ಭೂಮಿಯಿಂದ ನೋಡಿದಾಗ ನಿಮಗೆ ಆಗಸ ನೀಲಿಯಾಗಿ ಕಾಣುತ್ತದೆ. ಆಕಾಶ ಅನ್ನೋದು ನೀಲಿಯಲ್ಲ. ನಮ್ಮ ವಾತಾವರಣದ ಕಾರಣಕ್ಕಾಗಿ ಆಕಾಶ ನೀಲಿಯಾಗಿದೆ. ಆದರೆ, ಬಾಹ್ಯಾಕಾಶ ಎನ್ನುವುದು ಕಡುಕತ್ತಲೆ. ಅಲ್ಲಿ ಒಂದು ಸಣ್ಣ ಬೆಳಕೂ ಕೂಡ ಇಲ್ಲ ಎನ್ನುವುದು ನಮಗೆ ಈಗಾಗಲೇ ಗೊತ್ತಿದೆ.
ಬೆಳಕನ್ನು ಚದುರಿಸಲು ವಾತಾವರಣವಿಲ್ಲ: ಹಾಗಿದ್ದರೆ, ಬಾಹ್ಯಾಕಾಶ ಕತ್ತಲೆಯಾಗಿರಲು ಕಾರಣವೇನು? ಇದಕ್ಕೆ ಅತ್ಯಂತ ಪ್ರಮುಖ ಕಾರಣ, ಬಾಹ್ಯಾಕಾಶದಲ್ಲಿ ಯಾವುದೇ ವಾತಾವರಣವಿಲ್ಲ. ಬೆಳಕಿನ ಚದುರುವಿಕೆಯ ನಿಯಮ ಭೂಮಿಯಲ್ಲಿ ಅನ್ವಯವಾಗುತ್ತದೆ. ಆದರೆ, ಬಾಹ್ಯಾಕಾಶದಲ್ಲಿ ಅಂತಾ ವಾತಾವರಣವೇ ಇರೋದಿಲ್ಲ. ಸೂರ್ಯನಿಂದ ಬರುವ ಬೆಳಕು ನೇರವಾಗಿ ಹೋಗುತ್ತದೆ. ಬೆಳಕು ಏನನ್ನಾದರೂ ತಾಗುವವರೆಗೂ ಸರಳ ರೇಖೆಯಲ್ಲಿ ಚಲಿಸುತ್ತದೆ. ಇದನ್ನು ಬೆಳಕಿನ ಚದುರುವಿಕೆಯ ನಿಯಮ (ರೇಲೇ ಸ್ಕ್ಯಾಟರಿಂಗ್ ಎಂದೂ ಕರೆಯಲಾಗುತ್ತದೆ). ಭೂಮಿಯಲ್ಲಿ ಬೆಳಕನ್ನು ಚದುರಿಸಲು ವಾತಾವರಣವಿದೆ. ಬಾಹ್ಯಾಕಾಶದಲ್ಲಿ, ಬೆಳಕನ್ನು ಚದುರಿಸಲು ಏನೂ ಇಲ್ಲ, ಆದ್ದರಿಂದ ಅದು ತನ್ನ ನೇರ ರೇಖೆಯಲ್ಲಿ ಚಲಿಸುತ್ತದೆ.
ಬೆಳಕಿನ ಮೂಲದ ಅಲಭ್ಯತೆ: ಬಾಹ್ಯಾಕಾಶ ಅತ್ಯಂತ ವಿಸ್ತಾರ ಆದರೆ ಬಹುತೇಕ ನಿರ್ವಾತ. ಅತ್ಯಂತ ದೂರದೂರದಲ್ಲಿರುವ ನಕ್ಷತ್ರಗಳು ಹಾಗೂ ನಕ್ಷತ್ರಪುಂಜಗಳ ಹೊರತಾಗಿ ಬೆಳಕಿನ ಮೂಲದ ಅಲಭ್ಯತೆ ಬಾಹ್ಯಾಕಾಶದಲ್ಲಿದೆ.
ಬಾಹ್ಯಾಕಾಶದ ನಿರ್ವಾತ: ಬಾಹ್ಯಾಕಾಶ ಅನ್ನೋದು ಸಂಪೂರ್ಣ ನಿರ್ವಾತ. ಅಲ್ಲಿ ಗುರುತ್ವಾಕರ್ಷಣೆ, ವಾತಾವರಣ ಏನೂ ಇಲ್ಲ. ಸೂರ್ಯನಿಂದ ಬಂದ ಬೆಳಕನ್ನು ರಿಫ್ಲೆಕ್ಟ್ ಅಥವಾ ಡಿಫ್ಯೂಸ್ ಮಾಡಲು ಯಾವುದೇ ಕಾಯಗಳಿಲ್ಲ.
ದೂರ ಹೋದಷ್ಟು ಬೆಳಕು ಮಂದ: ಎಷ್ಟು ದೂರ ಬೆಳಕು ಸಾಗುತ್ತದೆಯೋ ಅಷ್ಟು ಮಂದವಾಗುತ್ತದೆ. ಕೊನೆಗೆ ಅದು ಕತ್ತಲೆಯಾಗುತ್ತದೆ. ಅದೇ ಕಾರಣಕ್ಕೆ ಬಾಹ್ಯಾಕಾಶದಲ್ಲಿ ಅತ್ಯಂತ ದೂರದಲ್ಲಿರುವ ನಕ್ಷತ್ರಗಳು ಬಹಳ ಮಂದವಾಗಿ ಕಾಣುತ್ತದೆ. ಬೆಳಕಿ ಅತ್ಯಂತ ದೂರದವರೆಗೆ ಸಾಗುವ ಕಾರಣ ಬೆಳಕು ಅಲ್ಲಿ ಮಂದವಾಗುತ್ತದೆ.
James Webb Space Telescope
ಮಾನವನಿಗೆ ಇರುವ ಲಿಮಿಟೇಷನ್‌ಗಳು: ನಾವು ನಮ್ಮ ಎದುರಿಗಿದ್ದ ಯಾವುದೇ ವಸ್ತು ನೋಡಬೇಕು ಎಂದರೂ ಒಂದಷ್ಟು ಪ್ರಮಾಣದ ಬೆಳಕು ಅವಶ್ಯಕ. ಆದರೆ, ಬಾಹ್ಯಾಕಾಶದ ಕಡುಕತ್ತಲೆ ಪ್ರದೇಶದಲ್ಲಿ ಮಾನವನ ಕಣ್ಣುಗಳುಗೆ ಹುಡುಕಾಟ ಮಾಡಲು ಸಾಧ್ಯವಾದಷ್ಟು ಬೆಳಕು ಇರೋದೇ ಇಲ್ಲ.