ಭಾರತಕ್ಕೂ ಬರಲಿದೆ ಟೆಸ್ಲಾ, ಎಲೋನ್ ಮಸ್ಕ್‌ ಉದ್ಯಮಕ್ಕೆ ಹೂಡಿಕೆ ಮಾಡ್ತಿರೋ ಬಿಲಿಯನೇರ್ ಯಾರು?

First Published | Apr 10, 2024, 1:08 PM IST

ಟೆಸ್ಲಾ ಸಿಇಒ ಎಲೋನ್ ಮಸ್ಕ್ ಭಾರತಕ್ಕೆ ಎಲೆಕ್ಟ್ರಿಕ್ ವಾಹನಗಳನ್ನು ತರುವ ಬಗ್ಗೆ ತೀವ್ರ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ. ಆದರೆ ಭಾರತದಲ್ಲಿ ಈ ದುಬಾರಿ ಕಾರಿನ ಉತ್ಪಾದನೆಗೆ ಹೂಡಿಕೆ ಮಾಡ್ತಿರೋ ಬಿಲಿಯನೇರ್ ಯಾರು?

ಟೆಸ್ಲಾ ಸಿಇಒ ಎಲೋನ್ ಮಸ್ಕ್ ಭಾರತಕ್ಕೆ ಎಲೆಕ್ಟ್ರಿಕ್ ವಾಹನಗಳನ್ನು ತರುವ ಬಗ್ಗೆ ತೀವ್ರ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ. ಆದರೆ ಭಾರತದಲ್ಲಿ ಈ ದುಬಾರಿ ಕಾರಿನ ಉತ್ಪಾದನೆಗೆ ಹೂಡಿಕೆ ಮಾಡ್ತಿರೋ ಬಿಲಿಯನೇರ್ ಯಾರು?

ವರದಿಯ ಪ್ರಕಾರ, ಎಲೋನ್ ಮಸ್ಕ್‌ನ ಟೆಸ್ಲಾ ಭಾರತದಲ್ಲಿ ತನ್ನ ಉದ್ಯಮವನ್ನು ಆರಂಭಿಸಲು ಸ್ಥಳೀಯ ಪಾಲುದಾರರನ್ನು ಹುಡುಕುತ್ತಿದೆ. 
ಇತ್ತೀಚೆಗೆ, ನಾರ್ಜೆಸ್ ಬ್ಯಾಂಕ್ ಇನ್ವೆಸ್ಟ್‌ಮೆಂಟ್ ಮ್ಯಾನೇಜ್‌ಮೆಂಟ್‌ನ ಸಿಇಒ ಆಗಿರುವ ನಿಕೊಲಾಯ್ ಟ್ಯಾಂಗೆನ್ ತಮ್ಮ X ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ 'ಸ್ಪೇಸಸ್' ಸಭೆಯಲ್ಲಿ, ಈ ಮಾಹಿತಿಯನ್ನು ನೀಡಿದ್ದಾರೆ.

Tap to resize

ಎಕ್ಸ್ ಸ್ಪೇಸ್‌ಗಳ ಇತ್ತೀಚಿನ ಸಂಭಾಷಣೆಯಲ್ಲಿ, ಎಲೋನ್ ಮಸ್ಕ್ , ಭಾರತದಲ್ಲಿ ವಿಸ್ತರಿಸುತ್ತಿರುವ ಜನಸಂಖ್ಯೆಯಿಂದಾಗಿ ಇತರ ರಾಷ್ಟ್ರಗಳಲ್ಲಿರುವಂತೆ ಅಲ್ಲಿಯೂ ಎಲೆಕ್ಟ್ರಿಕ್ ಕಾರುಗಳು ಅಗತ್ಯವಾಗಿ ಬೇಕಾಗಿದೆ ಎಂದು ಒತ್ತಿ ಹೇಳಿದರು.

ಮಾಹಿತಿಗಳ ಪ್ರಕಾರ, ಇವಿ ಕಂಪನಿಯು ಜಂಟಿ ಉದ್ಯಮದ ಅಡಿಯಲ್ಲಿ ದೇಶದಲ್ಲಿ ಟೆಸ್ಲಾ ಉತ್ಪಾದನಾ ಸೌಲಭ್ಯವನ್ನು ನಿರ್ಮಿಸಲು ಮುಕೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್‌ನೊಂದಿಗೆ ಮಾತುಕತೆ ನಡೆಸುತ್ತಿದೆ.

16697 ಕೋಟಿ ರೂ.ಗಿಂತಲೂ ಹೆಚ್ಚಿನ ಸ್ಥಾವರಕ್ಕಾಗಿ ಭಾರತದಲ್ಲಿ ಸ್ಥಳಗಳನ್ನು ಹುಡುಕಲು ಟೆಸ್ಲಾ ಈ ತಿಂಗಳು ತಂಡವನ್ನು ಕಳುಹಿಸುತ್ತಿದೆ ಎಂದು ವರದಿಯಾಗಿದೆ. 

ವರದಿಯ ಪ್ರಕಾರ, ಮೂಲಗಳನ್ನು ಉಲ್ಲೇಖಿಸಿ, ಎಲೋನ್ ಮಸ್ಕ್ ನಡೆಸುತ್ತಿರುವ ಕಂಪನಿಯು ಸ್ಥಾವರಕ್ಕಾಗಿ ಸೈಟ್‌ಗಳನ್ನು ಅಧ್ಯಯನ ಮಾಡಲು ಎಪ್ರಿಲ್ ಅಂತ್ಯದ ವೇಳೆಗೆ ಅಮೇರಿಕಾದಿಂದ ತಂಡವನ್ನು ಕಳುಹಿಸುತ್ತದೆ.

ವರದಿಯ ಪ್ರಕಾರ, ಮೂಲಗಳನ್ನು ಉಲ್ಲೇಖಿಸಿ, ಎಲೋನ್ ಮಸ್ಕ್ ನಡೆಸುತ್ತಿರುವ ಕಂಪನಿಯು ಸ್ಥಾವರಕ್ಕಾಗಿ ಸೈಟ್‌ಗಳನ್ನು ಅಧ್ಯಯನ ಮಾಡಲು ಎಪ್ರಿಲ್ ಅಂತ್ಯದ ವೇಳೆಗೆ ಅಮೇರಿಕಾದಿಂದ ತಂಡವನ್ನು ಕಳುಹಿಸುತ್ತದೆ.

Latest Videos

click me!