ದಿಢೀರ್ ಎನ್ನುವಂತೆ ಜಾನ್‌ ಜೆಲೆಜ್ನಿ ಜತೆ ಕೋಚಿಂಗ್‌ ಒಪ್ಪಂದ ಕೊನೆಗೊಳಿಸಿದ ನೀರಜ್‌ ಚೋಪ್ರಾ!

Published : Jan 11, 2026, 10:35 AM IST

ನವದೆಹಲಿ: ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಳಪೆ ಪ್ರದರ್ಶನ ಬೆನ್ನಲ್ಲೇ ಒಲಿಂಪಿಕ್‌ ಚಾಂಪಿಯನ್‌ ನೀರಜ್‌ ಚೋಪ್ರಾ ತಮ್ಮ ಕೋಚ್‌ ಬದಲಿಸಲು ನಿರ್ಧರಿಸಿದ್ದಾರೆ. ಈ ಕುರಿತಾದ ಮಹತ್ವದ ಅಪ್‌ಡೇಟ್ಸ್‌ ಇಲ್ಲಿದೆ ನೋಡಿ. 

PREV
15
ಜಾನ್‌ ಜೆಲೆಜ್ನಿ ಕೋಚಿಂಗ್ ಒಪ್ಪಂದ ಕೊನೆಗೊಳಿಸಿದ ನೀರಜ್ ಚೋಪ್ರಾ

ಜಾವೆಲಿನ್‌ ಎಸೆತದಲ್ಲಿ ವಿಶ್ವದಾಖಲೆ ಹೊಂದಿರುವ ಚೆಕ್‌ ಗಣರಾಜ್ಯದ ಜಾನ್‌ ಜೆಲೆಜ್ನಿ ಜೊತೆಗಿನ ಕೋಚಿಂಗ್‌ ಅನ್ನು ನೀರಜ್‌ ಕೊನೆಗೊಳಿಸಿದ್ದಾರೆ.

25
ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 9ನೇ ಸ್ಥಾನ ಪಡೆದಿದ್ದ ನೀರಜ್

ಕಳೆದ ವರ್ಷ ದೋಹಾ ಡೈಮಂಡ್‌ ಲೀಗ್‌ನಲ್ಲಿ 90 ಮೀ. ದಾಖಲೆ ಬರೆದಿದ್ದ ನೀರಜ್‌ ಆ ಬಳಿಕ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 9ನೇ ಸ್ಥಾನ ಪಡೆದಿದ್ದರು. ಇದರ ಬೆನ್ನಲ್ಲೇ ಕೋಚ್‌ ಬದಲಿರುವ ನಿರ್ಧಾರ ಕೈಗೊಂಡಿದ್ದಾರೆ.

35
ಅವರು ನನ್ನ ರೋಲ್ ಮಾಡೆಲ್ ಎಂದ ನೀರಜ್ ಚೋಪ್ರಾ

‘ಜೆಲೆಜ್ನಿಯಿಂದ ನಾನು ಬಹಳಷ್ಟು ಕಲಿತಿದ್ದೇನೆ. ನನ್ನ ಆದರ್ಶ ವ್ಯಕ್ತಿಯಾಗಿದ್ದವರಿಂದ ಪಡೆದ ತರಬೇತಿ ಬಗ್ಗೆ ನನಗೆ ಹೆಮ್ಮೆಯಿದೆ. ಅವರು ನಾನು ಭೇಟಿಯಾದ ಅತ್ಯುತ್ತಮ ಮನುಷ್ಯರಲ್ಲಿ ಒಬ್ಬರು’ ಎಂದಿದ್ದಾರೆ.

45
ಬೇರ್ಪಡಲು ನೈಜ ಕಾರಣವೇನು?

ಆದರೆ ನೀರಜ್ ಚೋಪ್ರಾ ಹಾಗೂ ಜಾನ್‌ ಜೆಲೆಜ್ನಿ ಬೇರ್ಪಡಲು ನೈಜ ಕಾರಣವೇನು ಎಂಬುದನ್ನು ನೀರಜ್‌ ಸ್ಪಷ್ಟಪಡಿಸಿಲ್ಲ.

55
2024ರಲ್ಲಿ ನೀರಜ್ ಚೋಪ್ರಾ ಕೋಚ್ ಆಗಿದ್ದ ಜೆಲೆಜ್ನಿ

2024ರ ಅಂತ್ಯದಲ್ಲಿ ಜೆಲೆಜ್ನಿ ನೀರಜ್ ಅವರ ಕೋಚ್‌ ಆಗಿ ನೇಮಕಗೊಂಡಿದ್ದರು. ಜೆಲೆಜ್ನಿ ಮೂರು ಬಾರಿಯ ಒಲಿಂಪಿಯನ್‌ ಆಗಿದ್ದು, ಜಾವೆಲಿನ್‌ನಲ್ಲಿ ವಿಶ್ವದಾಖಲೆ(98.48 ಮೀ.) ಹೊಂದಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories