1. ಪಿ.ವಿ ಸಿಂಧು(ಬ್ಯಾಡ್ಮಿಂಟನ್)
ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ.ವಿ. ಸಿಂಧು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಪರ ಪದಕ ಗೆಲ್ಲಬಲ್ಲ ನೆಚ್ಚಿನ ಆಟಗಾರ್ತಿ ಎನಿಸಿದ್ದಾರೆ. ಗಾಯದ ಸಮಸ್ಯೆಯಿಂದ ಕರೋಲಿನ ಮರೀನ್ ಒಲಿಂಪಿಕ್ಸ್‌ನಿಂದ ಹೊರಬಿದ್ದಿರುವುದರಿಂದ ವಿಶ್ವ ನಂ.7ನೇ ಶ್ರೇಯಾಂಕಿತೆ ಸಿಂಧು ಈ ಬಾರಿ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ದಾರೆ.
2012ರ ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಮೇರಿ ಕೋಮ್ ಕುರಿತಂತೆ ಪರಿಚಯಿಸುವ ಅಗತ್ಯವೇ ಇಲ್ಲ. 51 ಕೆ.ಜಿ ವಿಭಾಗದ ಬಾಕ್ಸಿಂಗ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಮೂರು ಮಕ್ಕಳ ತಾಯಿ ಮೇರಿ ಮೇಲೆ ಇಡೀ ದೇಶವೇ ಕಣ್ಣಿಟ್ಟಿದೆ. ಮೇರಿ ಒಲಿಂಪಿಕ್ಸ್‌ನಲ್ಲಿ ಮತ್ತೊಂದು ಪದಕ ಗೆದ್ದರೆ ಅಚ್ಚರಿಪಡುವಂತಿಲ್ಲ.
3. ಅಮಿತ್ ಫಂಗಲ್(ಬಾಕ್ಸಿಂಗ್)
52 ಕೆ.ಜಿ ವಿಭಾಗದ ಬಾಕ್ಸಿಂಗ್ ನಲ್ಲಿ ಭಾರತ ಪ್ರತಿನಿಧಿಸಲಿರುವ ಅಮಿತ್ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಬಾಕ್ಸರ್ ಎನಿಸಿರುವ ಫಂಗಲ್ ಟೋಕಿಯೋದಲ್ಲಿ ಪದಕಕ್ಕೆ ಪಂಚ್ ಮಾಡಲು ಎದುರು ನೋಡುತ್ತಿದ್ದಾರೆ.
ರಿಯೋ ಒಲಿಂಪಿಕ್ಸ್‌ನಲ್ಲೇ ಪದಕದ ಭರವಸೆ ಮೂಡಿಸಿದ್ದ ವಿನೇಶ್ ಪೊಗಾಟ್, ಕುಸ್ತಿವೇಳೆ ಎದುರಾಳಿ ಆಟಗಾರ್ತಿಯ ಎಡವಟ್ಟಿನಿಂದಾಗಿ ಗಾಯಗೊಂಡು ಹೊರಬಿದ್ದು ನಿರಾಸೆ ಅನುಭವಿಸಿದ್ದರು. ಆ ಬಳಿಕ ಏಷ್ಯನ್ ಗೇಮ್ಸ್, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕಗಳ ಬೇಟೆಯಾಡಿರುವ ವಿನೇಶ್ ಈ ಬಾರಿ 53 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದು, ಪದಕ ಗೆಲ್ಲಬಲ್ಲ ಪ್ರಬಲ ಸ್ಪರ್ಧಿಗಳಲ್ಲಿ ಒಬ್ಬರೆನಿಸಿದ್ದಾರೆ.
ಭಾರತದ ನಂ.1 ಕುಸ್ತಿಪಟು ಭಜರಂಗ್ ಪೂನಿಯಾ ವಿಶ್ವ ಚಾಂಪಿಯನ್‌ಶಿಪ್ ಹಾಗೂ ಏಷ್ಯನ್ ಗೇಮ್ಸ್‌ನಲ್ಲಿ ಈಗಾಗಲೇ ಪದಕಗಳಿಗೆ ಕೊರಳೊಡ್ಡಿದ್ದು, ಇದೀಗ ಒಲಿಂಪಿಕ್ಸ್ ಪದಕಗಳ ಮೇಲೆ ಕಣ್ಣಿಟ್ಟಿದ್ದಾರೆ. ಭಜರಂಗ್ 65 ಕೆ.ಜಿ ವಿಭಾಗದಲ್ಲಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿದ್ದು, ಭಾರತ ಪರ ಪದಕ ಗೆಲ್ಲಬಲ್ಲ ನೆಚ್ಚಿನ ಆಟಗಾರ ಎನಿಸಿದ್ದಾರೆ.
ಹರ್ಯಾಣ ಮೂಲದ ಯುವ ಜಾವಲಿನ್ ಪಟು ನೀರಜ್ ಚೋಪ್ರಾ 2018ರ ಏಷ್ಯನ್ ಗೇಮ್ಸ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದು, 88.07 ಮೀಟರ್ ದೂರ ಎಸೆಯುವ ಮೂಲಕ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ. ಇದೀಗ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕದ ಮೇಲೆ ನೀರಜ್ ಕಣ್ಣಿಟ್ಟಿದ್ದಾರೆ.
7. ಮೀರಾಬಾಯಿ ಚಾನು(ವೇಟ್‌ಲಿಫ್ಟಿಂಗ್)
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಏಕೈಕ ಕ್ರೀಡಾಪಟುವೆಂದರೆ ಅದು ಮೀರಾಬಾಯಿ ಚಾನು. 49 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಚಾನು ಇತ್ತೀಚೆಗಷ್ಟೇ 119 ಕೆ.ಜಿ ಬಾರ ಎತ್ತುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದು, ಒಲಿಂಪಿಕ್ಸ್‌ನಲ್ಲಿ ಪದಕದ ಭರವಸೆ ಮೂಡಿಸಿದ್ದಾರೆ.
ಉತ್ತರ ಪ್ರದೇಶ ಮೂಲದ 19 ವರ್ಷದ ಯುವ ಶೂಟರ್ ಸೌರಭ್ ಚೌಧರಿ ಈ ಬಾರಿ ಪದಕ ಗೆಲ್ಲಬಲ್ಲ ನೆಚ್ಚಿನ ಶೂಟರ್‌ಗಳಲ್ಲಿ ಒಬ್ಬರು ಎನಿಸಿದ್ದಾರೆ. 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಹಾಗೂ ಮನು ಭಾಕರ್ ಜತೆ ಮಿಶ್ರ ತಂಡದಲ್ಲಿ ಸೌರಭ್ ಪದಕದ ಆಸೆ ಮೂಡಿಸಿದ್ದಾರೆ.
ಶೂಟಿಂಗ್‌ನಲ್ಲಿ ಪದಕ ಗೆಲ್ಲಬಲ್ಲ ಮತ್ತೊಂದು ನಿರೀಕ್ಷೆಯೆಂದರೆ ಅದು ಮನು ಭಾಕರ್, 10 ಮೀಟರ್ ಏರ್ ಪಿಸ್ತೂಲ್ ಮತ್ತು 25 ಮೀಟರ್ ಪಿಸ್ತೂಲ್ ವಿಭಾಗದಲ್ಲಿ ಮನು ಭಾಕರ್ ಗಮನಾರ್ಹ ಪ್ರದರ್ಶನ ತೋರಿದ್ದಾರೆ. ಶೂಟಿಂಗ್ ವಿಶ್ವಕಪ್‌ನಲ್ಲಿ ಮನು ಭಾಕರ್ 5 ಚಿನ್ನ ಒಂದು ಬೆಳ್ಳಿ ಸಹಿತ 6 ಪದಕ ಜಯಿಸಿದ್ದಾರೆ.
10. ದೀಪಿಕಾ ಕುಮಾರಿ(ಆರ್ಚರಿ)
ನಂ.1 ಆರ್ಚರಿ ಪಟು ದೀಪಿಕಾ ಕುಮಾರಿ ರೆಡ್ ಹಾಟ್ ಫಾರ್ಮ್‌ನಲ್ಲಿದ್ದು, ಟೋಕಿಯೋ ಒಲಿಂಪಿಕ್ಸ್‌ಗೂ ಮುನ್ನ ಹ್ಯಾಟ್ರಿಕ್ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ. ಆರ್ಚರಿಯಲ್ಲಿ ವೈಯುಕ್ತಿಕ ವಿಭಾಗ, ಮಿಶ್ರ ವಿಭಾಗ ಹಾಗೂ ಮಹಿಳಾ ತಂಡದ ವಿಭಾಗದಲ್ಲಿ ಪದಕದ ಬೇಟೆಯಾಡಲು ದೀಪಿಕಾ ಸಜ್ಜಾಗಿದ್ದಾರೆ.