ವಾಶಿಂಗ್ ಮಶಿನ್ ಹೆಚ್ಚು ಕಂಪನವನ್ನು ಉಂಟುಮಾಡುವ ಎಲೆಕ್ಟ್ರಿಕ್ ಯಂತ್ರ. ಹೆಚ್ಚು ಕಾಲ ಬಳಸುವುದರಿಂದ, ಮಶಿನ್ ಒಳಗಿನ ವೈರ್‌ಗಳು ಸವೆದು ಹೋಗಬಹುದು ಅಥವಾ ಸಡಿಲವಾಗಬಹುದು. ಈ ಲೈವ್ ವೈರ್ ಮಶಿನ್‌ನ ಬಾಡಿಗೆ ಅಥವಾ ನೀರನ್ನು ಹೊರಹಾಕುವ ಪಂಪ್‌ಗೆ ತಾಗಿದರೆ, ವಿದ್ಯುತ್ ನೀರಿನ ಮೂಲಕ ಹರಿಯುತ್ತದೆ.
ಅನೇಕ ಮನೆಗಳಲ್ಲಿ, ವಾಶಿಂಗ್ ಮಶಿನ್, ಶವರ್ ಒಂದೇ ಪ್ಲಂಬಿಂಗ್ ಅಥವಾ ಡ್ರೈನೇಜ್ ವ್ಯವಸ್ಥೆಗೆ ಸಂಪರ್ಕ ಹೊಂದಿರುತ್ತವೆ. ಹೀಗಾದಾಗ, ಮಶಿನ್‌ನಿಂದ ಬರುವ ವಿದ್ಯುತ್, ಪೈಪ್‌ಗಳ ಮೂಲಕ ನೀವು ಸ್ನಾನ ಮಾಡುವ ನೀರನ್ನು ತಲುಪಿ, ದೇಹಕ್ಕೆ ತಾಗಬಹುದು. ಇದರಿಂದ ಕರೆಂಟ್ ಶಾಕ್ ಹೊಡೆಯುವ ಸಾಧ್ಯತೆ ಇದೆ.