ದಸರಾ ಉದ್ಘಾಟನೆಗೆ ಎಸ್.ಎಂ.ಕೃಷ್ಣಗೆ ಅಧಿಕೃತ ಆಹ್ವಾನ: ಸಿಎಂ ಬೊಮ್ಮಾಯಿಗೆ ಚಿರಋಣಿ ಎಂದ SMK

Suvarna News   | Asianet News
Published : Oct 02, 2021, 02:35 PM IST

ಬೆಂಗಳೂರು(ಅ.02): ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಎಸ್.ಎಂ.ಕೃಷ್ಣ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮೈಸೂರು ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಮೈಸೂರು-ಕೊಡಗು  ಸಂಸದ ಪ್ರತಾಪ್ ಸಿಂಹ ಹಾಗೂ ಮೈಸೂರು ಜಿಲ್ಲಾಡಳಿತದಿಂದ ನಾಡಹಬ್ಬ ದಸರಾ ಉದ್ಘಾಟನೆಗೆ ಅಧಿಕೃತವಾಗಿ ಆಹ್ವಾನ ನೀಡಿದೆ.

PREV
14
ದಸರಾ ಉದ್ಘಾಟನೆಗೆ ಎಸ್.ಎಂ.ಕೃಷ್ಣಗೆ ಅಧಿಕೃತ ಆಹ್ವಾನ: ಸಿಎಂ ಬೊಮ್ಮಾಯಿಗೆ ಚಿರಋಣಿ ಎಂದ SMK

ಬೆಂಗಳೂರಿನ ಸದಾಶಿವನಗರದಲ್ಲಿರುವ ಎಸ್.ಎಂ.ಕೃಷ್ಣ ನಿವಾಸಕ್ಕೆ ತೆರಳಿದ ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಎಸ್.ಟಿ. ಸೋಮಶೇಖರ್, ಸಂಸದ ಪ್ರತಾಪ್ ಸಿಂಹ ಅವರು ವಿಶ್ವವಿಖ್ಯಾತ ಮೈಸೂರು ದಸರಾ ಹಬ್ಬವನ್ನ ಉದ್ಘಾಟಿಸುವಂತೆ ಅಧಿಕೃತವಾಗಿ ಆಹ್ವಾನ ನೀಡಿದ್ದಾರೆ. 

24

34

ನಮ್ಮ ಯೋಗ್ಯತೆಗೂ ಮೀರಿ ನನ್ನ ಮೇಲೆ ಜವಾಬ್ದಾರಿ ಹೊರಿಸಿದ್ದಾರೆ. ನಾಡಹಬ್ಬ ನಾಡ ದೇವತೆಯ ಆಶೀರ್ವಾದದಿಂದ. ಈಗ ತಾನೆ ಅಧಿಕಾರಿವಹಿಸಿಕೊಂಡಿರುವ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಬೇರೆ ರಾಜ್ಯಗಳಿಂತಲೂ ಉತ್ತಮವಾಗಿ ರಾಜ್ಯವನ್ನ ಕೊಂಡೊಯ್ಯಲಿ ಅಂತ ಹರಿಸುತ್ತೆನೆ ಅಂತ ಎಸ್.ಎಂ.ಕೃಷ್ಣ ಹೇಳಿದ್ದಾರೆ. 

44

ಮೈಸೂರಿನಲ್ಲಿ ಕಳೆದ ದಿನಗಳನ್ನ ನೆನಸಿಕೊಂಡ ಎಸ್‌ಎಂಕೆ ಮಹಾರಾಜ ಕಾಲೇಜು, ಒಂಟಿಕೊಪ್ಪಲಿನಲ್ಲಿ ಕಳೆದ ಕ್ಷಣಗಳನ್ನ ಮೆಲುಕು ಹಾಕಿದ್ದಾರೆ. ಮೈಸೂರು ಮತ್ತು ರಾಮಕೃಷ್ಣ ಆಶ್ರಮ ನನ್ನ ಏಳಿಗೆ ಮೇಲೆ ಪರಿಣಾಮ ಬೀರಿದೆ. ದಸರಾ ಉದ್ಘಾಟನೆಗೆ ಅವಕಾಶ ಕೊಟ್ಟ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ನಾನು ಚಿರಋಣಿಯಾಗಿದ್ದೇನೆ ಅಂತ ಎಸ್.ಎಂ. ಕೃಷ್ಣ ಹೇಳಿದ್ದಾರೆ. 

click me!

Recommended Stories