ನಾವು ದಿನ ನಿತ್ಯ ಬಳಸುವ ಅನೇಕ ಸಣ್ಣ ಪುಟ್ಟ ವಸ್ತುಗಳಲ್ಲಿ ರೋಚಕ ವಿಜ್ಞಾನ ಅಡಗಿರುತ್ತದೆ. ಅದರಲ್ಲಿ ಮೂರು ಪಿನ್ ಹೊಂದಿರುವ ಪ್ಲಗ್ ಕೂಡ ಹೌದು. ನಿಮಗೆ ಗೊತ್ತಾ ಕೆಲವು ಪ್ಲಗ್‌ಗಳಲ್ಲಿ ಯಾಕೆ ಮೂರು ಪಿನ್ ಇರುತ್ತದೆ ಎಂದು? ಈ ಕುರಿತ ಇಂಟ್ರೆಸ್ಟಿಂಗ್ ವಿಚಾರ ಇಲ್ಲಿದೆ...
ನಿತ್ಯ ಜೀವನದಲ್ಲಿ ನಾವು ಅನೇಕ ವಿದ್ಯುತ್ ಉಪಕರಣಗಳನ್ನು ಬಳಸುತ್ತೇವೆ. ನೀವು ಗಮನಿಸಿರಬಹುದು! ಕೆಲವು ಪ್ಲಗ್‌ಗಳಿಗೆ ಎರಡು ಪಿನ್‌ಗಳಿದ್ದರೆ, ಇನ್ನು ಕೆಲವುಗಳಿಗೆ ಮೂರು ಪಿನ್‌ಗಳಿರುತ್ತವೆ. ಈ 3-ಪಿನ್ ಪ್ಲಗ್‌ಗಳಲ್ಲಿ ಎರಡು ಪಿನ್‌ಗಳು ಚಿಕ್ಕದಾಗಿದ್ದು, ಮೇಲ್ಭಾಗದ ಒಂದು ಪಿನ್ ಮಾತ್ರ ಉದ್ದ ಮತ್ತು ದಪ್ಪವಾಗಿರುತ್ತದೆ. ಇದು ಕೇವಲ ವಿನ್ಯಾಸಕ್ಕಾಗಿ ಮಾಡಿದ್ದಲ್ಲ, ಇದರ ಹಿಂದೆ ಪ್ರಮುಖವಾದ ಸುರಕ್ಷತಾ ಕಾರಣವಿದೆ.
25
3-ಪಿನ್ ಪ್ಲಗ್‌ಗಳನ್ನು ಎಲ್ಲಿ ಬಳಸಲಾಗುತ್ತದೆ?
ಸಾಮಾನ್ಯವಾಗಿ ಫ್ರಿಜ್, ಎಸಿ, ಮೈಕ್ರೋವೇವ್ ಓವನ್ ಮತ್ತು ಗೀಸರ್‌ನಂತಹ ದೊಡ್ಡ ವಿದ್ಯುತ್ ಉಪಕರಣಗಳಿಗೆ 3-ಪಿನ್ ಪ್ಲಗ್ ಬಳಸಲಾಗುತ್ತದೆ. ಈ ಸಾಧನಗಳ ಹೊರಭಾಗವು ಹೆಚ್ಚಾಗಿ ಲೋಹದಿಂದ (Metal body) ಮಾಡಲ್ಪಟ್ಟಿರುತ್ತದೆ. ಒಂದು ವೇಳೆ ವೈರ್‌ಗಳು ಸವೆದು ಲೋಹದ ಬಾಡಿಗೆ ತಗುಲಿದರೆ ಅಥವಾ ಶಾರ್ಟ್ ಸರ್ಕ್ಯೂಟ್ ಸಂಭವಿಸಿದರೆ ಆ ಸಾಧನವನ್ನು ಮುಟ್ಟಿದವರಿಗೆ ಜೋರಾದ ಎಲೆಕ್ಟ್ರಿಕ್ ಶಾಕ್ ಹೊಡೆಯುವ ಅಪಾಯವಿರುತ್ತದೆ. ಈ ಅಪಾಯ ತಪ್ಪಿಸಲು 3-ಪಿನ್ ಪ್ಲಗ್ ಅಗತ್ಯ.
35
2-ಪಿನ್ ಪ್ಲಗ್‌ಗಳು ಯಾರಿಗೆ?
ನಮ್ಮ ಮೊಬೈಲ್ ಚಾರ್ಜರ್, ಟಿವಿ ಅಥವಾ ಟ್ರಿಮ್ಮರ್‌ಗಳಂತಹ ಸಾಧನಗಳಿಗೆ 2-ಪಿನ್ ಪ್ಲಗ್ ಇರುತ್ತದೆ. ಇವುಗಳ ಹೊರಭಾಗವು ಪ್ಲಾಸ್ಟಿಕ್‌ನಿಂದ ಮಾಡಲ್ಪಟ್ಟಿರುವುದರಿಂದ ಮತ್ತು ಇವು ಕಡಿಮೆ ವಿದ್ಯುತ್ ಬಳಸುವುದರಿಂದ ಇವುಗಳಿಗೆ ಅರ್ಥಿಂಗ್ ಅವಶ್ಯಕತೆ ಇರುವುದಿಲ್ಲ.
3-ಪಿನ್ ಪ್ಲಗ್‌ನಲ್ಲಿರುವ ಉದ್ದವಾದ ಪಿನ್ ಅನ್ನು 'ಅರ್ಥ್ ಪಿನ್' (Earth Pin) ಎಂದು ಕರೆಯಲಾಗುತ್ತದೆ. ನೀವು ಪ್ಲಗ್ ಅನ್ನು ಸಾಕೆಟ್‌ಗೆ ಹಾಕಿದಾಗ, ಉದ್ದವಿರುವ ಅರ್ಥ್ ಪಿನ್ ಎಲ್ಲಕ್ಕಿಂತ ಮೊದಲು ಒಳಗೆ ಹೋಗುತ್ತದೆ. ವಿದ್ಯುತ್ ಹರಿಯುವ ಪಿನ್‌ಗಳಾದ 'ಫೇಸ್' ಮತ್ತು 'ನ್ಯೂಟ್ರಲ್' ಸಂಪರ್ಕ ಹೊಂದುವ ಮೊದಲೇ ಸಾಧನಕ್ಕೆ ಅರ್ಥಿಂಗ್ ಸಂಪರ್ಕ ಸಿಗುತ್ತದೆ.
ಒಂದು ವೇಳೆ ಆ ಉಪಕರಣದಲ್ಲಿ ಮೊದಲೇ ವಿದ್ಯುತ್ ಸೋರಿಕೆ (Current leakage) ಇದ್ದರೆ, ನೀವು ಅದನ್ನು ಮುಟ್ಟುವ ಮೊದಲೇ ಆ ಹೆಚ್ಚುವರಿ ವಿದ್ಯುತ್ ಸುರಕ್ಷಿತವಾಗಿ ಭೂಮಿಗೆ ಸೇರುತ್ತದೆ. ಇದರಿಂದ ನಮಗೆ ಶಾಕ್ ಹೊಡೆಯುವುದು ತಪ್ಪುತ್ತದೆ.
55
ಆ ಪಿನ್ ದಪ್ಪವಾಗಿರುವುದು ಏಕೆ?
ಪಿನ್ ದಪ್ಪವಾಗಿದ್ದರೆ ಅದನ್ನು ನಾವು ತಿಳಿಯದೇ ಸಾಕೆಟ್‌ನ 'ಲೈವ್' ಅಥವಾ 'ನ್ಯೂಟ್ರಲ್' ಸ್ಲಾಟ್‌ಗಳಿಗೆ ಹಾಕಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಅದು ಸಣ್ಣದಾಗಿದ್ದರೆ, ತಪ್ಪಾಗಿ ಹಾಕುವ ಸಾಧ್ಯತೆ ಇರುತ್ತದೆ, ಇದರಿಂದ ಸಾಧನ ಹಾಳಾಗಬಹುದು. ವಿಜ್ಞಾನದ ನಿಯಮದಂತೆ, ವೈರ್ ಅಥವಾ ಪಿನ್ ಎಷ್ಟು ದಪ್ಪವಾಗಿರುತ್ತದೆಯೋ ಅದರ ವಿದ್ಯುತ್ ಪ್ರತಿರೋಧ ಅಷ್ಟು ಕಡಿಮೆಯಿರುತ್ತದೆ. ಪ್ರತಿರೋಧ ಕಡಿಮೆಯಿದ್ದಷ್ಟೂ ವಿದ್ಯುತ್ ವೇಗವಾಗಿ ಪ್ರವಹಿಸುತ್ತದೆ. ಹೀಗಾಗಿ ಶಾರ್ಟ್ ಸರ್ಕ್ಯೂಟ್ ಆದಾಗ ಸೋರಿಕೆಯಾದ ವಿದ್ಯುತ್ ಯಾವುದೇ ಅಡೆತಡೆಯಿಲ್ಲದೆ, ಕ್ಷಣಾರ್ಧದಲ್ಲಿ ಭೂಮಿಗೆ ಸೇರಿ ಅಪಘಾತಗಳನ್ನು ತಪ್ಪಿಸುತ್ತದೆ. ಹೀಗೆ ನಮಗೆ ಸಣ್ಣದಾಗಿ ಕಾಣುವ ಪ್ಲಗ್ ವಿನ್ಯಾಸವು ನಮ್ಮ ಮನೆಯಲ್ಲಿ ವಿದ್ಯುತ್ ಅಪಘಾತಗಳು ಸಂಭವಿಸದಂತೆ ರಕ್ಷಾ ಕವಚವಾಗಿ ಕಾರ್ಯನಿರ್ವಹಿಸುತ್ತದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.