ಬೆಂಗಳೂರು: ಭಾರತದ ತಾರಾ ಅಥ್ಲೀಟ್, ಏಷ್ಯನ್ ಗೇಮ್ಸ್, ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಪದಕ ವಿಜೇತೆ ರಾಜ್ಯದ ಎಂ ಆರ್ ಪೂವಮ್ಮ (MR Poovamma) ಬುಧವಾರವಾದ ಇಂದು(ಡಿ.29)ರಂದು ಮಂಗಳೂರಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಪೂವಮ್ಮ ತಮ್ಮ ಗೆಳೆಯ ಹಾಗೂ ಅಥ್ಲೀಟ್ ಅಗಿರುವ ಜಿತಿನ್ ಪೌಲ್ (Jithin Paul) ಅವರನ್ನು ವರಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಭಾರತೀಯ ಅಥ್ಲೀಟ್‌ನ ಮತ್ತೊಂದು ತಾರಾ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದೆ. ಭಾರತದ ತಾರಾ ಅಥ್ಲೀಟ್ ಎಂ ಆರ್ ಪೂವಮ್ಮ ಹಾಗೂ ಮಲೆಯಾಳಿ ಅಥ್ಲೀಟ್ ಜಿತಿನ್ ಪೌಲ್ ಮಂಗಳೂರಿನ ಆಡ್ಯಾರ್ ಭವನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಬಹುಕಾಲದಿಂದ ಗೆಳೆತನದಲ್ಲಿದ್ದ ಈ ಜೋಡಿ ಇಂದು ಕುಟುಂಬಸ್ಥರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ.
27
ಮಂಗಳೂರು ಮೂಲದ ಪೂವಮ್ಮ 2008ರ ಕಾಮನ್‌ವೆಲ್ತ್ ಯೂತ್ ಗೇಮ್ಸ್ 400 ಮೀಟರ್ ಸ್ಪರ್ಧೆಯಲ್ಲಿ ಬೆಳ್ಳಿ ಹಾಗೂ 400 ಮೀಟರ್ ರಿಲೇ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದರು.
37
ಪೂವಮ್ಮ 2014 ಹಾಗೂ 2018ರ ಏಷ್ಯನ್ ಗೇಮ್ಸ್‌ನಲ್ಲಿ ಹಾಗೂ 2013 ಹಾಗೂ 2017ರ ಏಷ್ಯನ್ ಚಾಂಪಿಯನ್‌ಶಿಪ್‌ನ ರಿಲೇ ಸ್ಪರ್ಧೆಯಲ್ಲಿ ಭಾರತ ಚಿನ್ನ ಗೆದ್ದ ಗೆದ್ದ ತಂಡದ ಸದಸ್ಯೆಯಾಗಿದ್ದರು.
47
Poovamma
ಪೂವಮ್ಮ 2013ರ ಏಷ್ಯನ್ ಚಾಂಪಿಯನ್‌ಶಿಪ್ ಹಾಗೂ 2014ರ ಏಷ್ಯನ್ ಗೇಮ್ಸ್‌ನ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದ್ದರು.
57
ಇನ್ನು ಪೂವಮ್ಮ 2016ರ ರಿಯೋ ಒಲಿಂಪಿಕ್ಸ್ 4*400 ರಿಲೇ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಪೂವಮ್ಮ ಮಂಗಳೂರಿನಲ್ಲಿರುವ ONGC ಯಲ್ಲಿ ಕೆಲಸ ಮಾಡುತ್ತಿದ್ದಾರೆ.
67
ಇನ್ನು ಜಿತಿನ್ ಪೌಲ್, 400 ಮೀಟರ್ ಹರ್ಡಲ್ಸ್‌ನಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಏಷ್ಯನ್ ಗೇಮ್ಸ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.
77
ಜಿತಿನ್ ಪೌಲ್ SAF Games ಕ್ರೀಡಾಕೂಟದಲ್ಲಿ 400 ಮೀಟರ್ ಹರ್ಡಲ್ಸ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಜಯಿಸಿದ್ದಾರೆ. ಸದ್ಯ ಜಿತಿನ್ ಪೌಲ್ ಪುಣೆಯಲ್ಲಿ ಆದಾಯ ತೆರಿಗೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.