Published : Aug 21, 2019, 07:40 PM ISTUpdated : Aug 21, 2019, 07:43 PM IST
ಪಾಕಿಸ್ತಾನ ವೇಗಿ ಹಸನ್ ಆಲಿ ಹಾಗೂ ಭಾರತೀಯ ಮೂಲದ ಶಾಮಿಯಾ ಅರ್ಝೂ ವಿವಾಹ ಮಹೋತ್ಸವ ಅದ್ಧೂರಿಯಾಗಿ ನೇರವೇರಿದೆ. ದುಬೈನಲ್ಲಿ ಆಯೋಜಿಸಲಾಗಿದ್ದ ಮದುವೆ ಸಮಾರಂಭದಲ್ಲಿ ಹಸನ್ ಆಲಿ, ಶಾಮಿಯಾ ಅರ್ಝೂ ಕೈಹಿಡಿದರು. ಹರ್ಯಾಣದ ಮೀವತ್ ಜಿಲ್ಲೆಯ ಶಾಮಿಯಾ ದುಬೈನಲ್ಲಿ ಉದ್ಯೋಗಿಯಾಗಿದ್ದಾರೆ. ಕೆಲ ವರ್ಷಗಳಿಂದ ಹಸನ್ ಆಲಿ ಹಾಗೂ ಶಾಮಿಯಾ ಪರಿಚಯವಾಗಿದ್ದರು. ಬಳಿಕ ಆತ್ಮೀಯರಾಗಿ ಇದೀಗ ಮದುವೆಯಾಗಿದ್ದಾರೆ. ಹಸನ್ ಆಲಿ ಮದುವೆಗೆ ಪಾಕಿಸ್ತಾನ ಕ್ರಿಕೆಟಿಗರು, ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.