ಗೂಗಲ್ ಸರ್ಚ್‌ಗೂ ಸಿಗದ 'ಬಾಡಿ ಕೌಂಟ್' ಮರ್ಮ: ಕೇಳಬಾರದ ಈ ಪ್ರಶ್ನೆಗೆ ಉತ್ತರಿಸುವವರಿಗೆ ನಾಚಿಕೆಯಿಲ್ಲ!

Published : Apr 01, 2026, 04:55 PM IST

Body Count Meaning in Kannada With Example: ಇತ್ತೀಚೆಗೆ Body Count ಎಂಬ ಪದದ ಬಗ್ಗೆ ಚರ್ಚೆಯಾಗುತ್ತಿದೆ. ಇದರ ಅರ್ಥ ಏನು ಎಂದು ಗೂಗಲ್‌ನಲ್ಲಿ ಹುಡುಕಿದರೆ, ಎಷ್ಟು ಜನರನ್ನು ಕೊಂ*ದಿದ್ದೇವೆ ಎಂದು ಲೆಕ್ಕ ಹಾಕುವುದು ಎಂದು ಸಿಗುವುದು. ಆದರೆ ಸೋಶಿಯಲ್‌ ಮೀಡಿಯಾದಲ್ಲಿ ಇದರ ಅರ್ಥ ಬೇರೆಯೇ ಇದೆ.

PREV
16
Body Count ಏಕೆ ಟ್ರೆಂಡ್ ಆಗುತ್ತಿದೆ?

ಸೋಶಿಯಲ್‌ ಮೀಡಿಯಾದಲ್ಲಿ Body Count ಪದ ಹೆಚ್ಚು ಕೇಳಿಬರುತ್ತಿದೆ. ಅನೇಕ Gen Z ಯುವಜನತೆ, ಕೆಲ ಸೆಲೆಬ್ರಿಟಿಗಳು ಕೂಡ ಈ ಬಗ್ಗೆ ಮುಕ್ತವಾಗಿ ಮಾತನಾಡುತ್ತಿದ್ದಾರೆ ಎಂದ ಮಾತ್ರಕ್ಕೆ ಇದು ಹೆಮ್ಮೆಯ ವಿಷಯವಲ್ಲ.

26
Body Count ಎಂದರೇನು?

ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಎಷ್ಟು ಜನರೊಂದಿಗೆ ಬಹುಮುಖ್ಯವಾಗಿ ದೈಹಿಕ ಸಂಬಂಧ ಹೊಂದಿದ್ದಾನೆ ಎಂದು ಲೆಕ್ಕ ಹಾಕಿ ಹೇಳುವ ಪದವೇ Body Count. ಮೊದಲೆಲ್ಲ ಯುದ್ಧ ಅಥವಾ ಅಪಘಾತಗಳಲ್ಲಿ ಸಾವಿಗೀಡಾದವರ ಸಂಖ್ಯೆಯನ್ನು ಹೇಳಲು ಈ ಪದವನ್ನು ಬಳಸಲಾಗುತ್ತಿತ್ತು. ಈಗ Gen Z ಭಾಷೆಯಲ್ಲಿ ಇದು ದೈಹಿಕ ಸಂಬಂಧದ ಸಂಖ್ಯೆಗೆ ಬಳಕೆಯಾಗುತ್ತಿದೆ.

ಕೆಲವರು Body Count ಅನ್ನು ಗೌರವವಾಗಿ ನೋಡುತ್ತಾರೆ. ಇನ್ನೂ ಕೆಲವರು ಇದನ್ನು ವ್ಯಕ್ತಿಯ ಚರಿತ್ರೆ ಅಥವಾ ಜೀವನಶೈಲಿಯನ್ನು ಅಳೆಯಲು ನೋಡುತ್ತಾರೆ. ತಜ್ಞರು ಹೇಳುವಂತೆ, ಒಬ್ಬ ವ್ಯಕ್ತಿಯ ಮೌಲ್ಯವನ್ನು ಈ ಹಿಂದಿನ ಸಂಬಂಧಗಳ ಸಂಖ್ಯೆಯಿಂದ ಅಳೆಯಬಾರದು. ನಿಜವಾದ ಸಂಬಂಧದಲ್ಲಿ ನಂಬಿಕೆ, ಪ್ರಾಮಾಣಿಕತೆ, ಪರಸ್ಪರ ಗೌರವವೇ ಮುಖ್ಯ ಎನ್ನುತ್ತಾರೆ.

36
ಸೀರಿಯಸ್‌ ರಿಲೇಶನ್‌ಶಿಪ್‌ಗೆ ಸೂಕ್ತವಲ್ಲ

Gen Z ಮೇಲ್ನೋಟಕ್ಕೆ ಬಹಳ ಮಾಡರ್ನ್ ಮತ್ತು ಒಪನ್‌ ಮೈಂಡೆಡ್‌ ಆಗಿದ್ದರೂ ಕೂಡ, ರಿಲೇಶನ್‌ಶಿಪ್‌ನಲ್ಲಿ ಕೆಲವೊಮ್ಮೆ ಹೆಚ್ಚು ಸಂಪ್ರದಾಯಸ್ಥರಾಗಿರುತ್ತಾರೆ. ಒಂದು ಸಮೀಕ್ಷೆಯ ಪ್ರಕಾರ, Gen Z ಯುವಕರಲ್ಲಿ 41% ಜನರಿಗೆ ತಮ್ಮ ಸಂಗಾತಿಯ Body Count ಬಗ್ಗೆ ಅಸಮಾಧಾನ ಇರುತ್ತದೆ. ಇನ್ನೂ ಕೆಲವರು ಹೆಚ್ಚು Body Count ಇರುವವರನ್ನು ಸೀರಿಯಸ್‌ ರಿಲೇಶನ್‌ಶಿಪ್‌ಗೆ ಸೂಕ್ತವಲ್ಲ ಎಂದು ಹೇಳುತ್ತಾರೆ.

46
ಸೆಲೆಬ್ರಿಟಿಗಳೇ ಮಾತಾಡ್ತಾರೆ

ಕೆಲ ಸೆಲೆಬ್ರಿಟಿಗಳು podcast ಮತ್ತು ಸಂದರ್ಶನಗಳಲ್ಲಿ ತಮ್ಮ ರಿಲೇಶನ್‌ಶಿಪ್‌ ಇತಿಹಾಸದ ಬಗ್ಗೆ ಮಾತನಾಡುತ್ತಾರೆ. ಕೆಲವರು ಇದನ್ನು openness ಎಂದು ನೋಡುತ್ತಾರೆ, ಇನ್ನೂ ಕೆಲವರು ಅನಗತ್ಯವಾಗಿ ಮಾತನಾಡುವುದು ಎಂದು ಹೇಳುತ್ತಾರೆ. ಈ ಕಾರಣಕ್ಕೆ Body Count ಈಗ ಸಂಬಂಧದಲ್ಲಿ ಹೊಂದಾಣಿಕೆ, ನಂಬಿಕೆ ಮತ್ತು ಮೌಲ್ಯಗಳ ಬಗ್ಗೆ ನಡೆಯುವ ದೊಡ್ಡ ಚರ್ಚೆಯಾಗಿದೆ.

56
“past is past”

ಕೆಲವರು “past is past” ಎಂದರೆ, ಇನ್ನೂ ಕೆಲವರು Body Count ಒಂದು ವ್ಯಕ್ತಿಯ ಸೀರಿಯಸ್‌ನೆಸ್‌, ಕಮಿಟ್‌ಮೆಂಟ್ ಬಗ್ಗೆ ಹೇಳುತ್ತದೆ ಎಂದು ನಂಬುತ್ತಾರೆ. ಆದರೆ ಹಲವರು ಈ ಪ್ರಶ್ನೆ ಕೇಳುವುದೇ ತಪ್ಪು ಎನ್ನುತ್ತಾರೆ.

66
ವೈಯಕ್ತಿಕ ಜೀವನ ಗೌರವಿಸಿ

ಇಂದಿನ ಯುವಜನತೆಸಂಬಂಧಗಳಲ್ಲಿ ಹೆಚ್ಚು ಸ್ಪಷ್ಟತೆ, ಪ್ರಾಮಾಣಿಕತೆ ಬೇಕೆಂದು ಬಯಸುತ್ತಾರೆ. Body Count ಬಗ್ಗೆ ಮಾತನಾಡುವಾಗ ಒಬ್ಬರ ವೈಯಕ್ತಿಕ ಜೀವನವನ್ನು ಗೌರವಿಸುವುದು ಮುಖ್ಯವಾಗಿರುತ್ತದೆ.

Read more Photos on
click me!

Recommended Stories