ಟೋಕಿಯೋ ಒಲಿಂಪಿಕ್ಸ್‌ನಿಂದ ಹಿಂದೆ ಸರಿದ ಮೊದಲ ರಾಷ್ಟ್ರ ಉತ್ತರ ಕೊರಿಯಾ..!

Suvarna News   | Asianet News
Published : Jun 09, 2021, 01:00 PM ISTUpdated : Jun 09, 2021, 01:16 PM IST

ನವದೆಹಲಿ: 2020ರಲ್ಲಿ ನಡೆಯಬೇಕಿದ್ದ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟವು ಮುಂಬರುವ ಜುಲೈ 23ರಿಂದ ಆಗಸ್ಟ್‌ 08ರವರೆಗೆ ಟೋಕಿಯೋದಲ್ಲಿ ನಡೆಯಲಿದೆ. ಕೋವಿಡ್ 19 ಭೀತಿಯಿಂದಾಗಿ ಆಯೋಜಕರು ಸರಿಯಾದ ಸಂದರ್ಭದಲ್ಲಿ ಟೂರ್ನಿ ಸಂಘಟಿಸಲು ಸಾಕಷ್ಟು ಪರದಾಡುತ್ತಿದ್ದಾರೆ. ಹೀಗಿರುವಾಗಲೇ ಕೋವಿಡ್‌ ಭೀತಿಯಿಂದಾಗಿ ಟೋಕಿಯೋ ಒಲಿಂಪಿಕ್ಸ್‌ನಿಂದ ಉತ್ತರ ಕೊರಿಯಾ ಹಿಂದೆ ಸರಿದಿದೆ.

PREV
17
ಟೋಕಿಯೋ ಒಲಿಂಪಿಕ್ಸ್‌ನಿಂದ ಹಿಂದೆ ಸರಿದ ಮೊದಲ ರಾಷ್ಟ್ರ ಉತ್ತರ ಕೊರಿಯಾ..!

ಅಚ್ಚರಿಯ ಬೆಳವಣಿಗೆ ಎನ್ನುವಂತೆ ಕೋವಿಡ್ 19 ಪಿಡುಗನ್ನು ಗಮನದಲ್ಲಿಟ್ಟುಕೊಂಡು ಮುಂಬರುವ ಟೋಕಿಯೋ ಒಲಿಂಪಿಕ್ಸ್‌ನಿಂದ ಉತ್ತರ ಕೊರಿಯಾ ಹಿಂದೆ ಸರಿದಿದೆ. ಈ ಮೂಲಕ ಮುಂಬರುವ ಟೋಕಿಯೋ ಒಲಿಂಪಿಕ್ಸ್‌ನಿಂದ ಹಿಂದೆ ಸರಿದ ಮೊದಲ ಹಾಗೂ ಏಕೈಕ ರಾಷ್ಟ್ರ ಎನಿಸಿದೆ.

27

ಕೆಲವು ತಿಂಗಳುಗಳ ಹಿಂದಷ್ಟೇ ಉತ್ತರ ಕೊರಿಯಾ ಕ್ರೀಡಾಸಚಿವರು, ಜಾಗತಿಕ ಪಿಡುಗಾದ ಕೋವಿಡ್ 19ನಿಂದ ಆಟಗಾರರನ್ನು ಕಾಪಾಡಲು ಒಲಿಂಪಿಕ್ಸ್‌ನಿಂದ ಹಿಂದೆ ಸರಿಯುವ ತೀರ್ಮಾನ ಒಳ್ಳೆಯದು ಎಂದಿದ್ದರು. 1988ರ ಸಿಯೊಲ್ ಒಲಿಂಪಿಕ್ಸ್‌ ಬಳಿಕ ಜಾಗತಿಕ ಕ್ರೀಡಾ ಜಾತ್ರೆ ಎನಿಸಿರುವ ಒಲಿಂಪಿಕ್ಸ್‌ನಿಂದ ಹಿಂದೆ ಸರಿದ ಮೊದಲ ರಾಷ್ಟ್ರ ಎನಿಸಿದೆ.
 
37

ಸದ್ಯ ಕೋವಿಡ್ ವಿರುದ್ದ ಹೋರಾಡುತ್ತಿರುವ ಉತ್ತರ ಕೋರಿಯಾದಲ್ಲಿ ಲಾಕ್‌ಡೌನ್ ಜಾರಿಯಲ್ಲಿದೆ.

47

ಸದ್ಯದಲ್ಲಿ ಉತ್ತರ ಕೊರಿಯಾದಾದ್ಯಂತ ಲಾಕ್‌ಡೌನ್ ತೆರುವುಗೊಳಿಸುವ ಯಾವುದೇ ಲಕ್ಷಣಗಳು ಕಂಡು ಬರುತ್ತಿಲ್ಲ. ಇದರ ಜತೆಗೆ ಲಾಕ್‌ಡೌನ್ ವಿಚಾರವನ್ನು ರಾಜಕೀಕರಣ ಮಾಡಲಾಗುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

57

ಈ ಮೊದಲು ಉತ್ತರ ಕೊರಿಯಾವು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಮೂಲಕ ಎರಡು ದೇಶಗಳ ಸಂಬಂಧವನ್ನು ಬಲಪಡಿಸಲು ಎದುರು ನೋಡುತ್ತಿರುವುದಾಗಿ ತಿಳಿಸಿತ್ತು. 
 
67

ಇದೀಗ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯು ಉತ್ತರ ಕೊರಿಯಾದಿಂದಾಗಿ ತೆರವಾದ ಸ್ಥಾನಗಳನ್ನು ಇತರರಿಗೆ ನೀಡಲು ಚಿಂತನೆ ನಡೆಸುತ್ತಿದೆ.

77

ಹೀಗಿದ್ದೂ ಉತ್ತರ ಕೊರಿಯಾದಿಂದ ಟೋಕಿಯೋ ಒಲಿಂಪಿಕ್ಸ್‌ನಿಂದ ಅಧಿಕೃತವಾಗಿ ಹಿಂದೆ ಸರಿದಿರುವುದಾಗಿ ಪ್ರಕಟಣೆ ಹೊರಡಿಸಿಲ್ಲ, ಆದರೆ ಐಒಸಿ ತನ್ನ ತಯಾರಿ ಆರಂಭಿಸಿದೆ. 

click me!

Recommended Stories