ಪ್ರಾಚೀನ ಕಾಲದಿಂದಲೂ ಜ್ಞಾನ, ವಿಜ್ಞಾನ ಮತ್ತು ಸಂಸ್ಕೃತಿಯ ನಾಡಗಿರುವ ಕರ್ನಾಟಕ ಪ್ರಸ್ತುತ ಕ್ರೀಡಾ ಕ್ಷೇತ್ರದಲ್ಲೂ ಹೊಸ ಗುರುತನ್ನು ಮೂಡಿಸುತ್ತಿದೆ ಎಂದು ಕರ್ನಾಟಕ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ. ವರ್ಲ್ಡ್ ಪ್ರೀಮಿಯರ್ 10 ಕೆ ರನ್, ಟಿಸಿಎಸ್ ವರ್ಲ್ಡ್ 10 ಕೆ ಬೆಂಗಳೂರು ಫಿಲಾಂಥರೋಪಿ ಅವಾರ್ಡ್ ವಿತರಣಾ ಸಮಾಂರಭದಲ್ಲಿ ಭಾಗವಹಿಸಿದ ಗೆಹ್ಲೋಟ್, ಬೆಂಗಳೂರು ನಗರವು ಐಟಿ ಮತ್ತು ನಾವೀನ್ಯತೆಯ ರಾಜಧಾನಿಯಾಗಿ ಹಾಗೂ ಕ್ರೀಡಾ ರಾಜಧಾನಿಯಾಗಿ ಮಾರ್ಪಡುತ್ತಿದೆ ಎಂದಿದ್ದಾರೆ. ಟಿಸಿಎಸ್ ವರ್ಲ್ಡ್ 10 ಕೆ, ಬೆಂಗಳೂರು ಮ್ಯಾರಥಾನ್, ಪ್ರೊ ಕಬಡ್ಡಿ ಮತ್ತು ಐಪಿಎಲ್‌ನಂತಹ ಕಾರ್ಯಕ್ರಮಗಳು ಬೆಂಗಳೂರು ನಗರವು ಫಿಟ್‌ನೆಸ್, ಭಾಗವಹಿಸುವಿಕೆ ಮತ್ತು ಸಾಮೂಹಿಕ ಶಕ್ತಿಯನ್ನು ಒಳಗೊಂಡ ಕ್ರೀಡಾ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುತ್ತಿದೆ ಎಂಬುದನ್ನು ಸಾಬೀತುಪಡಿಸಿವೆ. ಟಿಸಿಎಸ್ ವರ್ಲ್ಡ್ 10 ಕೆ, ಇಂದು ಇದು ಕೇವಲ ಸ್ಪರ್ಧೆಯಲ್ಲ, ಬೆಂಗಳೂರಿನ ಗುರುತಾಗಿದೆ. ಈ ನಗರವು ಓಡುತ್ತದೆ, ಎಚ್ಚರಗೊಳ್ಳುತ್ತದೆ ಮತ್ತು ಜೀವನವನ್ನು ಪೂರ್ಣವಾಗಿ ನಡೆಸುತ್ತದೆ ಎಂಬ ಸಂದೇಶವನ್ನು ಇಡೀ ಜಗತ್ತಿಗೆ ರವಾನಿಸುವ ಒಂದು ಗುರುತಾಗಿದೆ ಎಂದಿದ್ದಾರೆ.