108 ಆ್ಯಂಬ್ಯುಲೆನ್ಸ್‌ ಸೇವೆ ಆಮೂಲಾಗ್ರ ಬದಲಾವಣೆ: ಸಚಿವ ಸುಧಾಕರ್‌

Kannadaprabha News   | Asianet News
Published : Nov 07, 2020, 12:24 PM IST

ಬೆಂಗಳೂರು(ನ.07): ರಾಜ್ಯದಲ್ಲಿ ಗುಣಮಟ್ಟದ ಹಾಗೂ ತುರ್ತು ಆ್ಯಂಬುಲೆನ್ಸ್‌ ಸೇವೆ ಒದಗಿಸುವ ನಿಟ್ಟಿನಲ್ಲಿ ತುರ್ತು ಆರೋಗ್ಯ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರಬೇಕು. ಈ ನಿಟ್ಟಿನಲ್ಲಿ ದೇಶಕ್ಕೇ ಮಾದರಿಯಾದಂತಹ ಆ್ಯಂಬುಲೆನ್ಸ್‌ ಸೇವೆ ಒದಗಿಸುವ ನಿಟ್ಟಿನಲ್ಲಿ ಟೆಂಡರ್‌ ಕರಾರು ಕರಡು ಸಿದ್ಧಪಡಿಸಿ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

PREV
17
108 ಆ್ಯಂಬ್ಯುಲೆನ್ಸ್‌ ಸೇವೆ ಆಮೂಲಾಗ್ರ ಬದಲಾವಣೆ: ಸಚಿವ ಸುಧಾಕರ್‌

ಶುಕ್ರವಾರ ವಿಧಾನಸೌಧದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು, ಮಾಹಿತಿ ತಂತ್ರಜ್ಞಾನ ವಲಯದ ಐಡೆಕ್‌ ಕಂಪನಿ ಪ್ರತಿನಿಧಿಗಳು ಹಾಗೂ ತಜ್ಞರೊಂದಿಗೆ ಗುತ್ತಿಗೆ ಕರಾರು ಕರಡು ಕುರಿತು ಸಭೆ ನಡೆಸಿದರು.

27

ಈ ವೇಳೆ ಮಾತನಾಡಿದ ಅವರು, ನೋಡಲು ಆ್ಯಂಬ್ಯುಲೆನ್ಸ್‌ ಸೇವೆಯಂತಿದ್ದು ಉದ್ದೇಶಿತ ಸೌಲಭ್ಯ ಇಲ್ಲದ ವ್ಯವಸ್ಥೆ ನಮಗೆ ಬೇಕಿಲ್ಲ. ಸರ್ಕಾರ ವೆಚ್ಚ ಮಾಡುವ ಪ್ರತಿ ಪೈಸೆಯ ಪ್ರಯೋಜನ ರೋಗಿಗಳಿಗೆ ಸಿಗಬೇಕು. ಒಂದು ವೇಳೆ ನಮ್ಮ ಆಶಯಕ್ಕೆ ತಕ್ಕ ಸೇವೆ ಸಿಗದಿದ್ದರೆ ಗುತ್ತಿಗೆ ರದ್ದತಿಗೂ ಅವಕಾಶ ಇರಬೇಕು. ಗುತ್ತಿಗೆ ರದ್ದುಪಡಿಸಿದರೂ ಯಾವುದೇ ಕಾನೂನಿನ ತಕರಾರು ಎದುರಾಗಬಾರದು. ಆ ರೀತಿ ನಿಯಮಾವಳಿ ರೂಪಿಸಿ ಎಂದು ಹೇಳಿದರು.

37

ತುರ್ತು ಆರೋಗ್ಯ ಸೇವೆ ನೀಡುವಲ್ಲಿ ಆ್ಯಂಬುಲೆನ್ಸ್‌ ಸೇವೆ ಮಹತ್ವದ್ದಾಗಿದೆ. ಸದ್ಯ ನಮ್ಮಲ್ಲಿರುವ ವ್ಯವಸ್ಥೆಯಲ್ಲಿ ಸಾಕಷ್ಟುಲೋಪಗಳಿವೆ. ಅವುಗಳನ್ನು ನಿವಾರಿಸಿ ಆಧುನಿಕ ಹಾಗೂ ತಂತ್ರಜ್ಞಾನ ಆಧಾರಿತ ನಿರ್ವಹಣಾ ಪದ್ಧತಿ ಅಳವಡಿಸಿಕೊಂಡ ಕಂಪನಿಗೆ ಟೆಂಡರ್‌ ನೀಡಬೇಕು. ಪ್ರಸ್ತುತ 108 ಆ್ಯಂಬುಲೆನ್ಸ್‌ ಸೇವೆಗೆ ಸರ್ಕಾರ ಭಾರೀ ಹಣ ವೆಚ್ಚ ಮಾಡುತ್ತಿದೆ. ಆದರೆ ಅದಕ್ಕೆ ತಕ್ಕ ಸೇವೆ ಸಿಗುತ್ತಿಲ್ಲ. ಈ ಹಿಂದೆ ಅನೇಕ ಸಲ ಕರೆ ಮಾಡಿದರೂ ಆಂಬ್ಯುಲೆನ್ಸ್‌ ಸಿಗದೆ ಬೇರೆ ವಾಹನಗಳಲ್ಲಿ ಹೋಗಿರುವ ಹಾಗೂ ಅಪಘಾತದಲ್ಲಿ ಸರಿಯಾದ ವೇಳೆಗೆ ಸೇವೆ ಸಿಗದ ನಿದರ್ಶನಗಳಿವೆ. ಅಂತಹ ಘಟನೆಗಳು ಮರುಕಳಿಸಬಾರದು ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.

47

ಟೆಂಡರ್‌ನ್ನು ಜಾಗತಿಕ ಮಟ್ಟದಲ್ಲೇ ಕರೆಯಬೇಕು. ಜೊತೆಗೆ ಯಾವ ಹಂತದಲ್ಲೂ ಲೋಪವಾಗದಂತೆ ಆರ್ಥಿಕ ಹಾಗೂ ತಾಂತ್ರಿಕವಾಗಿ ಶಕ್ತವಾದ ಕಂಪನಿಗಳು ಮಾತ್ರವೇ ಬಿಡ್‌ನಲ್ಲಿ ಪಾಲ್ಗೊಳ್ಳುವಂತೆ ಕಠಿಣ ಷರತ್ತು ವಿಧಿಸಬೇಕು. ಭೌಗೋಳಿಕ ಸವಾಲು ಮತ್ತು ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಕರಾರು ವಿಧಿಸಬೇಕು. ಯಾವುದೇ ರೋಗಿ ಕರೆ ಅಥವಾ ಸಂದೇಶ ನೀಡಿದರೆ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸಿ ಸೇವೆ ಒದಗಿಸುವಂತಿರಬೇಕು ಎಂದರು.

57

ಆಂಬ್ಯುಲೆನ್ಸ್‌ ನಿಗದಿ ಆಗುವ ಮೊದಲು ಕಾಲ್‌ ಸೆಂಟರ್‌ನಲ್ಲಿ ಕರೆ ಸ್ವೀಕರಿಸಿ ಸಮೀಪದಲ್ಲಿ ಇರುವ ಆ್ಯಂಬುಲೆನ್ಸ್‌ನ್ನು ಕಳುಹಿಸಬೇಕು. ಪ್ರಾಥಮಿಕ ಚಿಕಿತ್ಸೆ ನೀಡಲು ತರಬೇತಿ ಪಡೆದ ಸಿಬ್ಬಂದಿ ಇರಬೇಕು. ಹತ್ತಿರದ ಆ್ಯಂಬುಲೆನ್ಸ್‌ ಗುರುತಿಸಿ ಸೂಕ್ತ ವೇಳೆಗೆ ಸೇವೆ ಒದಗಿಸಲು ಪ್ರಸ್ತುತ ಊಬರ್‌ ಹಾಗೂ ಓಲಾ ಬಳಸುತ್ತಿರುವಂತಹ ಆ್ಯಪ್‌ ವ್ಯವಸ್ಥೆ ಇರಬೇಕು. ಆ್ಯಂಬುಲೆನ್ಸ್‌ಗೆ ಜಿಪಿಎಸ್‌, ಬಯೋಮೆಟ್ರಿಕ್‌, ಕಾಲ್‌ ಸೆಂಟರ್‌ ವ್ಯವಸ್ಥೆ ಸದೃಢವಾಗಿರಬೇಕು. ವಾಹನಗಳ ಹೊಣೆ ಮತ್ತು ಐಟಿ ಪ್ರತ್ಯೇಕವಾಗಿ ಗುತ್ತಿಗೆ ನೀಡಬೇಕೆ? ಬೇಡವೇ? ಎಂಬುದು ಅಧ್ಯಯನ ಮಾಡಬೇಕು. ತಂತ್ರಜ್ಞಾನಕ್ಕೆ ಆದ್ಯತೆ ನೀಡಬೇಕು ಎಂದರು.

67

ಈ ಹಿಂದೆ ಜಿವಿಕೆ ಸಂಸ್ಥೆಗೆ ಗುತ್ತಿಗೆ ನೀಡಿದಾಗ ಮಾರುಕಟ್ಟೆಯಲ್ಲಿ ಸ್ಪರ್ಧೆ ಇರಲಿಲ್ಲ. ಈಗ ತಂತ್ರಜ್ಞಾನದಲ್ಲಿ ಮುಂದುವರೆದ ಅನೇಕ ಕಂಪನಿಗಳು ಸೇವೆ ನೀಡಲು ಮುಂದೆ ಬರುತ್ತಿವೆ. ಪ್ರಾಥಮಿಕ ಹಂತದ ಚರ್ಚೆಗೆ 20ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಂಡಿವೆ. ಹೀಗಾಗಿ ಎಲ್ಲಾ ಷರತ್ತುಗಳನ್ನೂ ವಿಧಿಸಿ ಎಂದು ಸಚಿವರು ಸೂಚಿಸಿದರು.

77

ಸಭೆಯಲ್ಲಿ ಆರೋಗ್ಯ ಇಲಾಖೆ ಆಯುಕ್ತ ಪಂಕಜ್‌ ಕುಮಾರ್‌ ಪಾಂಡೆ, ಐಡೆಕ್‌ ಕಂಪನಿ ಪ್ರತಿನಿಧಿಗಳು ಹಾಜರಿದ್ದರು.

click me!

Recommended Stories