ನೀವು ಮನಸ್ಸಲ್ಲಿ ಅಂದುಕೊಂಡಿದ್ದು ಇನ್‌ಸ್ಟಾಗ್ರಾಮ್‌ನಲ್ಲಿ ಜಾಹೀರಾತಾಗಿ ಬರುತ್ತಿದೆಯೇ? ತಪ್ಪಿಸಲು ಇಲ್ಲಿದೆ ಸಿಂಪಲ್ ದಾರಿ

Published : Feb 01, 2026, 04:01 PM IST

ನಿಮ್ಮ ಕೆಲಸಕ್ಕೆ ಸಂಬಂಧಿಸಿದ ವಿಷಯಗಳು, ನೀವು ಪ್ರಸ್ತುತ ಎದುರಿಸುತ್ತಿರುವ ಮಾನಸಿಕ ಸ್ಥಿತಿ. ಇದಕ್ಕೆ ಸಂಬಂಧಿಸಿದ ಜಾಹೀರಾತುಗಳು ಮತ್ತು ರೀಲ್‌ಗಳು ಇನ್‌ಸ್ಟಾಗ್ರಾಮ್‌ನಲ್ಲಿ ನಿಮ್ಮ ಮುಂದೆ ಪದೇ ಪದೇ ಕಾಣಿಸಿಕೊಳ್ಳುತ್ತಿರಬಹುದು. ಇದಕ್ಕೆ ಕಾರಣವೇನು? 

PREV
16
ಇನ್‌ಸ್ಟಾಗ್ರಾಂ ನಿಮ್ಮ ಮನಸ್ಸನ್ನು ಓದುತ್ತಿದೆಯೇ?

ಕೆಲವೊಮ್ಮೆ ನಮ್ಮ ಮನಸ್ಸಲ್ಲಿ ಇರೋದು ಇನ್‌ಸ್ಟಾಗ್ರಾಂಗೆ ಗೊತ್ತಿದೆ ಅನಿಸುತ್ತದೆ. ನೀವು ಸ್ನೇಹಿತರೊಂದಿಗೆ ಏನಾದ್ರೂ ಹೇಳಿದ ತಕ್ಷಣ, ಅದಕ್ಕೆ ಸಂಬಂಧಿಸಿದ ಜಾಹೀರಾತು ಕಾಣಿಸುತ್ತದೆ. ಇದೇ ಕಾರಣಕ್ಕೆ ಇನ್‌ಸ್ಟಾಗ್ರಾಂನಂತಹ ಆ್ಯಪ್‌ಗಳು ನಮ್ಮ ಮಾತುಗಳನ್ನು ಕೇಳಿಸಿಕೊಳ್ಳುತ್ತಿವೆ ಎಂದು ಹಲವರು ನಂಬುತ್ತಾರೆ. ಆದರೆ ಸತ್ಯ ಬೇರೆಯೇ ಇದೆ.

26
ಜಾಹೀರಾತುಗಳು ಇಷ್ಟು ನಿಖರವಾಗಿರುವುದು ಹೇಗೆ?

ಇನ್‌ಸ್ಟಾಗ್ರಾಂ ಮುಖ್ಯಸ್ಥ ಆಡಮ್ ಮೊಸ್ಸೆರಿ ಪ್ರಕಾರ, ನೀವು ಏನು ಕಾಮೆಂಟ್ ಮಾಡುತ್ತೀರಿ, ಸೇವ್ ಮಾಡುತ್ತೀರಿ ಅಥವಾ ಹುಡುಕುತ್ತೀರಿ ಎಂಬುದನ್ನು ಆ್ಯಪ್ ವಿಶ್ಲೇಷಿಸುತ್ತದೆ. ಅಲ್ಲದೆ, ಮೆಟಾ ಪಿಕ್ಸೆಲ್‌ಗಳು ಮತ್ತು ಕುಕೀಗಳ ಮೂಲಕ ನಿಮ್ಮ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಲಾಗುತ್ತದೆ. ಇದರಿಂದಾಗಿ ಹೈಪರ್-ಪರ್ಸನಲೈಸ್ಡ್ ಜಾಹೀರಾತುಗಳು ಬರುತ್ತವೆ.

36
ಇಂತಹ ಜಾಹೀರಾತುಗಳನ್ನು ನೋಡುವುದನ್ನು ನಿಲ್ಲಿಸುವುದು ಹೇಗೆ?

ಒಂದು ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ನಿಮ್ಮ ಬಗ್ಗೆ ಇಷ್ಟೆಲ್ಲಾ ತಿಳಿದುಕೊಂಡಿದೆ ಎಂಬ ಭಾವನೆ ಹಲವರನ್ನು ಚಿಂತೆಗೀಡುಮಾಡಬಹುದು. ನೀವೂ ಅವರಲ್ಲೊಬ್ಬರಾಗಿದ್ದರೆ, ಈ ಡೇಟಾ ಟ್ರ್ಯಾಕಿಂಗ್ ನಿಲ್ಲಿಸಲು ಎರಡು ದಾರಿಗಳಿವೆ. ಮೆಟಾ ತನ್ನ ವಿವಿಧ ಪ್ಲಾಟ್‌ಫಾರ್ಮ್‌ಗಳಿಗೆ ಜಾಹೀರಾತು ಸೆಟ್ಟಿಂಗ್ಸ್‌ಗಳನ್ನು ಕೇಂದ್ರೀಕರಿಸಿದೆ.

46
ವಿಧಾನ 1: ಮೆಟಾ ಅಕೌಂಟ್ಸ್ ಸೆಂಟರ್

1. ನಿಮ್ಮ ಫೋನ್‌ನಲ್ಲಿ ಇನ್‌ಸ್ಟಾಗ್ರಾಂ ಆ್ಯಪ್‌ಗೆ ಹೋಗಿ. 

2. ನಿಮ್ಮ ಪ್ರೊಫೈಲ್‌ಗೆ ಹೋಗಿ, ಮೇಲಿನ ಬಲ ಮೂಲೆಯಲ್ಲಿರುವ ಹ್ಯಾಂಬರ್ಗರ್ ಮೆನು ಮೇಲೆ ಟ್ಯಾಪ್ ಮಾಡಿ. 

3. ಅಕೌಂಟ್ಸ್ ಸೆಂಟರ್ ಮೇಲೆ ಟ್ಯಾಪ್ ಮಾಡಿ. 

4. ಕೆಳಗೆ ಸ್ಕ್ರಾಲ್ ಮಾಡಿ ಆ್ಯಡ್ ಪ್ರಿಫರೆನ್ಸಸ್ ಮೇಲೆ ಕ್ಲಿಕ್ ಮಾಡಿ.

56
5. ವಿಧಾನ 2: ಮೆಟಾ ಆಕ್ಟಿವಿಟಿ ಸಂಪರ್ಕ ಕಡಿತಗೊಳಿಸಿ

1. ಅಕೌಂಟ್ಸ್ ಸೆಂಟರ್‌ಗೆ ಹೋಗಿ. 

2. ಇನ್ಫಾರ್ಮಶನ್ ಆ್ಯಂಡ್ ಪರ್ಮಿಷನ್ಸ್ ಆಯ್ಕೆಮಾಡಿ. 

3. ಮೆಟಾ ಟೆಕ್ನಾಲಜೀಸ್‌ನಿಂದ ನಿಮ್ಮ ಆಕ್ಟಿವಿಟಿ ಆಫ್ ಮಾಡಿ. 

4. ಡಿಸ್‌ಕನೆಕ್ಟ್ ಸ್ಪೆಸಿಫಿಕ್ ಆಕ್ಟಿವಿಟಿ ಆಯ್ಕೆಮಾಡಿ. 

5. ಈಗ ನಿಮ್ಮ ಪಾಸ್‌ವರ್ಡ್ ಕೇಳುತ್ತದೆ.

66
6. ಗಮನಿಸಬೇಕಾದ ಪ್ರಮುಖ ವಿಷಯಗಳು

ಈ ಸೆಟ್ಟಿಂಗ್ಸ್ ಬದಲಾವಣೆಗಳು ನಿಮ್ಮ ಫೀಡ್‌ನಲ್ಲಿನ ಜಾಹೀರಾತುಗಳ ಸಂಖ್ಯೆಯನ್ನು ಕಡಿಮೆ ಮಾಡುವುದಿಲ್ಲ. ಬದಲಿಗೆ, ನಿಮ್ಮ ಹುಡುಕಾಟದ ಆಧಾರದ ಮೇಲೆ ವೈಯಕ್ತಿಕಗೊಳಿಸಿದ ಜಾಹೀರಾತುಗಳನ್ನು ಕಡಿಮೆ ಮಾಡುತ್ತದೆ. ನಿಮ್ಮ ಆದ್ಯತೆ ಅಥವಾ ಬ್ರೌಸಿಂಗ್ ಹಿಸ್ಟರಿ ಆಧರಿಸಿದ ಜಾಹೀರಾತುಗಳು ಇನ್ನು ಮುಂದೆ ಹೆಚ್ಚು ವೈಯಕ್ತಿಕವಾಗಿ ಕಾಣಿಸುವುದಿಲ್ಲ.

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Photos on
click me!

Recommended Stories