ಇದು ರೈಲಲ್ಲ, ಕಬ್ಬಿಣದ ರಾಕ್ಷಸ: 15 ಸಾವಿರ ಆನೆಗಳ ತೂಕ ಹೊರುವ ವಿಶ್ವದ ಬೃಹತ್ ಟ್ರೈನ್!

Published : Nov 11, 2026, 10:10 PM ISTUpdated : Nov 11, 2026, 10:21 PM IST

ವಿಶ್ವದ ಅತ್ಯಂತ ಉದ್ದದ ಹಾಗೂ ಅತಿ ಭಾರದ ರೈಲಿನ ಬಗ್ಗೆ ಇಲ್ಲಿದೆ ಮಾಹಿತಿ. ಈ ರೈಲು ಬರೋಬ್ಬರಿ 15000 ಆನೆಗಳಷ್ಟು ತೂಕವನ್ನು ಹೊರುವ ಸಾಮರ್ಥ್ಯ ಹೊಂದಿದೆ. ಮೈಂಡ್‌ ಬ್ಲಾಕ್‌ ಆಗುವಂಥ ಈ ರೈಲಿನ ವಿಶೇಷತೆಗಳನ್ನು ಇಲ್ಲಿ ತಿಳಿಯಿರಿ.

PREV
15
BHP ಐರನ್ ಓರ್ ಟ್ರೈನ್

ಸಾಮಾನ್ಯವಾಗಿ ರೈಲು ಹೋಗುವಾಗ ದೊಡ್ಡ ಶಕ್ತಿಯೊಂದು ಓಡುತ್ತಿರುವ ಅನುಭವವಾಗುತ್ತದೆ. ರೈಲು ಹತ್ತಿರ ಬರುತ್ತಿದ್ದರೆ ನಮ್ಮ ಕಾಲುಗಳ ಕೆಳಗೆ ಭೂಮಿ ಕಂಪಿಸಿದಂತೆ ಭಾಸವಾಗುತ್ತದೆ. ಆ ಮಟ್ಟಿಗೆ ರೈಲಿನ ಚಲನೆ, ಅದರ ಶಬ್ದ ಭಯಂಕರವಾಗಿರುತ್ತದೆ. ಇದು ಸಾಮಾನ್ಯ ರೈಲುಗಳ ಕಥೆ. ಅದೇ ಸಾಮಾನ್ಯ ರೈಲುಗಳಿಗಿಂತ ಹಲವು ಪಟ್ಟು ದೊಡ್ಡದಾದ, ಬೃಹತ್ ಗಾತ್ರದ ರೈಲು ಬಂದರೆ ಹೇಗಿರುತ್ತದೆ? ಭಯ ಹುಟ್ಟಿಸುವ ಅದೊಂದು ಅದ್ಭುತ ದೃಶ್ಯ ಎನ್ನಬಹುದು. ಇವೆಲ್ಲವೂ ವಿಶ್ವದ ಅತಿದೊಡ್ಡ ರೈಲಿನ ಬಗ್ಗೆ. ವಿಶ್ವದ ಅತಿದೊಡ್ಡ ರೈಲಿನ ಹೆಸರು 'BHP ಐರನ್ ಓರ್ ಟ್ರೈನ್'. ಇದು ಆಸ್ಟ್ರೇಲಿಯಾ ದೇಶಕ್ಕೆ ಸೇರಿದ್ದು. ಈ ರೈಲಿನ ವಿಶೇಷತೆಗಳನ್ನು ತಿಳಿಯೋಣ.

25
ಇದರ ಬೋಗಿಗಳ ಸಂಖ್ಯೆ ಹಾಗೂ ಉದ್ದ ಎಷ್ಟಿದೆ ಗೊತ್ತಾ?

ಈ ರೈಲಿನ ಒಟ್ಟು ಉದ್ದ 7.35 ಕಿಲೋಮೀಟರ್. ಈ ರೈಲಿಗೆ ಒಟ್ಟು 682 ಬೃಹತ್ ವ್ಯಾಗನ್‌ಗಳಿವೆ (ಬೋಗಿಗಳು). ಈ ರೈಲನ್ನು ಓಡಿಸಲು ಒಟ್ಟು 8 ಬೃಹತ್ ಎಂಜಿನ್‌ಗಳನ್ನು ಅಳವಡಿಸಲಾಗಿದೆ. ಇಷ್ಟು ಬೃಹತ್ ರೈಲು ಚಲಿಸುತ್ತಿದ್ದರೆ ಹೇಗಿರಬಹುದು ಎಂದು ಊಹಿಸಿಕೊಂಡರೆ ಮೈ ಜುಮ್ ಎನಿಸುತ್ತದೆ.

35
15000 ಬಲಶಾಲಿ ಆನೆಗಳ ತೂಕ ತಡೆದುಕೊಳ್ಳುವ ಸಾಮರ್ಥ್ಯ

ಈ ರೈಲು ಬರೋಬ್ಬರಿ 80 ಸಾವಿರ ಟನ್‌ಗಳಿಗೂ ಹೆಚ್ಚು ತೂಕವನ್ನು ಹೊರಬಲ್ಲದು. ಒಮ್ಮೆ ಈ ರೈಲು 82 ಸಾವಿರ ಟನ್ ಕಬ್ಬಿಣದ ಅದಿರನ್ನು ಸಾಗಿಸಿ ದಾಖಲೆ ನಿರ್ಮಿಸಿದೆ. ಅಂದರೆ ಈ ರೈಲು 15000 ಬಲಶಾಲಿ ಆನೆಗಳಿಗೆ ಸಮಾನವಾದ ತೂಕವನ್ನು ಹೊರಬಲ್ಲದು ಎಂದರ್ಥ. ಅಷ್ಟು ತೂಕ ಹೊರುವಾಗ ಈ ರೈಲಿನ ಒಟ್ಟು ತೂಕ (ರೈಲು + ಕಬ್ಬಿಣದ ಅದಿರು) ಸುಮಾರು 99,734 ಟನ್‌ಗಳಷ್ಟಿರುತ್ತದೆ.

45
ಭೂಕಂಪ ಬರುತ್ತಿರುವ ಶಬ್ದ

ಅಷ್ಟು ಭಾರಿ ತೂಕದೊಂದಿಗೆ 7.35 ಕಿಲೋಮೀಟರ್ ಉದ್ದದ ಈ ರೈಲು ಬರುತ್ತಿದ್ದರೆ 2 ಕಿ.ಮೀ ದೂರದಿಂದಲೇ ಭೂಮಿ ಕಂಪಿಸುವ ಅನುಭವವಾಗುತ್ತದೆ. ರೈಲು ಹತ್ತಿರ ಬಂದಾಗ ಇದರ 8 ಬೃಹತ್ ಎಂಜಿನ್‌ಗಳು ಮಾಡುವ ಗರ್ಜನೆಗೆ ಕಿವಿಗಳು ತೂತಾಗುವಷ್ಟು ಶಬ್ದ ಬರುತ್ತದೆ. ಈ ರೈಲು ಒಂದು ರೈಲ್ವೇ ಸ್ಟೇಷನ್ ದಾಟಲು ಬರೋಬ್ಬರಿ 15 ನಿಮಿಷಗಳ ಸಮಯ ಹಿಡಿಯುತ್ತದೆ.

55
ಈ ರೈಲಿನ ನಿಯಂತ್ರಣ ಹೇಗೆ ಸಾಧ್ಯ?

ಈ ರಾಕ್ಷಸ ರೈಲಿನಲ್ಲಿ ಎಂಜಿನ್‌ಗಳೆಲ್ಲವೂ ಒಂದೇ ಕಡೆ ಇರುವುದಿಲ್ಲ. ರೈಲಿನ ಮುಂಭಾಗ, ಮಧ್ಯಭಾಗ ಮತ್ತು ಕೊನೆಯಲ್ಲಿ ಎಂಜಿನ್‌ಗಳನ್ನು ಹಂಚಲಾಗಿರುತ್ತದೆ. ಪ್ರತಿಯೊಂದು ಎಂಜಿನ್‌ನಲ್ಲೂ ಲೋಕೋ ಪೈಲಟ್ ಇರುವುದಿಲ್ಲ. ಈ ರೈಲನ್ನು ನಿಯಂತ್ರಿಸಲು ಅತ್ಯಾಧುನಿಕ ರೇಡಿಯೋ ಕಮ್ಯುನಿಕೇಶನ್ ಮತ್ತು ಕಂಪ್ಯೂಟರ್ ಕೋ-ಆರ್ಡಿನೇಷನ್ ಸಿಸ್ಟಮ್ ಅನ್ನು ಬಳಸಲಾಗುತ್ತದೆ.

Read more Photos on
click me!

Recommended Stories