Water Vs Fire ವಾಸ್ತುಶಾಸ್ತ್ರದ ಪ್ರಕಾರ, ಅಡುಗೆಮನೆಯಲ್ಲಿ ಒಲೆ ಮತ್ತು ಸಿಂಕ್ ಅನ್ನು ಸಮಾನಂತರವಾಗಿ ಇರಿಸಿದ್ರೆ ಏನಾಗುತ್ತೆ? ಒಂದು ವೇಳೆ ಈ ರೀತಿಯಾಗಿ ಅಡುಗೆಮನೆ ವಿನ್ಯಾಸ ಮಾಡಿಕೊಂಡಿದ್ರೆ ವಾಸ್ತುಶಾಸ್ತ್ರದಲ್ಲಿ ಸರಳ ಪರಿಹಾರಗಳಿವೆ. ಈ ದೋಷಕ್ಕೆ ಸರಳ ಪರಿಹಾರಗಳನ್ನು ಲೇಖನದಲ್ಲಿ ವಿವರಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಮಾಡರ್ನ್ ಕಿಚನ್ ಹೆಸರಿನಲ್ಲಿ ಜನರು ವಾಸ್ತುಶಾಸ್ತ್ರಗಳನ್ನು ಮರೆಯುತ್ತಿದ್ದಾರೆ. ಇಂದು ಬಹುತೇಕರು ಸ್ಥಳವಾಕಾಶ ಮತ್ತು ಜ್ಞಾನದ ಕೊರತೆಯಿಂದ ಒಂದೇ ಸ್ಲ್ಯಾಬ್ ಅಥವಾ ಸಮಾನಂತರವಾಗಿಯೇ ಒಲೆ ಮತ್ತು ಸಿಂಕ್ ನಿರ್ಮಿಸುತ್ತಾರೆ. ಇದನ್ನು ಬಹುತೇಕರು ಸಾಮಾನ್ಯ ಎಂದು ಪರಿಗಣಿಸುತ್ತಾರೆ. ಆದ್ರೆ ವಾಸ್ತುಶಾಸ್ತ್ರದಲ್ಲಿ ಇದೊಂದು ಮನೆಗೆ ಸಂಬಂಧಿಸಿದ ಗಂಭೀರ ಸಮಸ್ಯೆಯಾಗಿದೆ. ತಪ್ಪಾದ ದಿಕ್ಕು ಮತ್ತು ವಿನ್ಯಾಸ ನಕಾರಾತ್ಮಕ ಪರಿಣಾಮಕ್ಕೆ ಕಾರಣವಾಗುತ್ತದೆ.
25
ಪಂಚಭೂತ
ಭೂಮಿ, ಆಕಾಶ, ನೀರು, ಗಾಳಿ ಮತ್ತು ಬೆಂಕಿ ಎಂಬ ಐದು ಅಂಶಗಳನ್ನು ವಾಸ್ತುಶಾಸ್ತ್ರ ಒಳಗೊಂಡಿದೆ. ಈ ಪಂಚಭೂತಗಳಲ್ಲಿ ಅಡುಗೆಮನೆ ನೀರು ಮತ್ತು ಬೆಂಕಿ ಎಂಬ ಅಂಶಗಳನ್ನು ಒಳಗೊಂಡಿರುತ್ತದೆ. ನಿಮ್ಮ ಅಡುಗೆಮನೆ ಬೆಂಕಿ ಮತ್ತು ನೀರಿನ ಸಮತೋಲನ ಹೊಂದಿರಬೇಕು. ಇದು ಮನೆಯಲ್ಲಿನ ನೆಮ್ಮದಿ ಮತ್ತು ಕುಟುಂಬ ಸದಸ್ಯರ ಆರೋಗ್ಯಕ್ಕೆ ಸಂಬಂಧಿಸಿರುತ್ತದೆ.
35
ಗ್ಯಾಸ್ ಸ್ಟೌವ್ ಅಥವಾ ಒಲೆ
ಅಡುಗೆಮನೆಯಲ್ಲಿನ ಗ್ಯಾಸ್ ಸ್ಟೌವ್‌ನ್ನು ಬೆಂಕಿ ಎಂದು ಪರಿಗಣಿಸಲಾಗುತ್ತದೆ. ಆಗ್ನೇಯ ದಿಕ್ಕಿನಲ್ಲಿರಿಸಲಾಗುವ ಗ್ಯಾಸ್ ಸ್ಟೌವ್ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಳ ಮಾಡುತ್ತದೆ. ಈ ಒಂದು ನಡೆ ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಳ ಮಾಡುತ್ತೆ ಎಂದರ್ಥ. ಅಡುಗೆಮನೆ ಆಗ್ನೇಯ ಮಂಗಳಕರ ದಿಕ್ಕು.
ಸಿಂಕ್ ಮತ್ತು ಸ್ಟೌವ್ ಅಕ್ಕ-ಪಕ್ಕ ಅಥವಾ ಸಮನಾಂತರವಾಗಿದ್ರೆ ನೀರು-ಬೆಂಕಿಯನ್ನು ಜೊತೆಯಲ್ಲಿರಿಸಿದಂತಾಗುತ್ತದೆ. ಈ ಎರಡು ಅಂಶಗಳ ನಡುವೆ ಸಂಘರ್ಷ ಉಂಟಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಈ ರೀತಿಯ ರಚನೆ ಮಾನಸಿಕ ಒತ್ತಡ, ಸಂಗಾತಿ ನಡುವೆ ಮನಸ್ತಾಪ, ಆರ್ಥಿಕ ನಷ್ಟ ಮತ್ತು ಮನೆಯಲ್ಲಿರೋ ಜನರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆಗಳಿರುತ್ತೆ ಎಂದು ವಾಸ್ತುಶಾಸ್ತ್ರ ಹೇಳುತ್ತದೆ.
55
ಈ ಸಮಸ್ಯೆಗೆ ಪರಿಹಾರ ಏನು?
ಸಿಂಕ್ ಪಕ್ಕವೇ ಗ್ಯಾಸ್ ಸ್ಟೌವ್ ಇರಿಸೋದನ್ನು ತಪ್ಪಿಸಿ. ಈ ಎರಡರ ನಡುವೆ ಅಂತರ ಕಾಯ್ದುಕೊಳ್ಳೋದನ್ನು ಉತ್ತಮ ಎಂದು ಉತ್ತಮ ಎಂದು ಪರಿಗಣಿಸಲಾಗುತ್ತದೆ.
ಸಮಾನಂತರವಾಗಿದ್ರೆ ಒಲೆ ಮತ್ತು ಸಿಂಕ್ ಮಧ್ಯೆ ಚಿಕ್ಕದಾದ ಗೋಡೆ ನಿರ್ಮಿಸಿಕೊಳ್ಳೋದು ಉತ್ತಮ.
ಸಿಂಕ್ ಮತ್ತು ಗ್ಯಾಸ್ ಸ್ಟೌವ್ ಮಧ್ಯೆ ಭಾರವಾದ ವಸ್ತುಗಳನ್ನು ಇರಿಸುವ ಮೂಲಕ ದೋಷ ಪರಿಹಾರ ಮಾಡಿಕೊಳ್ಳಬಹುದು