ಕರ್ನಾಟಕ ಪ್ರಿಮೀಯರ್ ಲೀಗ್ 8ನೇ ಆವೃತ್ತಿಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವರ್ಣರಂಜಿತ ಉದ್ಘಾಟನಾ ಸಮಾರಂಭದ ಮೂಲಕ ಚುಟುಕು ಕ್ರಿಕೆಟ್ ಹಬ್ಬ ಆರಂಭಗೊಂಡಿದೆ. ಸಮಾರಂಭದಲ್ಲಿ ರ್ಯಾಪರ್ ಚಂದನ್ ಶೆಟ್ಟಿ ಹಾಡು ಹಾಗೂ ಸಾಂಸ್ಕೃತಿ ಕಾರ್ಯಕ್ರಮ ಟೂರ್ನಿ ಕಳೆ ಹೆಚ್ಚಿಸಿತು. ಸ್ಯಾಂಡಲ್‌ವುಡ್ ನಟಿ, ಕೆಪಿಎಲ್ ರಾಯಭಾರಿ ರಾಣಿಗಿ ದ್ವಿವೇದಿ ಕೂಡ ಒಪನಿಂಗ್ ಸೆರಮನಿಯಲ್ಲಿ ಪಾಲ್ಗೊಂಡಿದ್ದರು.