ಬೆಂಗಳೂರು ಬುಲ್ಸ್
ತಂಡದಲ್ಲಿ ತಾರಾ ಆಟಗಾರರ ಕೊರತೆ ಇದೆ. ಸಂಪೂರ್ಣ ಹೊಸ ರೈಡಿಂಗ್ ಪಡೆ ಹೊಂದಿದ್ದು, ವಿಕಾಸ್ ಖಂಡೋಲಾ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ. ಮಹೇಂದರ್ ನಾಯಕತ್ವ ಕುತೂಹಲ ಮೂಡಿಸಿದೆ.
ಕಳೆದ ಆವೃತ್ತಿ ಸಾಧನೆ: ಸೆಮಿಫೈನಲ್ ಪ್ರವೇಶ
ದಬಾಂಗ್ ಡೆಲ್ಲಿ
ರೈಡ್ ಮಷಿನ್ ನವೀನ್ ಕುಮಾರ್ ಈ ಬಾರಿ ನಾಯಕತ್ವದ ಒತ್ತಡ ನಿಭಾಯಿಸುವುದರ ಜೊತೆಗೆ ಪ್ರಮುಖ ರೈಡರ್ ಆಗಿ ಆಟಬೇಕು. ಅನುಭವಿ ಡಿಫೆಂಡರ್‌ಗಳ ಉಪಸ್ಥಿತಿ ತಂಡ ಬಲಿಷ್ಠವಾಗಿ ತೋರುವಂತೆ ಮಾಡಿದೆ.
ಕಳೆದ ಆವೃತ್ತಿ ಸಾಧನೆ: ಚಾಂಪಿಯನ್
ಪಾಟ್ನಾ ಪೈರೇಟ್ಸ್
ಕಳೆದ ವರ್ಷವಿದ್ದ ಬಹುತೇಕರನ್ನು ಉಳಿಸಿಕೊಳ್ಳಲಾಗಿದೆ. ಸಚಿನ್ ರೈಡರ್‌ಗಳನ್ನು ಮುನ್ನಡೆಸಲಿದ್ದು, ರಕ್ಷಣಾ ಪಡೆಯನ್ನು ನಾಯಕ ನೀರಜ್, ಇರಾನ್‌ನ ಮೊಹಮದ್ ರೇಜಾ ನೋಡಿಕೊಳ್ಳಲಿದ್ದಾರೆ.
ಕಳೆದ ಆವೃತ್ತಿ ಸಾಧನೆ: ರನ್ನರ್-ಅಪ್
ಯು.ಪಿ.ಯೋಧಾ
ಕಳೆದ ಆವೃತ್ತಿಯಲ್ಲಿ ಗಾಯಗೊಂಡಿದ್ದ ಪ್ರದೀಪ್ ನರ್ವಾಲ್ ಈ ಬಾರಿ ಫಿಟ್ ಆಗಿದ್ದಾರೆ. ಇದು ತಂಡದ ಬಹುದೊಡ್ಡ ಪ್ಲಸ್ ಪಾಯಿಂಟ್. ಉತ್ತಮ ಡಿಫೆಂಡರ್‌ಗಳಿದ್ದು ತಂಡ ಬಲಿಷ್ಠವಾಗಿದೆ.
ಕಳೆದ ಆವೃತ್ತಿ ಸಾಧನೆ: ಸೆಮಿಫೈನಲ್ ಪ್ರವೇಶ
ಬೆಂಗಾಲ್ ವಾರಿಯರ್ಸ್
ಮಣೀಂದರ್ ಜೊತೆಗೆ ರೈಡಿಂಗ್ ಪಡೆಗೆ ಶ್ರೀಕಾಂತ್, ದೀಪಕ್ ಹೂಡಾ ಸೇರ್ಪಡೆಯಿಂದ ಬಲ ಹೆಚ್ಚಿದೆ. ರಕ್ಷಣಾ ಪಡೆ ಸ್ವಲ್ಪ ದುರ್ಬಲವಾಗಿ ತೋರುತ್ತಿದ್ದು, ಲೀಗ್ ಸಾಗಿದಂತೆ ಸಮಸ್ಯೆ ಆಗಬಹುದು.
ಕಳೆದ ಆವೃತ್ತಿ ಸಾಧನೆ: 9ನೇ ಸ್ಥಾನ
ಗುಜರಾತ್ ಜೈಂಟ್ಸ್
ಹೊಸ ಕೋಚ್, ಹೊಸ ನಾಯಕ ತಂಡ ಹೊಸ ರೂಪ ಪಡೆದು ಕಣಕ್ಕಿಳಿಯಲಿದೆ. ಕಳೆದ ಆವೃತ್ತಿಯಲ್ಲಿ ಮಿಂಚಿದ್ದ ರೈಡರ್‌ಗಳಾದ ರಾಕೇಶ್ ಹಾಗೂ ಪ್ರದೀಪ್ ಮೇಲೆ ಭಾರೀ ನಿರೀಕ್ಷೆ ಇಡಲಾಗಿದೆ.
ಕಳೆದ ಆವೃತ್ತಿ ಸಾಧನೆ: 6ನೇ ಸ್ಥಾನ
ಹರ್ಯಾಣ ಸ್ಟೀಲರ್ಸ್
ಉತ್ತಮ ರೈಡರ್‌ಗಳನ್ನು ಹೊಂದಿರುವ ತಂಡ ಡಿಫೆನ್ಸ್‌ನಲ್ಲಿ ದುರ್ಬಲವಾಗಿ ತೋರುತ್ತಿದೆ. ಜೊತೆಗೆ ನಾಯಕ ಜೋಗಿಂದರ್ ನಿವೃತ್ತಿಯ ಅಂಚಿನಲ್ಲಿದ್ದು ಅವರಿಂದ ಪರಿಣಾಮಕಾರಿ ಪ್ರದರ್ಶನ ಅನುಮಾನ.
ಕಳೆದ ಆವೃತ್ತಿ ಸಾಧನೆ: 7ನೇ ಸ್ಥಾನ
ಜೈಪುರ ಪಿಂಕ್ಪ್ಯಾಂಥರ್ಸ್
ರಾಹುಲ್ ಚೌಧರಿ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಉತ್ತಮ ಲಯ ತೋರಿದ್ದರು. ಅವರ ಸೇರ್ಪಡೆ ತಂಡಕ್ಕೆ ಬೋನಸ್. ಡಿಫೆನ್ಸ್‌ನಲ್ಲಿ ನಾಯಕ ಸುನೀಲ್ ಕುಮಾರ್ ನಿರ್ಣಾಯಕ ಪಾತ್ರ ವಹಿಸಬೇಕು.
ಕಳೆದ ಆವೃತ್ತಿ ಸಾಧನೆ: 8ನೇ ಸ್ಥಾನ
ಪುಣೇರಿ ಪಲ್ಟನ್
ಕಾಗದದ ಮೇಲೆ ಅತ್ಯಂತ ಬಲಿಷ್ಠವಾಗಿ ಕಾಣುತ್ತಿರುವ ತಂಡ. ಇರಾನ್‌ನ ಫಜಲ್, ನಬೀಬಕ್‌್ಷ ಟ್ರಂಪ್ ಕಾರ್ಡ್ಸ್ ಆಗಬಹುದು. ಅಸ್ಲಾಂ, ಮೋಹಿತ್, ಪಂಕಜ್, ಶುಭಂ ರೈಡಿಂಗ್‌ನಲ್ಲಿ ಮಿಂಚು ಹರಿಸಬಲ್ಲರು.
ಕಳೆದ ಆವೃತ್ತಿ ಸಾಧನೆ: 5ನೇ ಸ್ಥಾನ
ತಮಿಳ್ ತಲೈವಾಸ್
ಏಕಾಂಗಿಯಾಗಿ ತಂಡವನ್ನು ಗೆಲ್ಲಿಸಬಲ್ಲ ಆಟಗಾರ ಪವನ್ ಶೆರಾವತ್ ಸೇರ್ಪಡೆ ತಂಡದ ಚಿತ್ರಣವನ್ನೇ ಬದಲಿಸಿದೆ. ಡಿಫೆಂಡರ್‌ಗಳಿಂದ ಉತ್ತಮ ಬೆಂಬಲ ದೊರೆತರೆ ತಂಡ ಪ್ಲೇ-ಆಫ್‌ಗೇರಬಹುದು.
ಕಳೆದ ಆವೃತ್ತಿ ಸಾಧನೆ: 11ನೇ ಸ್ಥಾನ
ತೆಲುಗು ಟೈಟಾನ್ಸ್
ಟ್ರೋಫಿ ಗೆಲ್ಲಬಲ್ಲ ನೆಚ್ಚಿನ ತಂಡಗಳ ಪೈಕಿ ಒಂದು. ಸಿದ್ಧಾಥ್‌ರ್, ಅಭಿಷೇಕ್, ಮೋನು ಗೋಯತ್ ರೈಡಿಂಗ್ ಬಲ. ಡಿಫೆನ್ಸ್‌ನಲ್ಲಿ ರವೀಂದರ್, ಸುರ್ಜೀತ್, ವಿಶಾಲ್, ಪರ್ವೇಶ್ ಇದ್ದಾರೆ.
ಕಳೆದ ಆವೃತ್ತಿ ಸಾಧನೆ: 12ನೇ ಸ್ಥಾನ
ಯು ಮುಂಬಾ
ಕಳೆದ ಆವೃತ್ತಿಯಲ್ಲಿ ಮಿಂಚಿದ್ದ ಗುಮಾನ್ ಸಿಂಗ್ ಈ ಬಾರಿ ಮುಂಬೈನ ಪ್ರಮುಖ ರೈಡರ್. ತಾರಾ ಹಾಗೂ ಅನುಭವಿಗಳ ಕೊರತೆ ಕಾಣುತ್ತಿದೆ. ಯುವ ಪ್ರತಿಭೆಗಳ ಮೇಲೆ ತಂಡ ಅವಲಂಬಿತಗೊಂಡಿದೆ.
ಕಳೆದ ಆವೃತ್ತಿ ಸಾಧನೆ: 10ನೇ ಸ್ಥಾನ