ಉಪರಾಷ್ಟ್ರಪತಿ ಮೆಚ್ಚುಗೆಗೆ ಪಾತ್ರರಾದ ಉಡುಪಿ ಆಶಾ ವರ್ಕರ್ ಯಕ್ಷಗಾನ ಕಲಾವಿದೆಯೂ ಹೌದು

First Published | Jul 26, 2020, 10:27 PM IST

ಕೊರೋನಾದ ವಿರುದ್ಧ ರಾತ್ರಿಹಗಲೆನ್ನದೇ ದುಡಿಯುತ್ತಿರುವ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪೆರ್ಣಂಕಿಲ ಗ್ರಾಮದ ಆಶಾ ಕಾರ್ಯಕರ್ತೆ ರಾಜೀವಿ ಅವರು ಉಪರಾಷ್ಟ್ರಪತಿ ಅವರ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಸ್ವತಃ ಆಟೋ ಚಾಲಕಿಯೂ ಆಗಿರುವ ರಾಜೀವಿ, ಗುರುವಾರ ಮುಂಜಾವ 3 ಗಂಟೆಗೆ ಹೆರಿಗೆ ನೋವಿನಿಂದ ನರಳುತಿದ್ದ ತುಂಬು ಗರ್ಭಿಣಿಯೊಬ್ಬರನ್ನು ತಮ್ಮ ಆಟೋದಲ್ಲಿ ಪೆರ್ಣಂಕಿಲದಿಂದ 20 ಕಿಮಿ ದೂರದ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ದಾಖಲಿಸಿ, ಆಕೆಯ ಸುಖ ಪ್ರಸವಕ್ಕೆ ಕಾರಣರಾಗಿದ್ದಾರೆ. ರಾಜೀವಿ ಆಶಾ ಕಾರ್ಯಕರ್ತೆ, ಆಟೋ ಚಾಲಕಿ. ಅಷ್ಟೇ ಅಲ್ಲ  ಯಕ್ಷಗಾನ ಕಲಾವಿದೆಯೂ ಹೌದು.

ಕೊರೋನಾದ ವಿರುದ್ಧ ರಾತ್ರಿಹಗಲೆನ್ನದೇ ದುಡಿಯುತ್ತಿರುವ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪೆರ್ಣಂಕಿಲ ಗ್ರಾಮದ ಆಶಾ ಕಾರ್ಯಕರ್ತೆ ರಾಜೀವಿ ಅವರು ಉಪರಾಷ್ಟ್ರಪತಿ ಅವರ ಶ್ಲಾಘನೆಗೆ ಪಾತ್ರರಾಗಿದ್ದಾರೆ.
undefined
ಉಪರಾಷ್ಟ್ರಪತಿ ಶ್ಲಾಘನೆಗೆ ಪಾತ್ರರಾದ ಉಡುಪಿ ಆಶಾ ಕಾರ್ಯಕರ್ತೆ, ಆಟೋ ಚಾಲಕಿ ಕೂಡ ಹೌದು.
undefined

Latest Videos


ಸ್ವತಃ ಆಟೋ ಚಾಲಕಿಯೂ ಆಗಿರುವ ರಾಜೀವಿ, ಗುರುವಾರ ಮುಂಜಾವ 3 ಗಂಟೆಗೆ ಹೆರಿಗೆ ನೋವಿನಿಂದ ನರಳುತಿದ್ದ ತುಂಬು ಗರ್ಭಿಣಿಯೊಬ್ಬರನ್ನು ತಮ್ಮ ಆಟೋದಲ್ಲಿ ಪೆರ್ಣಂಕಿಲದಿಂದ 20 ಕಿಮಿ ದೂರದ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ದಾಖಲಿಸಿ, ಆಕೆಯ ಸುಖ ಪ್ರಸವಕ್ಕೆ ಕಾರಣರಾಗಿದ್ದಾರೆ.
undefined
ಈ ಬಗ್ಗೆ ಮಾಹಿತಿ ಪಡೆದ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಟ್ವೀಟ್ ಮೂಲಕ ರಾಜೀವಿ ಅವರನ್ನು ಶ್ಲಾಘಿಸಿದ್ದಾರೆ.
undefined
ಉಪರಾಷ್ಟ್ರಪತಿ ಶ್ಲಾಘನೆಗೆ ಪಾತ್ರರಾದ ಉಡುಪಿ ಆಶಾ ಕಾರ್ಯಕರ್ತೆ ರಾಜೀವಿ ಯಕ್ಷಗಾನ ಕಲಾವಿದೆಯೂ ಹೌದು
undefined
ರಾಜೀವಿ ಅವರು ಗರ್ಭಿಣಿಯನ್ನು ಉಚಿತವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದು ಇದೇ ಮೊದಲೇನಲ್ಲ
undefined
ಈಗಾಗಲೇ 15ಕ್ಕೂ ಹೆಚ್ಚು ಗರ್ಭಿಣಿಯರನ್ನು, ಬಹುತೇಕ ಸಂದರ್ಭದಲ್ಲಿ ಅಪರಾತ್ರಿಗಳಲ್ಲಿಯೇ ವಾಹನ ಸೌಕರ್ಯಗಳಿಲ್ಲದ ತಮ್ಮೂರಿನಿಂದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
undefined
ಹೆರಿಗೆ ನೋವು ಯಾವ ಹೊತ್ತಿನಲ್ಲಿ ಬರುತ್ತದೇ ಹೇಳುವುದಕ್ಕಾಗುವುದಿಲ್ಲ, ಅದಕ್ಕೆ ನಾನೇ ನಮ್ಮಂತಹ ಬಡವರ ಮನೆಯ ಗರ್ಭಿಣಿಯರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ನಿರ್ಧಾರ ಮಾಡಿದೆ ಸರ್ ಎಂದು ಅಭಿಮಾನದಿಂದ ಹೇಳುತ್ತಾರೆ ರಾಜೀವಿ.
undefined
ಒಟ್ಟಿನಲ್ಲಿ ಆಶಾ ಕಾರ್ಯಕರ್ತೆ, ಆಟೋ ಚಾಲಕಿ, ಸಮಾಜ ಸೇವಕಿ ಜೊತಗೆ ಯಕ್ಷಗಾನ ಕಲಾವಿದೆಯಾಗಿರುವ ರಾಜೀವಿ ಮಲ್ಟಿ ಟ್ಯಾಲೆಂಟ್
undefined
click me!