ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ: ಸ್ಟಾರ್ ಸುವರ್ಣ ವಾಹಿನಿ ವತಿಯಿಂದ ಉಚಿತ ಜಲ ವಿತರಣೆ..!

Published : Mar 27, 2024, 01:30 PM IST

ಬೆಂಗಳೂರು(ಮಾ.27):  ಕನ್ನಡ ಕಿರುತೆರೆಯಲ್ಲಿ ಹೊಸತನದ ಛಾಪು ಮೂಡಿಸಿರುವ ಸ್ಟಾರ್ ಸುವರ್ಣ ವಾಹಿನಿಯು ಇದೀಗ ಜನರ ಸಂಕಷ್ಟಕ್ಕೆ ಸಹಾಯ ಹಸ್ತ ಚಾಚಿದೆ.

PREV
14
ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ: ಸ್ಟಾರ್ ಸುವರ್ಣ ವಾಹಿನಿ ವತಿಯಿಂದ ಉಚಿತ ಜಲ ವಿತರಣೆ..!

ಕರುನಾಡಲ್ಲಿ ನೀರಿನ ಬರದ ಬಿಸಿ ತಟ್ಟಿದ್ದು ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ನಿಟ್ಟಿನಲ್ಲಿ ಸ್ಟಾರ್ ಸುವರ್ಣ ವಾಹಿನಿಯು ತಮ್ಮ "ಸುವರ್ಣ ಸಂಕಲ್ಪ" ಕಾರ್ಯಕ್ರಮದ ಮೂಲಕ ವಿದ್ವಾನ್ ಡಾ|| ಗೋಪಾಲಕೃಷ್ಣ ಗುರೂಜಿಯವರ ನೇತೃತ್ವದಲ್ಲಿ "ಜಲ ಸಂಕಷ್ಟಕ್ಕೆ ಸುವರ್ಣ ಸಂಕಲ್ಪ" ಎಂಬ ಬರಹದಡಿ ಹೊಸ ಅಭಿಯಾನಕ್ಕೆ ಕೈ ಹಾಕಿದೆ. 

24

ಪ್ರಸ್ತುತ ಬೆಂಗಳೂರಿನ ಒಂದಷ್ಟು ನೀರಿನ ಅಭಾವವಿರುವ ಪ್ರದೇಶಗಳಾದ ಅಂದ್ರಹಳ್ಳಿ, ವಿದ್ಯಾಮಾನ ನಗರ್, ಚಕ್ರನಗರ, ವಾಲ್ಮೀಕಿ ನಗರ, ಬಸವಣ್ಣ ದೇವಸ್ಥಾನ ಸರ್ಕಲ್, ಸುಂಕದಕಟ್ಟೆ, ಮಾಗಡಿ ರೋಡ್, ಶ್ರೀಗಂಧ ಕಾವಲ್, ಭೈರವೇಶ್ವರ ನಗರ ಹಾಗೂ ವಿಘ್ನೇಶ್ವರ ನಗರ ಸೇರಿದಂತೆ ಇನ್ನು ಹಲವು  ಪ್ರದೇಶಗಳಿಗೆ, ಅಲ್ಲಿರುವ ಜನರಿಗೆ ಸ್ಟಾರ್ ಸುವರ್ಣದ ವತಿಯಿಂದ ಉಚಿತ ನೀರನ್ನು ವಿತರಿಸಲಾಗುತ್ತಿದೆ.

34

ಬೆಂಗಳೂರು ನಗರದಲ್ಲಿ ಇಲ್ಲಿವರೆಗೆ 3,65,500 ಲೀಟರ್ ಗಿಂತನೂ ಅಧಿಕ ನೀರನ್ನು ಜನರಿಗೆ ವಿತರಿಸಲಾಗಿದ್ದು, ಪ್ರತಿದಿನ 60,000 ಲೀಟರ್ ಗಿಂತನೂ ಅಧಿಕ ನೀರನ್ನು ಜನರಿಗೆ ತಲುಪಿಸುತ್ತಿದೆ. 

44

ಮುಂದಿನ ದಿನಗಳಲ್ಲಿ ಕರ್ನಾಟಕದಾದ್ಯಂತ ನೀರಿನ ಸಮಸ್ಯೆ ಹೊಂದಿರುವ ಪ್ರದೇಶದಲ್ಲಿರುವ ಜನರಿಗೆ ನೀರನ್ನು ತಲುಪಿಸುವ ಗುರಿಯನ್ನು ಕನ್ನಡಿಗರ ಹೆಮ್ಮೆಯ ವಾಹಿನಿ ಸ್ಟಾರ್ ಸುವರ್ಣ ಹೊಂದಿದೆ.

Read more Photos on
click me!

Recommended Stories