ಮಾನವಕುಲದ ಪೂರ್ವಜರು ಮರಿ ಹಾಕುವ ಬದಲು ಮೊಟ್ಟೆ ಇಡುತ್ತಿದ್ದರೇ? 250 ಮಿಲಿಯನ್ ವರ್ಷಗಳ ಹಿಂದಿನ ಕೌತುಕ ಬಿಚ್ಚಿಟ್ಟ ಸೈಂಟಿಸ್ಟ್!

Published : Apr 15, 2026, 11:26 AM IST

ದಕ್ಷಿಣ ಆಫ್ರಿಕಾದಲ್ಲಿ ವಿಜ್ಞಾನಿಗಳು 'ಲಿಸ್ಟ್ರೋಸಾರಸ್' (Lystrosaurus) ಎಂಬ ಸಸ್ತನಿ ಪೂರ್ವಜ ಜೀವಿಗಳ ಭ್ರೂಣದ ಪಳೆಯುಳಿಕೆಯನ್ನು ಪತ್ತೆಹಚ್ಚಿದ್ದಾರೆ. ಇದು ಸಸ್ತನಿಗಳ ಪೂರ್ವಜರು ಮರಿ ಹಾಕುವ ಮೊದಲು ಮೊಟ್ಟೆಗಳನ್ನು ಇಡುತ್ತಿದ್ದರು ಎಂಬುದಕ್ಕೆ ಸಿಕ್ಕಿರುವ ವಿಶ್ವದ ಅತ್ಯಂತ ಹಳೆಯ ಪುರಾವೆಯಾಗಿದೆ.

PREV
14
ಮಾನವಕುಲದ ಪೂರ್ವಜರು ಮರಿ ಹಾಕುವ ಬದಲು ಮೊಟ್ಟೆಗಳನ್ನಿಡುತ್ತಿದ್ದರೇ?

ಸುಮಾರು 280 ರಿಂದ 200 ಮಿಲಿಯನ್ ವರ್ಷಗಳ ಹಿಂದೆ, ಭೂಮಿಯ ಮೇಲೆ ವಿಚಿತ್ರ ಪ್ರಾಣಿಗಳ ಗುಂಪೊಂದು ವಾಸಿಸುತ್ತಿತ್ತು. ಇವುಗಳನ್ನೇ ವಿಜ್ಞಾನಿಗಳು 'ಥೆರಪ್ಸಿಡ್‌ಗಳು' (Therapsids) ಎಂದು ಕರೆಯುತ್ತಾರೆ. ಇಂದು ನಾವು ನೋಡುವ ಸಸ್ತನಿಗಳು ಮತ್ತು ಸ್ವತಃ ಮಾನವಕುಲ ವಿಕಸನಗೊಂಡಿರುವುದು ಇದೇ ಥೆರಪ್ಸಿಡ್‌ಗಳಿಂದ! ಅಂದರೆ, ಇವು ನಮ್ಮ ಆದಿ ಪೂರ್ವಜರು. ದಕ್ಷಿಣ ಆಫ್ರಿಕಾದಲ್ಲಿ 150 ವರ್ಷಗಳ ಹಿಂದೆಯೇ ಇವುಗಳ ಪಳೆಯುಳಿಕೆಗಳು ಪತ್ತೆಯಾಗಿದ್ದರೂ, ಒಂದು ದೊಡ್ಡ ರಹಸ್ಯ ಮಾತ್ರ ವಿಜ್ಞಾನಿಗಳನ್ನು ಕಾಡುತ್ತಲೇ ಇತ್ತು.

ದಕ್ಷಿಣ ಆಫ್ರಿಕಾದ ಖ್ಯಾತ ಪಳೆಯುಳಿಕೆ ಹಂಟರ್ ಜೇಮ್ಸ್ ಕಿಚಿಂಗ್, ಕರೂ ಪ್ರಾಂತ್ಯದ ಬಂಡೆಗಳ ನಡುವೆ ಸಾವಿರಾರು ಥೆರಪ್ಸಿಡ್ ಪಳೆಯುಳಿಕೆಗಳನ್ನು ಪತ್ತೆಹಚ್ಚಿದ್ದರು. ಅವರು ಡೈನೋಸಾರ್ ಮೊಟ್ಟೆಗಳನ್ನೇನೋ ಕಂಡುಹಿಡಿದರು, ಆದರೆ ಅವರಿಗೆ ಒಂದೇ ಒಂದು ಥೆರಪ್ಸಿಡ್ ಮೊಟ್ಟೆ ಸಿಗಲಿಲ್ಲ. 'ಇವು ಸಸ್ತನಿಗಳಂತೆ ನೇರವಾಗಿ ಮರಿ ಹಾಕುತ್ತಿದ್ದವೇ (Viviparous) ಅಥವಾ ಮೊಟ್ಟೆ ಇಡುತ್ತಿದ್ದವೇ?' ಎಂಬ ಪ್ರಶ್ನೆ ಕಿಚಿಂಗ್ ಅವರನ್ನು ಕಾಡತೊಡಗಿತ್ತು. ಇಂದಿಗೂ ಪ್ಲಾಟಿಪಸ್‌ನಂತಹ ಕೆಲವು ಸಸ್ತನಿಗಳು ಮೊಟ್ಟೆ ಇಡುವುದರಿಂದ, ಇವು ಕೂಡ ಮೊಟ್ಟೆ ಇಡಲೇಬೇಕು ಎಂಬ ತರ್ಕವಿತ್ತು. ಆದರೆ ಪುರಾವೆ ಮಾತ್ರ ಇರಲಿಲ್ಲ.

24
20 ವರ್ಷಗಳ ನಿಗೂಢತೆಗೆ ಸಿಕ್ಕಿತು ಉತ್ತರ!

ಕೊನೆಗೂ ಆ ಸಂಶೋಧನೆಗೆ ಜಯ ಸಿಕ್ಕಿದೆ! 2008ರಲ್ಲಿ ದಕ್ಷಿಣ ಆಫ್ರಿಕಾದ ಓವಿಸ್ಟನ್ ಬಳಿ ಪ್ಯಾಲಿಯಂಟಾಲಜಿಸ್ಟ್ ಜಾನ್ ನ್ಯಾಫುಲಿ ಅವರಿಗೆ ಒಂದು ವಿಶೇಷ ಪಳೆಯುಳಿಕೆ ಸಿಕ್ಕಿತ್ತು. ಇದು ಸುಮಾರು 250 ಮಿಲಿಯನ್ ವರ್ಷಗಳ ಹಿಂದೆ ಬದುಕಿದ್ದ 'ಲಿಸ್ಟ್ರೋಸಾರಸ್' (Lystrosaurus) ಎಂಬ ಪ್ರಾಣಿಗೆ ಸೇರಿದ್ದು. ಹಂದಿಯಂತಹ ದೇಹ, ಆಮೆಯಂತಹ ಕೊಕ್ಕು ಮತ್ತು ಎರಡು ದಂತಗಳನ್ನು ಹೊಂದಿದ್ದ ಈ ಪ್ರಾಣಿ ನೋಡಲು ವಿಚಿತ್ರವಾಗಿತ್ತು. ಆದರೆ, ಇದು ಮೊಟ್ಟೆಯ ಪಳೆಯುಳಿಕೆಯೋ ಅಥವಾ ಮರಿಯದ್ದೋ ಎಂಬುದು ಕಳೆದ 20 ವರ್ಷಗಳಿಂದ ರಹಸ್ಯವಾಗಿಯೇ ಉಳಿದಿತ್ತು.

34
ಚಿಪ್ಪಿಲ್ಲದ ಮೊಟ್ಟೆಯೊಳಗೆ ಸುರುಳಿಯಾದ ಭ್ರೂಣ!

ಈ ಪಳೆಯುಳಿಕೆಯಲ್ಲಿ ಮೊಟ್ಟೆಯ ಗಟ್ಟಿಯಾದ ಮೇಲ್ಭಾಗದ ಚಿಪ್ಪು (Shell) ಇರಲಿಲ್ಲ. ಹಾಗಾಗಿ ಇದು ಮೊಟ್ಟೆ ಎಂದು ಸಾಬೀತುಪಡಿಸುವುದು ಕಷ್ಟವಾಗಿತ್ತು. ಆದರೆ, ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಪರಿಶೀಲಿಸಿದಾಗ, ಅದರೊಳಗೆ ಸುರುಳಿಯಾಕಾರದಲ್ಲಿ ಮಲಗಿದ್ದ ಪುಟ್ಟ ಭ್ರೂಣ (Embryo) ಪತ್ತೆಯಾಗಿದೆ. ವಿಜ್ಞಾನಿಗಳ ಪ್ರಕಾರ, ಡೈನೋಸಾರ್‌ಗಳಂತೆ ಇವುಗಳ ಮೊಟ್ಟೆಗಳು ಗಟ್ಟಿಯಾಗಿರದೆ, ಹಲ್ಲಿ ಅಥವಾ ಹಾವಿನ ಮೊಟ್ಟೆಗಳಂತೆ ಚರ್ಮದಂತಹ ಮೃದುವಾದ ಪದರವನ್ನು ಹೊಂದಿದ್ದವು. ಕಾಲಕ್ರಮೇಣ ಆ ಪದರ ಕರಗಿ ಹೋಗಿದ್ದರಿಂದ ಕೇವಲ ಭ್ರೂಣ ಮಾತ್ರ ಕಲ್ಲಿನಂತೆ ಉಳಿದುಕೊಂಡಿದೆ.

44
ಸಸ್ತನಿಗಳ ವಿಕಸನದ ಮೇಲೆ ಹೊಸ ಬೆಳಕು ಈ ಆವಿಷ್ಕಾರ

ಈ ಆವಿಷ್ಕಾರವು ವಿಜ್ಞಾನ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದೆ. ನಮ್ಮ ಪೂರ್ವಜರಾದ ಥೆರಪ್ಸಿಡ್‌ಗಳು ನಿಜವಾಗಿಯೂ ಮೊಟ್ಟೆ ಇಡುತ್ತಿದ್ದರು ಎಂಬುದು ಈಗ ಅಧಿಕೃತವಾಗಿ ಸಾಬೀತಾಗಿದೆ. ಈ ಪುಟ್ಟ ಭ್ರೂಣವು ಲಕ್ಷಾಂತರ ವರ್ಷಗಳ ಹಿಂದಿನ ಪ್ರಾಣಿಗಳ ಸಂತಾನೋತ್ಪತ್ತಿ ಕ್ರಮ ಮತ್ತು ಅವುಗಳು ಪರಿಸರಕ್ಕೆ ಹೇಗೆ ಹೊಂದಿಕೊಂಡಿದ್ದವು ಎಂಬ ಮಾಹಿತಿಯನ್ನು ತೆರೆದಿಟ್ಟಿದೆ. ಹಂದಿಯ ಗಾತ್ರದ, ದಂತಗಳಿದ್ದ ಆ ಪೂರ್ವಜ ಪ್ರಾಣಿ ಹೇಗೆ ಮೊಟ್ಟೆಯೊಡೆದು ಹೊರಬರುತ್ತಿತ್ತು ಎಂಬುದು ಈಗ ವಿಜ್ಞಾನಿಗಳ ಮುಂದಿರುವ ಕುತೂಹಲಕಾರಿ ಅಧ್ಯಯನ ವಿಷಯ.

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Photos on
click me!

Recommended Stories