ಮದುವೆಗೆ ಸಂಬಳ, ಆಸ್ತಿ, ಅಂದ-ಚೆಂದ ಬೇಡ; ಆ ರೀತಿ ಇದ್ರೆ ಕಾಂಟ್ಯಾಕ್ಟ್‌ ಮಾಡಿ; ಹುಡುಗಿ ಡಿಮ್ಯಾಂಡ್‌ಗೆ ದಂಗಾದ ಜನರು

Published : Mar 10, 2026, 01:15 PM IST

ಇಂದು ಎಷ್ಟೋ ಹುಡುಗರಿಗೆ ಮದುವೆಗೆ ಹೆಣ್ಣೇ ಸಿಗ್ತಿಲ್ಲ. ಅದರಲ್ಲೂ ರೈತರಿಗೆ ಹೆಣ್ಣು ಸಿಗೋದು ಕಷ್ಟ ಆಗಿದೆ. ಈ ಮಧ್ಯೆ ಕೆಲ ಹುಡುಗಿಯರು ಅಂಕಲ್‌ಗಳನ್ನು ಮದುವೆಯಾದರು, ದುಡ್ಡಿಗೋಸ್ಕರ ಎಂಥೆಂಥವರನ್ನೋ ಮದುವೆಯಾದರು ಎಂದು ಗಂಡು ಮಕ್ಕಳು ಸೋಶಿಯಲ್‌ ಮೀಡಿಯಾದಲ್ಲಿ ಬೇಸರ ಹೊರಹಾಕುತ್ತಲೇ ಇರುತ್ತಾರೆ. 

PREV
15
ಇಂದಿನ ಹುಡುಗಿಯರ ಡಿಮ್ಯಾಂಡ್‌ ಏನು?

ಇನ್ನು ಈಗಿನ ಕಾಲದ ಕೆಲ ಹುಡುಗಿಯರು ಮದುವೆಯಾಗಲು, ಹುಡುಗನಿಗೆ ತಿಂಗಳಿಗೆ ಎರಡು ಲಕ್ಷ ರೂಪಾಯಿ ಸಂಬಳ, ಕಾರ್‌, ಮನೆ, ಜಮೀನು ಇರಬೇಕು ಎಂದು ಹೇಳುತ್ತಾರೆ. ಇನ್ನೂ ಕೆಲವರು ಹುಡುಗನಿಗೆ ಅಪ್ಪ-ಅಮ್ಮ ಇರಬಾರದು, ಬೇರೆ ಮನೆ ಇರಬೇಕು ಎನ್ನೋದುಂಟು.

25
ರಿಯಾ ಇಟ್ಟ ಬೇಡಿಕೆ ಏನು?

ಸೋಶಿಯಲ್‌ ಮೀಡಿಯಾ ಮೂಲಕ ಹಣ ಸಂಪಾದನೆ ಮಾಡುವ ಕಾಲದಲ್ಲಿದ್ದೇವೆ, ರೀಲ್ಸ್‌ ಮಾಡುತ್ತ, ಒಂದಿಷ್ಟು ಪ್ರಮೋಶನ್‌ ಮಾಡುತ್ತ ಒಬ್ಬೊಬ್ಬರು ತಿಂಗಳಿಗೆ ಲಕ್ಷ, ಲಕ್ಷ ಹಣ ಮಾಡುತ್ತಾರೆ. ಈಗ ಮದುವೆಗೋಸ್ಕರ ಒಂದು ಹುಡುಗಿ ಬೇಡಿಕೆ ಇಟ್ಟಿರುವ ವಿಷಯಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ.

35
ಹುಡುಗನಿಗೆ ಏನೇನು ಗುಣ ಇರಬೇಕು?

“ನನ್ನ ಹೆಸರು ರಿಯಾ, ನಾನು ಮದುವೆಗೆ ಹುಡುಗ ಜೊತೆಗೆ ರೀಲ್‌ ಪಾರ್ಟನರ್‌ನನ್ನು ಹುಡುಕುತ್ತಿದ್ದೇನೆ. ಹುಡುಗನಿಗೆ ಕ್ಯಾಮರಾ ಕಂಡರೆ ಮುಜುಗರ ಇರಬಾರದು, ಯಾವುದೇ ಮಜುಗರ ಇಲ್ಲದೆ ರಿಲೇಶನ್‌ಶಿಪ್‌ ರೀಲ್‌ ಮಾಡಲು ರೆಡಿ ಇರಬೇಕು. Moi Moi ಬಳಸಿ ಹೇಗೆ ಟ್ರೆಂಡಿಂಗ್‌ ವಿಡಿಯೋ ಮಾಡಬೇಕು ಎಂದು ಅವನಿಗೆ ಗೊತ್ತಿರಬೇಕು. ಅವಿಭಕ್ತ ಕುಟುಂಬದವನಾಗಿರಬಾರದು ಎಂದು ಹುಡುಗಿ ಬೇಡಿಕೆ ಇಟ್ಟಿದ್ದಾಳೆ, ಇನ್ನೂ ಕೆಲ ಬೇಡಿಕೆ ಇದೆ.

45
ಆ ಸಿರೀಸ್‌ ನೋಡ್ಕೊಂಡು ಬನ್ನಿ

ನನ್ನನ್ನು ಕಾಂಟ್ಯಾಕ್ಟ್‌ ಮಾಡುವ ಮುಂಚೆ, Half Love Half Arranged ಎಂಬ ಅಮೆಜಾನ್‌ನಲ್ಲಿರುವ ಸಿರೀಸ್‌ನ್ನು ನೋಡಿಕೊಂಡು ಬರಬೇಕು. ನನ್ನ ವಿಡಿಯೋ, ರೀಲ್ಸ್‌ಗಳನ್ನು ಎಡಿಟ್‌ ಮಾಡಲು ಅನುಕೂಲ ಆಗುವಂತೆ ಅವನಿಗೆ ಪ್ರೀಮಿಯರ್‌ ಪ್ರೋ ಗೊತ್ತಿರಬೇಕು ಎಂದು ಬೇಡಿಕೆ ಇಟ್ಟಿದ್ದಾಳೆ.

55
ಕಾಮಿಡಿಯಾದ ಡಿಮ್ಯಾಂಡ್

ಈ ಡಿಮ್ಯಾಂಡ್‌ ಕೇಳಿ ಜನರು ನಕ್ಕಿದ್ದಾರೆ, ಅಷ್ಟೇ ಅಲ್ಲದೆ ಕಾಲ ಎಲ್ಲಿಗೆ ಬಂತು ಎಂದು ಗೊಣಗಿದ್ದಾರೆ. 

Read more Photos on
click me!

Recommended Stories