರಾಕ್ಷಸ ಹಾಗೂ ಒಂಭತ್ತನೇ ಭಾಗವನ್ನು ದೇವರ ಭಾಗವಾಗಿ ವಿಂಗಡಿಸಲಾಗಿದೆ.

35
ಇಲ್ಲಿ ಸುಟ್ಟರೆ- ಹರಿದರೆ ಶುಭ

ನಿಮ್ಮ ಬಟ್ಟೆ ಹರಿದಾಗ ಅದನ್ನು 9 ಭಾಗವಾಗಿ ವಿಂಗಡಿಸಬೇಕು. ನಂತ್ರ ಅದರಲ್ಲಿ ಯಾವ ಭಾಗ ಹರಿದಿದೆ ಇಲ್ಲ ಸುಟ್ಟಿದೆ ಎಂಬುದನ್ನು ನೋಡಬೇಕು. ದೇವತೆಗಳು ಅಥವಾ ಮನುಷ್ಯರಿಗೆ ಸೇರಿದ ಭಾಗಗಳಲ್ಲಿ ಹೊಸ ಉಡುಪು ಸುಟ್ಟರೆ, ಕತ್ತರಿಸಿದ, ಹರಿದ ಅಥವಾ ಮಣ್ಣಿನಿಂದ ಮುಚ್ಚಿದ್ದರೆ, ಅದನ್ನು ಶುಭವೆಂದು ಪರಿಗಣಿಸಬೇಕು. ರಾಕ್ಷಸರಿಗೆ ಸೇರಿದ ಭಾಗಗಳಲ್ಲಿ ಉಡುಪು ಸುಟ್ಟರೆ, ಕತ್ತರಿಸಿದರೆ ಅಥವಾ ಮಣ್ಣಿನಿಂದ ಮುಚ್ಚಿದ್ದರೆ ಇದನ್ನು ಅಶುಭವೆಂದು ಪರಿಗಣಿಸಬೇಕು.

45
ಅಶುಭ ಸಂಕೇತ ಸಿಕ್ಕಿದ್ರೆ ಏನು ಮಾಡ್ಬೇಕು?

ನಿಮ್ಮ ಬಟ್ಟೆ ರಾಕ್ಷಸ ಜಾಗದಲ್ಲಿ ಸುಟ್ಟಿದ್ದರೆ ಇಲ್ಲ ಹರಿದಿದ್ದರೆ ಅಶುಭ. ಇದು ಅಹಿತಕರ ಘಟನೆಯ ಮುನ್ಸೂಚನೆ ಆಗಿರಬಹುದು. ಹಾಗಾಗಿ ನೀವು ಸುಟ್ಟ ಹಾಗೂ ಹರಿದ ಬಟ್ಟೆಯನ್ನು ದಾನ ಮಾಡುವುದು ಉತ್ತಮ. ಇಲ್ಲವೇ ಆ ಬಟ್ಟೆಯನ್ನು ಬಳಸಬೇಡಿ. ಇದ್ರಿಂದ ಅಶುಭ ಫಲಿತಾಂಶ ಕಡಿಮೆ ಆಗುತ್ತದೆ.

55
ಮನೆಯಿಂದ ಹೊರಗೆ ಹೋಗುವ ಮುನ್ನ ಇದು ನೆನಪಿರಲಿ

ವಾಸ್ತು ಶಾಸ್ತ್ರದ ಪ್ರಕಾರ ಮನೆಯಿಂದ ಹೊರ ಹೋಗುವ ಮೊದಲು ಧರಿಸುವ ಬಟ್ಟೆ ಬಗ್ಗೆ ಗಮನ ಇರಲಿ. ಹರಿದ ಜೇಬಿರುವ ಯಾವುದೇ ಬಟ್ಟೆಯನ್ನು ನೀವು ಧರಿಸಬೇಡಿ. ಹರಿದ ಬಟ್ಟೆ ನಿಮ್ಮ ದೌರ್ಭಾಗ್ಯಕ್ಕೆ ದಾರಿಮಾಡಿ ಕೊಡುತ್ತದೆ. ಹೊಸ ಬಟ್ಟೆ ಹರಿದಾಗ ಅದನ್ನು ಎಸೆಯಲು ಅನೇಕರಿಗೆ ಮನಸ್ಸಾಗೋದಿಲ್ಲ. ಹಾಗಾಗಿ ಅದನ್ನು ಧರಿಸ್ತಾರೆ. ಆದ್ರೆ ಇದನ್ನು ಧರಿಸೋದ್ರಿಂದ ಸಮಸ್ಯೆ ಶುರುವಾಗುತ್ತದೆ. ನೀವು ಅದನ್ನು ಧರಿಸಲೇಬೇಕು ಅಂದ್ರೆ ಅದನ್ನು ಸ್ಟಿಚ್ ಮಾಡಿ ಹಾಕಿಕೊಳ್ಳಿ.

Read more Photos on
click me!

Recommended Stories