ಜನಪದ ಗಾಯಕ ಮ್ಯೂಸಿಕ್ ಮೈಲಾರಿ ಅರೆಸ್ಟ್; ಡ್ಯಾನ್ಸ್ ಮಾಡೋ ಬಾಲಕಿಯನ್ನು ಲಾಡ್ಜ್‌ನಲ್ಲಿ ಕೂಡಿಹಾಕಿ ಲೈಂಗಿಕವಾಗಿ ಬಳಕೆ!

Published : Dec 17, 2025, 11:57 AM IST

ಉತ್ತರ ಕರ್ನಾಟಕದ ಖ್ಯಾತ ಜನಪದ ಗಾಯಕ 'ಮ್ಯೂಸಿಕ್ ಮೈಲಾರಿ'ಯನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಆರ್ಕೆಸ್ಟ್ರಾ ಕಾರ್ಯಕ್ರಮದ ನಂತರ ಲಾಡ್ಜ್‌ನಲ್ಲಿ ದೌರ್ಜನ್ಯ ಎಸಗಿದ್ದರು ಎಂಬ ಆರೋಪ ಕೇಳಿಬಂದಿತ್ತು.

PREV
16
ಮ್ಯೂಸಿಕ್ ಮೈಲಾರಿ ಆರೆಸ್ಟ್

ಬಾಗಲಕೋಟೆ (ಡಿ.17): ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ‘ಮ್ಯೂಸಿಕ್ ಮೈಲಾರಿ’ (Karnataka Folk Singer Music Mailari) ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ.

26
ಘಟನೆಯ ಹಿನ್ನೆಲೆ

ಕಳೆದ ಅಕ್ಟೋಬರ್ 24, 2025 ರಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಜಾಗನೂರು ಗ್ರಾಮದಲ್ಲಿ ಹನುಮಂತ ದೇವರ ಓಕುಳಿ ಕಾರ್ಯಕ್ರಮದ ಪ್ರಯುಕ್ತ ಆರ್ಕೆಸ್ಟ್ರಾ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹಾಡಲು ಮ್ಯೂಸಿಕ್ ಮೈಲಾರಿ ಬಂದಿದ್ದನು.

36
ಲಾಡ್ಜ್‌ನಲ್ಲಿ ಕೂಡಿಹಾಕಿ ಲೈಂಗಿಕವಾಗಿ ಬಳಕೆ

ಇದೇ ಆರ್ಕೆಸ್ಟ್ರಾದಲ್ಲಿ ನೃತ್ಯ ಮಾಡಲು ಬಂದಿದ್ದ ಬೆಳಗಾವಿ ಮೂಲದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಂದು ರಾತ್ರಿ ಮಹಾಲಿಂಗಪುರ ಹೊರವಲಯದ ಲಾಡ್ಜ್ ಒಂದರಲ್ಲಿ ಬಾಲಕಿಯ ಮೇಲೆ ದೌರ್ಜನ್ಯ ಎಸಗಿ, ಕೃತ್ಯದ ವಿಡಿಯೋ ಕೂಡ ಮಾಡಿಕೊಳ್ಳಲಾಗಿತ್ತು ಎಂಬ ಗಂಭೀರ ಆರೋಪ ಮೈಲಾರಿ ಮೇಲಿದೆ.

46
ಬಂಧನ ಪ್ರಕ್ರಿಯೆ

ಘಟನೆಗೆ ಸಂಬಂಧಿಸಿದಂತೆ ಡಿಸೆಂಬರ್ 14 ರಂದು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಘಟನಾ ಸ್ಥಳ ಮಹಾಲಿಂಗಪುರ ವ್ಯಾಪ್ತಿಗೆ ಬರುವುದರಿಂದ ಡಿಸೆಂಬರ್ 15 ರಂದು ಪ್ರಕರಣವನ್ನು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಠಾಣೆಗೆ ವರ್ಗಾಯಿಸಲಾಯಿತು. ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಂತೆ ಮೈಲಾರಿ ತಲೆಮರೆಸಿಕೊಂಡಿದ್ದನು.

56
ಮೈಲಾರಿ ಸೇರಿ 7 ಮಂದಿ ಅರೆಸ್ಟ್

ಮಹಾರಾಷ್ಟ್ರಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿಯನ್ನು ಬೆನ್ನಟ್ಟಿದ ಮಹಾಲಿಂಗಪುರ ಪೊಲೀಸರು, ಮಹಾರಾಷ್ಟ್ರದ ಜತ್ತ ವ್ಯಾಪ್ತಿಯಲ್ಲಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಮೈಲಾರಿ ಸೇರಿದಂತೆ ಒಟ್ಟು ಏಳು ಜನರ ವಿರುದ್ಧ ಪೋಕ್ಸೋ (POCSO) ಕಾಯಿದೆಯಡಿ ಎಫ್‌ಐಆರ್ ದಾಖಲಾಗಿದೆ.

66
ಜನಪ್ರಿಯತೆಯ ದುರುಪಯೋಗ

ಉತ್ತರ ಕರ್ನಾಟಕದಾದ್ಯಂತ ತನ್ನ ಜಾನಪದ ಹಾಡುಗಳ ಮೂಲಕ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್ ಸ್ಟಾರ್ ಆಗಿದ್ದ ಮೈಲಾರಿ, ಈಗ ಕಂಬಿ ಎಣಿಸುವಂತಾಗಿದೆ. ಸದ್ಯ ಪೊಲೀಸರು ಈ ಪ್ರಕರಣದಲ್ಲಿ ಭಾಗಿಯಾಗಿರುವ ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

Read more Photos on
click me!

Recommended Stories