Image credit: PTI
* ನೀರಜ್ ಚೋಪ್ರಾ ಎಸೆತದ ಅತ್ಯುತ್ತಮ ಜಾವೆಲಿನ್ ಥ್ರೋ ಎಷ್ಟು ದೂರವಿತ್ತು?
ಜೂನ್ 14. 2022ರಂದು ಫಿನ್ಲೆಂಡ್‌ನ ಪಾವೊ ನುರ್ಮಿ ಗೇಮ್ಸ್‌ನಲ್ಲಿ 89.30 ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ತಮ್ಮದೇ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು ಮತ್ತಷ್ಟು ಉತ್ತಮ ಪಡಿಸಿಕೊಂಡಿದ್ದಾರೆ.
* ನೀರಜ್ ಚೋಪ್ರಾ ಯಾವ ರಾಜ್ಯದವರು?
ಇಡೀ ದೇಶವೇ ಹೆಮ್ಮೆ ಪಡುವಂತಹ ಸಾಧನೆ ಮಾಡಿರುವ ನೀರಜ್ ಚೋಪ್ರಾ ಹರ್ಯಾಣ ರಾಜ್ಯದ ಪಾಣಿಪತ್ ಜಿಲ್ಲೆಯವರು. ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ದೇಶಕ್ಕೆ ಅಥ್ಲೆಟಿಕ್ಸ್‌ನಲ್ಲಿ ಚಿನ್ನ ಗೆದ್ದ ಮೊದಲ ಅಥ್ಲೀಟ್ ನೀರಜ್ ಚೋಪ್ರಾ
* ನೀರಜ್ ಚೋಪ್ರಾ ಸಸ್ಯಹಾರಿಯೋ ಅಥವಾ ಮಾಂಸಹಾರಿಯೋ?
ನೀರಜ್ ಚೋಪ್ರಾ ಎರಡು ವರ್ಷಗಳ ಕಾಲ ಮಾಂಸಹಾರ ಸೇವಿಸುವುದನ್ನು ಬಿಟ್ಟಿದ್ದರು. ಅವರೊಬ್ಬ ಅಪ್ಪಟ ಸಸ್ಯಹಾರಿಯಾಗಿದ್ದರು. ಆದರೆ ತಾವು ಫಿಟ್ ಆಗಿರುವ ಉದ್ದೇಶದಿಂದ 2016ರಿಂದೀಚಗೆ ಮಾಂಸ ಸೇವಿಸುವುದನ್ನು ನೀರಜ್ ಚೋಪ್ರಾ ಆರಂಭಿಸಿದ್ದಾರೆ.
* ನೀರಜ್ ಚೋಪ್ರಾ ಡಯಟ್ ಹೇಗಿರುತ್ತದೆ?
ಮ್ಯಾಚ್ ವೇಳೆ ನೀರಜ್ ಏನನ್ನೂ ಸೇವಿಸುವುದಿಲ್ಲವಂತೆ. ಅಂತಹ ಸಂದರ್ಭದಲ್ಲಿ ಸಲಾಡ್ ಅಥವಾ ಹಣ್ಣುಗಳನ್ನಷ್ಟೇ ಸೇವಿಸುತ್ತಾರಂತೆ. ಇದರ ಜತೆಗೆ ಗ್ರಿಲ್‌ಡ್ ಚಿಕನ್ ಹಾಗೂ ಮೊಟ್ಟೆಗಳನ್ನು ತಿನ್ನುತ್ತಾರಂತೆ. ಇದಷ್ಟೇ ಅಲ್ಲದೇ ಬ್ರೆಡ್ ಹಾಗೂ ಆಮ್ಲೇಟ್‌ಗಳನ್ನು ತಿನ್ನುವುದಾಗಿ ಸ್ವತಃ ನೀರಜ್ ಚೋಪ್ರಾ ಒಂದು ಸಂದರ್ಶನದಲ್ಲಿ ತಿಳಿಸಿದ್ದರು.
* ನೀರಜ್ ಚೋಪ್ರಾ ಮೌಲ್ಯವೆಷ್ಟು? ಅಥವಾ ಮಾಸಿಕ ಸಂಬಳ/ಗಳಿಕೆ ಎಷ್ಟು?
ನೀರಜ್ ಚೋಪ್ರಾ ಒಲಿಂಪಿಕ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಅವರ ಒಟ್ಟಾರೆ ಮೌಲ್ಯ 3 ಮಿಲಿಯನ್ ಡಾಲರ್. ಇನ್ನು ನೀರಜ್ ಚೋಪ್ರಾ ತಿಂಗಳಿಗೆ 5 ಲಕ್ಷ ರುಪಾಯಿ ಸಂಭಾವನೆ ಪಡೆಯುತ್ತಿದ್ದು, ವಾರ್ಷಿಕ ಆದಾಯ 5.5 ಕೋಟಿ ರುಪಾಯಿಗಳಾಗಿದೆ.
(photo source- Instagram)
ನೀರಜ್ ಚೋಪ್ರಾ ಅವರಿಗೀಗ ಎಷ್ಟು ವರ್ಷ?
ಭಾರತದ ಯೂಥ್ ಐಕಾನ್ ನೀರಜ್ ಚೋಪ್ರಾ 24 ಡಿಸೆಂಬರ್ 1997ರಲ್ಲಿ ಜನಿಸಿದ್ದರು. ದೇಶವೇ ಹೆಮ್ಮೆಪಡುವಂತ ಸಾಧನೆ ಮಾಡಿದ ನೀರಜ್ ಚೋಪ್ರಾಗೀಗ ಕೇವಲ 24 ವರ್ಷ.
Neeraj Chopra
* ನೀರಜ್ ಚೋಪ್ರಾ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲಲು ಜಾವೆಲಿನ್ ಎಸೆದ ದೂರವೆಷ್ಟು?
ಟೋಕಿಯೋ ಒಲಿಂಪಿಕ್ಸ್ 2022 ಕ್ರೀಡಾಕೂಟದಲ್ಲಿ ನೀರಜ್ ಚೋಪ್ರಾ 87.58 ಮೀಟರ್ ದೂರ ಜಾವೆಲಿನ್ ಥ್ರೋ ಎಸೆಯುವ ಮೂಲಕ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದರು.
Kiara Advani
* ನೀರಜ್ ಚೋಪ್ರಾ ಭಾರತದ ಪುರುಷ ಕ್ರಶ್ ಹೌದಾ?
ನೀರಜ್ ಚೋಪ್ರಾ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುತ್ತಿದ್ದಂತೆಯೇ ದೇಶದ ಮನೆಮಾತಾಗಿದ್ದರು. ಭಾರತದ ನಟಿ ಕಿಯಾರ ಅಡ್ವಾಣಿ, ನೀರಜ್ ಚೋಪ್ರಾ ಕೇವಲ ಭಾರತದ ಕ್ರಶ್ ಮಾತ್ರವಲ್ಲ, ಈಗವರು ಜಗತ್ತಿನ ಕ್ರಶ್ ಎಂದು ಉದ್ಘರಿಸಿದ್ದರು.