Channamma final rites ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚನ್ನಮ್ಮ ಶಿವೈಕ್ಯರಾಗಿದ್ದಾರೆ .ಅವರ ಅಂತ್ಯಕ್ರಿಯೆ ಇಂದು ಭಾನುವಾರ ಮಾವಿನಕೆರೆ ಹರದನಹಳ್ಳಿಯಲ್ಲಿ ನಡೆಸಲಾಗುವುದು ಎಂದು ಪುತ್ರ ಹೆಚ್‌ಡಿ ಕುಮಾರಸ್ವಾಮಿ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ಮುಂದೆ ಓದಿ.
ಇಂದು ಮಾವಿನಕೆರೆ ಹರದನಹಳ್ಳಿಯಲ್ಲಿ ಚೆನ್ನಮ್ಮ ಅಂತ್ಯಕ್ರಿಯೆ
ನಮ್ಮ ಜನ್ಮದಾತೆ ನಮ್ಮನ್ನು ಅಗಲಿದ್ದಾರೆ. ಭಾನುವಾರ ಬೆಳಗ್ಗೆ 11 ಗಂಟೆಯವರೆಗೂ ಪದ್ಮನಾಭ ನಿವಾಸದಲ್ಲಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. ನಂತರ ಹಾಸನದ ಮಾವಿನಕೆರೆ ಅಥವಾ ಹರದನಹಳ್ಳಿಯಲ್ಲಿ ಅಂತ್ಯ ಸಂಸ್ಕಾರ ಮಾಡಲಾಗುವುದು. ಅಂತಿಮ ಸಂಸ್ಕಾರ ಎಲ್ಲಿ ಮಾಡಬೇಕು ಎಂಬುದರ ಬಗ್ಗೆ ಕುಟುಂಬ ಸದಸ್ಯರ ಜತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಕೇಂದ್ರ ಸಚಿವ ಹಾಗೂ ಚೆನ್ನಮ್ಮ ಅವರ ಪುತ್ರರಾದ ಎಚ್.ಡಿ ಕುಮಾರಸ್ವಾಮಿ ತಿಳಿಸಿದರು.
24
ನಮ್ಮಮ್ಮನದು ಸರಳ ಜೀವನ.. ದೈವಭಕ್ತೆ
ಆಸ್ಪತ್ರೆಯ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ತಾಯಿಯವರು ಮೊದಲಿನಿಂದಲೂ ಸರಳ ಜೀವನ ನಡೆಸಿಕೊಂಡು ಬಂದವರು, ದೈವಭಕ್ತೆ ಆಗಿದ್ದರು. ನಮ್ಮ ತಂದೆಯ ಸಂಗಾತಿಯಾಗಿ 70 ವರ್ಷ ಬಾಳಿದ್ದಾರೆ. ನಮ್ಮ ತಂದೆಯವರ ಬದುಕಿಗೆ ಅವರ ಇಡೀ ಜೀವನವನ್ನೇ ತ್ಯಾಗ ಮಾಡಿದ್ದಾರೆ. ನಮ್ಮ ಬದುಕಿನಲ್ಲಿ ನಮಗೆ ತಾಯಿ ಹೃದಯ ಅಂತ ಬಂದಿದ್ದರೆ ಅದು ಅವರಿಂದ. ಒಂದು ಸಣ್ಣ ಹಳ್ಳಿಯಲ್ಲಿ ಅವರು ಜನಿಸಿದವರು. ಲಕ್ಷಾಂತರ ಕುಟುಂಬಗಳ ಬದುಕಿಗೆ ದಾರಿ ದೀಪವಾಗಿದ್ದವರು ಎಂದು ಹೇಳಿದರು.
34
ಕಳೆದ ಒಂದೂವರೆ ವರ್ಷದಿಂದ ಅನಾರೋಗ್ಯ
ಕಳೆದ ಒಂದೂವರೆ ವರ್ಷದಿಂದ ಅವರಿಗೆ ಆರೋಗ್ಯದ ಸಮಸ್ಯೆ ಪ್ರಾರಂಭವಾಗಿತ್ತು. ಅವರು ದಿನಕ್ಕೆ 5 ಗಂಟೆಗೂ ಹೆಚ್ಚು ಕಾಲ ದೇವರ ಕೋಣೆಯಲ್ಲಿಯೇ ಭಗವಂತನ ಸ್ಮರಣೆ ಮಾಡಿಕೊಂಡು ಸಮಯ ಕಳೆಯುತ್ತಿದ್ದರು. ನಮ್ಮ ರಾಜಕೀಯದ ಬದುಕಿನಲ್ಲಿ ಅಲ್ಪ ಸ್ವಲ್ಪ ಒಳ್ಳೆ ಬುದ್ದಿ ಕಲಿತ್ತಿದ್ದರೆ ಅದು ಅವರಿಂದ. ಕಳೆದ ಒಂದು ವರ್ಷದಿಂದ ಅವರು ಪ್ರತಿನಿತ್ಯ ಪಡುತ್ತಿದ್ದ ಯಾತನೆಯನ್ನು ನಾವು ನೋಡುತ್ತಿದ್ದೆವು. ನಾವು ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರೂ ಅವರ ಸ್ಮರಣೆಯಲ್ಲಿಯೇ ಇರುತ್ತಿದ್ದೆವು ಎಂದರು.
ಸಮಯ ಸಿಕ್ಕಾಗ ಅವರನ್ನು ಮಾತನಾಡಿಸಲು ಹೋದಾಗ ಊಟ ಮಾಡಿದ್ದೀಯಾ? ಮೊದಲು ಊಟ ಮಾಡು ಎಂದು ಹೇಳುತ್ತಿದ್ದರು. ಅವರಿಗೆ ಎರಡು ಬಾರಿ ಕೋವಿಡ್ ಸೋಂಕು ತಗುಲಿತ್ತು. ಆ ಸಮಯದಲ್ಲಿ ಶ್ವಾಸಕೋಶದ ಸಮಸ್ಯೆ ಉಂಟಾಗಿತ್ತು. ಕಳೆದ 4 ದಿನಗಳಿಂದ ಸಮಸ್ಯೆ ಬಿಗಡಾಯಿಸಿತ್ತು. ವೈದ್ಯರು ಅವರನ್ನು ಉಳಿಸಿಕೊಳ್ಳಲು ಎಲ್ಲಾ ರೀತಿಯ ಉತ್ತಮ ಪ್ರಯತ್ನ ಪಟ್ಟಿದ್ದಾರೆ.
ನಮ್ಮ ತಾಯಿ ರಾಜರಾಜೇಶ್ವರಿ ಭಕ್ತೆಯಾಗಿದ್ದರು. ಕಳೆದ 30-35 ವರ್ಷಗಳಿಂದ ಪ್ರತಿ ಶುಕ್ರವಾರ ರಾಜರಾಜೇಶ್ವರಿ ದೇವಾಲಯಕ್ಕೆ ತಪ್ಪದೇ ಹೋಗುತ್ತಿದ್ದರು. ಆ ತಾಯಿಯ ಕೃಪೆಯಿಂದ ಈ ಹಿಂದೆ ಆ್ಯಸಿಡ್ ದಾಳಿಗೆ ಒಳಗಾಗಿದ್ದ ಸಂದರ್ಭದಲ್ಲಿ ಬದುಕುಳಿದರು. ಆ ದೇವರೇ ಅಂದು ಅವರನ್ನು ಬದುಕಿಸಿದ್ದ. ಆ ದೇವರೇ ಇದೀಗ ಅವರ ಬದುಕು ಸಾಕು ಎಂಬ ತೀರ್ಮಾನಕ್ಕೆ ಬಂದು ಕರೆದುಕೊಂಡು ಹೋಗಿದ್ದಾರೆ ಎಂಬುದು ನನ್ನ ಅಭಿಪ್ರಾಯ ಎಂದು ಭಾವುಕರಾದರು.
ಅವರಿಂದ ಜೀವನ ಕಂಡುಕೊಂಡಿರುವ ಕುಟುಂಬದ ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ಅಂತಿಮ ದರ್ಶನ ಕಲ್ಪಿಸುವುದು ನಮ್ಮ ಕರ್ತವ್ಯ. ಭಾನುವಾರ ಬೆಳಗ್ಗೆ 11 ಗಂಟೆಯವರೆಗೂ ಪದ್ಮನಾಭ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. ನಂತರ ಹಾಸನದ ಮಾವಿನಕೆರೆ ಅಥವಾ ಹರದನಹಳ್ಳಿ ಅಂತ್ಯ ಸಂಸ್ಕಾರ ಮಾಡಲಾಗುವುದು. ಅಂತಿಮ ಸಂಸ್ಕಾರ ಎಲ್ಲಿ ಮಾಡಬೇಕು ಎಂಬುದರ ಬಗ್ಗೆ ಕುಟುಂಬ ಸದಸ್ಯರ ಜತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಮಾಹಿತಿ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ