ತೇಜಸ್ವಿ ಸೂರ್ಯ & ಶಿವಶ್ರೀ ಆರತಕ್ಷತೆ: ನವಜೋಡಿಯ ಸಿಂಪ್ಲಿಸಿಟಿಗೆ ಫಿದಾ ಆದ ಜನರು!

Published : Mar 09, 2025, 02:27 PM ISTUpdated : Mar 09, 2025, 02:28 PM IST

ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮತ್ತು ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ಅವರ ಆರತಕ್ಷತೆಯು ಅರಮನೆ ಮೈದಾನದಲ್ಲಿ ನಡೆಯಿತು. ಈ ಆರತಕ್ಷತೆಯಲ್ಲಿ ತೇಜಸ್ವಿ ಸೂರ್ಯ ಮತ್ತು ಶಿವಶ್ರೀ ಅವರ ಸರಳತೆಗೆ ಜನರು ಫಿದಾ ಆದರು. ರಾಜಕೀಯ ವೈರಿಗಳಾದ ಸಿದ್ದರಾಮಯ್ಯ ಮತ್ತು ತೇಜಸ್ವಿ ಸೂರ್ಯ ನಗುತ್ತಾ ಮಾತನಾಡುತ್ತಿದ್ದುದು ವಿಶೇಷವಾಗಿತ್ತು.

PREV
17
ತೇಜಸ್ವಿ ಸೂರ್ಯ & ಶಿವಶ್ರೀ ಆರತಕ್ಷತೆ: ನವಜೋಡಿಯ ಸಿಂಪ್ಲಿಸಿಟಿಗೆ ಫಿದಾ ಆದ ಜನರು!

ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮತ್ತು ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ಅವರ ಆರತಕ್ಷತೆ ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯುತ್ತಿದೆ. ಆರತಕ್ಷತೆಯಲ್ಲಿ ತೇಜಸ್ವಿ ಸೂರ್ಯ ಮತ್ತು  ಶಿವಶ್ರೀ ಅವರ ಸರಳತೆ ಆಗಮಿಸಿದ ಜನರು ಫಿದಾ ಆಗಿದ್ದಾರೆ.

27

ಅಂತೆಯೇ ಇಂದು ತಮಗೆ ಶುಭಾಶಯ ತಿಳಿಸಲು ಬಂದ ಜನರೊಂದಿಗೆ ಸಂಸದ ತೇಜಸ್ವಿ ಸೂರ್ಯ ನಗುತ್ತಲೇ ಎಲ್ಲರನ್ನು ಮಾತನಾಡಿಸೋದು ಕಂಡು ಬಂತು. ಜನರು ಸಹ ತಮ್ಮ ನೆಚ್ಚಿನ ನಾಯಕನಿಗೆ ಶುಭಾಶಯ ತಿಳಿಸಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

37

ನಿನ್ನೆಯಷ್ಟೇ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದ ತೇಜಸ್ವಿ ಸೂರ್ಯ, ಎಲ್ಲರೂ ಆರತಕ್ಷತೆಗೆ ಬರಬಹುದು ಎಂದು ಆಹ್ವಾನಿಸಿದ್ದರು. ಎಲ್ಲರೂ ಬಂದು ನಮ್ಮನ್ನು ಆಶೀರ್ವದಿಸಿ ಸತ್ಯನಾರಾಯಣ ಪೂಜೆಯ ಪ್ರಸಾದವನ್ನು ತೆಗೆದುಕೊಂಡು, ಊಟ ಮಾಡಿ ಹೋಗಬೇಕೆಂದು ಹೇಳಿದ್ದರು.

47

ಸಿಎಂ ಸಿದ್ದರಾಮಯ್ಯ ಅವರು ಸಹ ಆರತಕ್ಷತೆಗೆ ಆಗಮಿಸಿ ನವಜೋಡಿಗೆ ಆಶೀರ್ವದಿಸಿದ್ದಾರೆ. ರಾಜಕೀಯವಾಗಿ ಬದ್ಧವೈರಿಗಳಾಗಿರುವ ತೇಜಸ್ವಿ ಸೂರ್ಯ ಮತ್ತು ಸಿಎಂ ಸಿದ್ದರಾಮಯ್ಯ ಜೊತೆಯಾಗಿ ನಗುತ್ತಾ ಮಾತನಾಡುತ್ತಿರೋದನ್ನು ಕಂಡು ಜನರು ಒಂದು ಕ್ಷಣ ಆಶ್ಚರ್ಯಚಕಿತರಾದರು.

57

ಡಿಸಿಎಂ ಡಿಕೆ ಶಿವಕುಮಾರ್ ಸಹ ಆರತಕ್ಷತೆಗೆ ತೆರಳಿ ನವದಂಪತಿಗೆ ಶುಭ ಹಾರೈಸಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ನಡೆದ ಸಂಸದರಾದ ಶ್ರೀ ತೇಜಸ್ವಿ ಸೂರ್ಯ ಅವರ ವಿವಾಹ ಆರತಕ್ಷತೆಯಲ್ಲಿ ಪಾಲ್ಗೊಂಡು ಶುಭ ಹಾರೈಸಿದೆ ಎಂದು ಎಕ್ಸ್ ಖಾತೆಯಲ್ಲಿ ಬರೆದು ಫೋಟೋ ಹಂಚಿಕೊಂಡಿದ್ದಾರೆ.

67

ಆರತಕ್ಷತೆಗೆ ಆಗಮಿಸುವಬ ವಯಸ್ಸಾದವರಿಗೆ, ಸೀನಿಯರ್ ಸಿಟಿಜನ್‌ಗಳಿಗೆ ಹಾಗೂ ಫಿಸಿಕಲ್ ಚಾಲೆಂಜ್ಡ್ ಅಂದರೆ ದಿವ್ಯಾಂಗರಿಗೆ ವೀಲ್ ಚೇರ್ ವ್ಯವಸ್ಥೆಯನ್ನು ಮಾಡಲಾಗಿತ್ತು. ನಿನ್ನೆಯೇ ತೇಜಸ್ವಿ ಸೂರ್ಯ ಯಾವುದೇ ಗಿಫ್ಟ್ ತೆಗೆದುಕೊಂಡು ಬರದಂತೆ ಮನವಿ ಮಾಡಿಕೊಂಡಿದ್ದರು.

77

ಮಾರ್ಚ್ 6ರಂದು ಬೆಂಗಳೂರಿನ ಹೆಸರಘಟ್ಟದಲ್ಲಿರುವ ರೆಸಾರ್ಟ್‌ನಲ್ಲಿ ತೇಜಸ್ವಿ ಸೂರ್ಯ ಮತ್ತು ಶಿವಶ್ರೀ ಮದುವೆ ಕರ್ನಾಟಕ ಮತ್ತು ತಮಿಳುನಾಡು ಸಂಪ್ರದಾಯದಂತೆ ಅದ್ದೂರಿಯಾಗಿ ನಡೆದಿತ್ತು. ಕೇಂದ್ರ ಸಚಿವರು ಸೇರಿದಂತೆ ರಾಜ್ಯದ ಮುಖಂಡರು ಮದುವೆಯಲ್ಲಿ ಭಾಗಿಯಾಗಿದ್ದರು

Read more Photos on
click me!

Recommended Stories